ನವದೆಹಲಿ: ದೇಶದ ಯಾವುದೇ ನಾಗರಿಕನು ತಾರತಮ್ಯವಿಲ್ಲದೆ ಅಭಿವೃದ್ಧಿಯ ಪ್ರಯೋಜನಗಳನ್ನು ಪಡೆಯುವ ಹಾದಿಯಲ್ಲಿ ದೇಶ ಮುಂದೆ ಸಾಗುತ್ತಿದೆ ಎಂದು ಪ್ರಧಾನಿ ಮೋದಿ ಹೇಳಿದರು.
ವಿಡಿಯೋ ಕಾನ್ಫರೆನ್ಸ್ ಮೂಲಕ ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದ ಶತಮಾನೋತ್ಸವ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಕೊರೊನಾ ಕಾಲದಲ್ಲಿ ಅಲಿಗಢ ಮುಸ್ಲಿಂ ವಿವಿ ಸಮಾಜಕ್ಕೆ ನೀಡಿದ ಕೊಡುಗೆ ಸ್ಮರಣೀಯ. ಅಲಿಗಢ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ವಿಶ್ವದೆಲ್ಲೆಡೆ ಭಾರತದ ಸಂಸ್ಕೃತಿಯನ್ನು ಪಸರಿಸಿದ್ದು, ಸಮಾಜ ಹಾಗೂ ದೇಶಕ್ಕೆ ಈ ವಿಶ್ವವಿದ್ಯಾಲಯ ನೀಡಿದ ಕೊಡುಗೆ ಸ್ಮರಣೀಯ ಎಂದು ಮೋದಿ ಶ್ಲಾಘಿಸಿದರು.
ಏಕ್ ಭಾರತ್, ಶ್ರೇಷ್ಠ ಭಾರತ್: ದೇಶದಲ್ಲಿ ವೈವಿಧ್ಯತೆಯ ಈ ಶಕ್ತಿಯನ್ನು ನಾವು ಮರೆಯಬಾರದು. ಯಾವುದೇ ಕಾರಣಕ್ಕೂ ಅದು ದುರ್ಬಲಗೊಳ್ಳಬಾರದು. ‘ಏಕ್ ಭಾರತ್, ಶ್ರೇಷ್ಠ ಭಾರತ್’ ಮನೋಭಾವ ದಿನದಿಂದ ದಿನಕ್ಕೆ ಬಲಗೊಳ್ಳುತ್ತದೆ ಎಂದು ಖಚಿತಪಡಿಸಿಕೊಳ್ಳಲು ನಾವು ಒಟ್ಟಾಗಿ ಕೆಲಸ ಮಾಡಬೇಕು ಎಂದು ಪ್ರಧಾನಿ ದೇಶವಾಸಿಗಳಿಗೆ ಕರೆ ನೀಡಿದರು.
ಎಎಂಯು ಕ್ಯಾಂಪಸ್ 'ಮಿನಿ ಇಂಡಿಯಾ'ದಂತಿದೆ: ಎಎಂಯು ಕ್ಯಾಂಪಸ್ ಸ್ವತಃ ಒಂದು ನಗರದಂತಿದೆ ಎಂದು ಅನೇಕ ಜನ ನನಗೆ ಹೇಳಿದ್ದಾರೆ. ನಾವು ವಿವಿಧ ಇಲಾಖೆಗಳು, ಹಾಸ್ಟೆಲ್‌ಗಳು, ಸಾವಿರಾರು ಶಿಕ್ಷಕರು ಮತ್ತು ಪ್ರಾಧ್ಯಾಪಕರ ನಡುವೆ ಪುಟ್ಟ ಭಾರತವನ್ನು ನೋಡುತ್ತೇವೆ. ನಾವು ಇಲ್ಲಿ ನೋಡುವ ವೈವಿಧ್ಯತೆಯು ಈ ವಿಶ್ವವಿದ್ಯಾಲಯದ ಶಕ್ತಿ ಮಾತ್ರವಲ್ಲ ಇಡೀ ರಾಷ್ಟ್ರದ ಶಕ್ತಿ ಎಂದರು.
ಓದಿ:ಚಳಿಗೆ ಉತ್ತರ ಭಾರತ ತತ್ತರ : ದೆಹಲಿಯಲ್ಲಿ ಮುಂದಿನ ನಾಲ್ಕು ದಿನಗಳ ಕಾಲ ಶೀತಗಾಳಿ ಸಾಧ್ಯತೆ
ಮುಸ್ಲಿಂ ಮಹಿಳೆಯರ ಶಿಕ್ಷಣಕ್ಕಾಗಿ ನಿರಂತರ ಶ್ರಮ: ಮುಸ್ಲಿಂ ಬಾಲಕಿಯರಲ್ಲಿ ಶಾಲೆ ಬಿಡುವವರ ಪ್ರಮಾಣ 70% ಕ್ಕಿಂತ ಹೆಚ್ಚಿತ್ತು. ಮತ್ತು ಈ ಪರಿಸ್ಥಿತಿ 70 ವರ್ಷಗಳವರೆಗೆ ಮುಂದುವರೆಯಿತು. ಈ ಸನ್ನಿವೇಶಗಳಲ್ಲಿ, ಸರ್ಕಾರವು ಸ್ವಚ್ಛ ಭಾರತ್ ಮಿಷನ್ ಅನ್ನು ಪ್ರಾರಂಭಿಸಿತು. ಹಳ್ಳಿಗಳಲ್ಲಿ ಶೌಚಾಲಯಗಳನ್ನು ನಿರ್ಮಿಸಿತು ಮತ್ತು ಶಾಲೆಗೆ ಹೋಗುವ ಬಾಲಕಿಯರಿಗಾಗಿ ಶೌಚಾಲಯಗಳನ್ನು ನಿರ್ಮಿಸಿತು. ಸದ್ಯ ಶಾಲೆ ಬಿಡುವ ಮುಸ್ಲಿಂ ಬಾಲಕಿಯರ ಪ್ರಮಾಣ ಸುಮಾರು 30% ಕ್ಕೆ ಇಳಿದಿದೆ. ಮುಸ್ಲಿಂ ಮಹಿಳೆಯರ ಶಿಕ್ಷಣಕ್ಕಾಗಿ ಕೇಂದ್ರ ಸರ್ಕಾರ ನಿರಂತರವಾಗಿ ಶ್ರಮಿಸುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದರು.
ಯಾವುದೇ ಜಾತಿ-ಮತಗಳ ನಡುವೆ ವ್ಯತ್ಯಾಸ ಕಾಣುವುದಿಲ್ಲ: ಕೇಂದ್ರ ಸರ್ಕಾರ ಯಾವುದೇ ಜಾತಿ-ಮತಗಳ ನಡುವೆ ವ್ಯತ್ಯಾಸ ಕಾಣುವುದಿಲ್ಲ. ಕೇಂದ್ರ ಸರ್ಕಾರ ಪ್ರತಿಯೊಬ್ಬರೂ ಸಮಾನ ಅವಕಾಶಗಳನ್ನು ಪಡೆಯುತ್ತಾರೆ. ಇದರಿಂದ ಪ್ರತಿಯೊಬ್ಬರೂ ತಮ್ಮ ಕನಸುಗಳನ್ನು ಈಡೇರಿಸಿಕೊಳ್ಳತ್ತಾರೆ. ‘ಸಬ್ ಕಾ ಸಾಥ್, ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸ್’ ಇದರ ಹಿಂದಿನ ಮಂತ್ರ ಎಂದರು.
ಓದಿ: ಮತದಾನ ಚಿಹ್ನೆ ಬದಲಾವಣೆ : ಕೆ. ತುಪ್ಪದೂರಲ್ಲಿ ಕೆಲಕಾಲ ಮತದಾನ ಸ್ಥಗಿತ
ಎಎಂಯುಗೆ ಶುಭ ಹಾರೈಕೆ: ಅಲಿಗಢ ಮುಸ್ಲಿಂ ವಿವಿ ಶತಮಾನೋತ್ಸವ ಆಚರಿಸುತ್ತಿರುವುದು ಸಂತೋಷದ ವಿಷಯ. ಈ ಸಮಾರಂಭದಲ್ಲಿ ಭಾಗಿಯಾಗಿರುವುದಕ್ಕೆ ನನಗೆ ಸಂತಸವಾಗಿದೆ. ಸಮಾಜಕ್ಕೆ ಹಾಗೂ ದೇಶಕ್ಕೆ ಆಧುನಿಕ ಹಾಗೂ ವೈಜ್ಞಾನಿಕ ವಿಚಾರಧಾರೆಯನ್ನು ಎಎಂಯು ಕೊಡುಗೆ ಅಪಾರ. ಆಧುನಿಕ ಮುಸ್ಲಿಂ ಸಮಾಜ ನಿರ್ಮಾಣ ಮಾಡುವ ಗುರಿ ಹೊಂದಿರುವ ಎಎಂಯು ಕನಸು ನನಸಾಗಲಿ ಎಂದು ಹಾರೈಸಿದರು.
ಅಂಚೆ ಚೀಟಿ ಬಿಡುಗಡೆ: ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದ (ಎಎಂಯು) ಶತಮಾನೋತ್ಸವದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಅಂಚೆ ಚೀಟಿಯನ್ನು ಬಿಡುಗಡೆ ಮಾಡಿದರು.