ಚೆನ್ನೈ: ತಮಿಳುನಾಡಿನ ಚೆನ್ನೈನಲ್ಲಿ ಇಂದು ಅರ್ಜುನ್ ಮಾರ್ಕ್-1ಎ ಯುದ್ಧ ಟ್ಯಾಂಕ್ ಅನ್ನು ಪ್ರಧಾನಿ ನರೇಂದ್ರ ಮೋದಿ ಅವರು ಭೂಸೇನಾ ಮುಖ್ಯಸ್ಥ ಎಂ.ಎಂ. ನರವಣೆಗೆ ಹಸ್ತಾಂತರಿಸಿದ್ದಾರೆ.
ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಅಭಿವೃದ್ಧಿಪಡಿಸಿದ ಯುದ್ಧ ಟ್ಯಾಂಕ್ ಇದಾಗಿದ್ದು, ಇಂದು ಭಾರತೀಯ ಸೇನೆಗೆ ಸೇರ್ಪಡೆಯಾಗಿದೆ. 8,500 ಕೋಟಿ ರೂ. ವೆಚ್ಚದಲ್ಲಿ ಒಟ್ಟು 118 ಅರ್ಜುನ್ ಟ್ಯಾಂಕ್ಗಳನ್ನು ನಿರ್ಮಿಸಿ ಕೊಡುವಂತೆ ಡಿಆರ್‌ಡಿಒಗೆ ಭಾರತೀಯ ಸೇನೆ ಹೇಳಿತ್ತು. ಶತ್ರು ಸೈನ್ಯವನ್ನು ಹೊಡೆದುರುಳಿಸುವ ಈ ಟ್ಯಾಂಕ್ ಅನ್ನು ಅತ್ಯಾಧುನಿಕ ತಂತ್ರಜ್ಞಾನ ಬಳಸಿ ನಿರ್ಮಿಸಲಾಗಿದೆ.
-
Chennai: Prime Minister Narendra Modi hands over the Arjun Main Battle Tank (MK-1A) to Indian Army Chief General MM Naravane pic.twitter.com/XpYrM2ZLXB
— ANI (@ANI) February 14, 2021 " class="align-text-top noRightClick twitterSection" data="
">Chennai: Prime Minister Narendra Modi hands over the Arjun Main Battle Tank (MK-1A) to Indian Army Chief General MM Naravane pic.twitter.com/XpYrM2ZLXB
— ANI (@ANI) February 14, 2021Chennai: Prime Minister Narendra Modi hands over the Arjun Main Battle Tank (MK-1A) to Indian Army Chief General MM Naravane pic.twitter.com/XpYrM2ZLXB
— ANI (@ANI) February 14, 2021
ಇದನ್ನೂ ಓದಿ: ಪುಲ್ವಾಮಾ ದಾಳಿಗೆ 2 ವರ್ಷ: ಹುತಾತ್ಮ ಯೋಧರಿಗೆ ಶಾ, ರಾಹುಲ್ ಸೇರಿದಂತೆ ಗಣ್ಯರ ನಮನ
ಪಿಎಂ ಮೋದಿ ಅವರು ವಿವಿಧ ಯೋಜನೆಗಳನ್ನು ಉದ್ಘಾಟಿಸುವ ಸಲುವಾಗಿ ತಮಿಳುನಾಡು ಹಾಗೂ ಕೇರಳ ರಾಜ್ಯಗಳ ಭೇಟಿಯಲ್ಲಿದ್ದಾರೆ. ಚೆನ್ನೈನಲ್ಲಿ ಟ್ಯಾಂಕ್ ಹಸ್ತಾಂತರದ ವೇಳೆ ತಮಿಳುನಾಡು ಮುಖ್ಯಮಂತ್ರಿ ಕೆ. ಪಳನಿಸ್ವಾಮಿ, ರಾಜ್ಯಪಾಲ ಬನ್ವರಿಲಾಲ್ ಪುರೋಹಿತ್ ಮತ್ತು ಉಪಮುಖ್ಯಮಂತ್ರಿ ಪನ್ನೀರ್ ಸೆಲ್ವಂ ಕೂಡ ಉಪಸ್ಥಿತರಿದ್ದರು.