ಗುಜರಾತ್: ಎರಡು ದಿನಗಳ ಭೇಟಿಗಾಗಿ ಶುಕ್ರವಾರ ಗುಜರಾತ್‌ಗೆ ಪ್ರಧಾನಿ ನರೇಂದ್ರ ಮೋದಿ ತೆರಳಲಿದ್ದಾರೆ. ಅವರಿಗೆ ವಿನೂತನವಾಗಿ ಸ್ವಾಗತ ಕೋರಲು ಹಲವು ಮಹಿಳೆಯರು 100 ಅಡಿ ಉದ್ದದ ಸ್ಟಿಕ್ಕರ್ (ಬಿಂದಿ) ನಿಂದ ಪೇಂಟಿಂಗ್ ಸಿದ್ಧಪಡಿಸಿದ್ದಾರೆ. ಕೇಂದ್ರ ಸರ್ಕಾರ ಆರಂಭಿಸಿರುವ ಆತ್ಮನಿರ್ಭರ್ ಭಾರತ್ ಎಂಬ ಸ್ವಯಂ ಉದ್ಯೋಗದ ಮೂಲಕ ಸುಮಾರು 6,000 ಮಹಿಳೆಯರು ಸ್ವಾವಲಂಬಿಗಳಾಗಿದ್ದಾರೆ. ಇದಕ್ಕಾಗಿ ಪ್ರಧಾನಿಗೆ ಈ ರೀತಿ ಕೃತಜ್ಞತೆ ಸಲ್ಲಿಸುತ್ತಿದ್ದಾರೆ.
ಜೂನ್ 17 ಮತ್ತು 18ರಂದು ಮೋದಿ ಗುಜರಾತ್‌ಗೆ ಭೇಟಿ ನೀಡುವರು. ಅಂದು ಸುಮಾರು 21,000 ಕೋಟಿ ರೂ.ವೆಚ್ಚದ ಹಲವು ಯೋಜನೆಗಳಿಗೆ ಮೋದಿ ಶಂಕುಸ್ಥಾಪನೆ ಹಾಗೂ ಉದ್ಘಾಟನೆ ನೆರವೇರಿಸಲಿದ್ದಾರೆ.
ಜೂನ್ 18ರಂದು ಪಾವಗಡ ಬೆಟ್ಟದ ಶ್ರೀ ಕಾಳಿಕಾ ಮಾತೆಯ ನವೀಕೃತ ದೇವಾಲಯವನ್ನು ಪ್ರಧಾನಿ ಉದ್ಘಾಟಿಸುವರು. ವಡೋದರಾದಲ್ಲಿ ಗುಜರಾತ್ ಗೌರವ್ ಅಭಿಯಾನ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ. ಅಂದೇ ಮೋದಿ ತಾಯಿಯ ಹುಟ್ಟುಹಬ್ಬವಿದ್ದು, ಅವರ ಆಶೀರ್ವಾದ ಪಡೆಯಲಿದ್ದಾರೆ.
ಇದನ್ನೂ ಓದಿ: ಜೂನ್ 18ರಂದು 100ನೇ ವಸಂತಕ್ಕೆ ಕಾಲಿಡಲಿದ್ದಾರೆ ಪ್ರಧಾನಿ ಮೋದಿ ತಾಯಿ ಹೀರಾಬೆನ್