ETV Bharat / bharat

'ನಾವು ಜಗತ್ತಿನಲ್ಲಿ ಯಾರಿಗಿಂತಲೂ ಕಡಿಮೆ ಇಲ್ಲ': ತೇಜಸ್ ಯುದ್ಧ ವಿಮಾನದಲ್ಲಿ ಹಾರಾಟ ನಡೆಸಿದ ಪ್ರಧಾನಿ ಮೋದಿ - ರಕ್ಷಣಾ ಉತ್ಪನ್ನಗಳ ಸ್ವದೇಶಿ ಉತ್ಪಾದನೆ

ಬೆಂಗಳೂರಿನ ಹೆಚ್‌ಎಎಲ್‌ಗೆ ಭೇಟಿ ನೀಡಿದ ಪ್ರಧಾನಿಯವರು ತೇಜಸ್ ಯುದ್ಧ ವಿಮಾನದಲ್ಲಿ ಹಾರಾಟ ನಡೆಸಿದರು. ತೇಜಸ್ ಒಂದು ಸ್ವದೇಶಿ ಲಘು ಯುದ್ಧ ವಿಮಾನವಾಗಿದ್ದು, ಯಾವುದೇ ಹವಾಮಾನದಲ್ಲೂ ಹಾರಬಲ್ಲದಾಗಿದೆ.

pm modi flown  pm modi flown in a tejas fighter  modi flown in a tejas fighter from bangalore  ತೇಜಸ್ ಯುದ್ಧ ವಿಮಾನದಲ್ಲಿ ಹಾರಾಟ ನಡೆಸಿದ ಪ್ರಧಾನಿ  ಯುದ್ಧ ವಿಮಾನದಲ್ಲಿ ಹಾರಾಟ ನಡೆಸಿದ ಪ್ರಧಾನಿ ಮೋದಿ  ನಾವು ಜಗತ್ತಿನಲ್ಲಿ ಯಾರಿಗಿಂತಲೂ ಕಡಿಮೆ ಇಲ್ಲ  ಬೆಂಗಳೂರಿನ ಎಚ್‌ಎಎಲ್‌ಗೆ ಭೇಟಿ ನೀಡಿದ ಪ್ರಧಾನಿ  ತೇಜಸ್ ಯುದ್ಧ ವಿಮಾನದಲ್ಲಿ ಹಾರಾಟ  ತೇಜಸ್ ಒಂದು ಸ್ವದೇಶಿ ಲಘು ಯುದ್ಧ ವಿಮಾನ  ಬೆಂಗಳೂರಿನ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್‌  ಯುದ್ಧ ವಿಮಾನ ತೇಜಸ್  ರಕ್ಷಣಾ ಉತ್ಪನ್ನಗಳ ಸ್ವದೇಶಿ ಉತ್ಪಾದನೆ  ಭಾರತೀಯ ವಾಯುಪಡೆ

author img

By ETV Bharat Karnataka Team

Published : Nov 25, 2023, 1:20 PM IST

Updated : Nov 25, 2023, 4:38 PM IST

ತೇಜಸ್ ಯುದ್ಧ ವಿಮಾನದಲ್ಲಿ ಹಾರಾಟ ನಡೆಸಿದ ಪ್ರಧಾನಿ ಮೋದಿ

ಬೆಂಗಳೂರು: ಬೆಂಗಳೂರಿನ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್‌ಗೆ (ಹೆಚ್‌ಎಎಲ್) ಭೇಟಿ ನೀಡಿದ ಸಂದರ್ಭದಲ್ಲಿ ಪ್ರಧಾನಿಯವರು ಯುದ್ಧ ವಿಮಾನ ತೇಜಸ್​​ನಲ್ಲಿ ಹಾರಾಟ ನಡೆಸಿದರು. ರಕ್ಷಣಾ ಉತ್ಪನ್ನಗಳ ಸ್ವದೇಶಿ ಉತ್ಪಾದನೆಗೆ ಮೋದಿ ಸರ್ಕಾರ ಒತ್ತು ನೀಡುತ್ತಲೇ ಇದೆ. ಭಾರತದಲ್ಲಿ ರಕ್ಷಣಾ ಉಪಕರಣಗಳ ಉತ್ಪಾದನೆ ಮತ್ತು ರಫ್ತಿಗೆ ಅವರ ಸರ್ಕಾರವು ಹೇಗೆ ಉತ್ತೇಜನ ನೀಡಿದೆ ಎಂಬುದನ್ನು ಅವರು ಆಗಾಗ ಒತ್ತಿ ಹೇಳುತ್ತಿರುತ್ತಾರೆ.

ಟ್ವಿಟರ್‌ನಲ್ಲಿ ಬರೆದುಕೊಂಡಿರುವ ಪ್ರಧಾನಿ ಮೋದಿ, ಇಂದು ತೇಜಸ್‌ನಲ್ಲಿ ಹಾರುತ್ತಿರುವಾಗ, ನಮ್ಮ ಕಠಿಣ ಪರಿಶ್ರಮ ಮತ್ತು ಸಮರ್ಪಣಾ ಮನೋಭಾವದಿಂದಾಗಿ ನಾವು ಸ್ವಾವಲಂಬನೆಯ ಕ್ಷೇತ್ರದಲ್ಲಿ ವಿಶ್ವದ ಯಾರಿಗಿಂತ ಕಡಿಮೆಯಿಲ್ಲ ಎಂದು ನಾನು ಬಹಳ ಹೆಮ್ಮೆಯಿಂದ ಹೇಳಬಲ್ಲೆ. ಭಾರತೀಯ ವಾಯುಪಡೆ, DRDO ಮತ್ತು HAL ಹಾಗೂ ಎಲ್ಲಾ ಭಾರತೀಯರಿಗೆ ಹೃತ್ಪೂರ್ವಕ ಅಭಿನಂದನೆಗಳು ಎಂದು ಬರೆದುಕೊಂಡಿದ್ದಾರೆ.

  • मैं आज तेजस में उड़ान भरते हुए अत्यंत गर्व के साथ कह सकता हूं कि हमारी मेहनत और लगन के कारण हम आत्मनिर्भरता के क्षेत्र में विश्व में किसी से कम नहीं हैं। भारतीय वायुसेना, DRDO और HAL के साथ ही समस्त भारतवासियों को हार्दिक शुभकामनाएं। pic.twitter.com/xWJc2QVlWV

    — Narendra Modi (@narendramodi) November 25, 2023 " class="align-text-top noRightClick twitterSection" data=" ">

ಅನೇಕ ದೇಶಗಳು ತೇಜಸ್ ಖರೀದಿಸಲು ಬಯಸುತ್ತವೆ: ತೇಜಸ್ ಲಘು ಯುದ್ಧ ವಿಮಾನವನ್ನು ಖರೀದಿಸಲು ಹಲವಾರು ದೇಶಗಳು ಆಸಕ್ತಿ ತೋರಿಸಿವೆ ಮತ್ತು US ರಕ್ಷಣಾ ದೈತ್ಯ GE ಏರೋಸ್ಪೇಸ್ MK-II ತೇಜಸ್‌ಗಾಗಿ ಜಂಟಿ ಎಂಜಿನ್‌ಗಳನ್ನು ಉತ್ಪಾದಿಸಲು HAL ನೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿತ್ತು. 2022-2023ರ ಆರ್ಥಿಕ ವರ್ಷದಲ್ಲಿ ಭಾರತದ ರಕ್ಷಣಾ ರಫ್ತು ಸಾರ್ವಕಾಲಿಕ ಗರಿಷ್ಠ 15,920 ಕೋಟಿ ರೂ.ಗೆ ತಲುಪಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಈ ವರ್ಷದ ಏಪ್ರಿಲ್‌ನಲ್ಲಿ ಹೇಳಿದ್ದರು. ಇದು ದೇಶಕ್ಕೆ ಅಪೂರ್ವ ಸಾಧನೆಯಾಗಿದೆ ಎಂದು ಹೇಳಿದ್ದರು.

  • Successfully completed a sortie on the Tejas. The experience was incredibly enriching, significantly bolstering my confidence in our country's indigenous capabilities, and leaving me with a renewed sense of pride and optimism about our national potential. pic.twitter.com/4aO6Wf9XYO

ತೇಜಸ್‌ನ ವೈಶಿಷ್ಟ್ಯಗಳೇನು?: ತೇಜಸ್ ಒಂದು ಸ್ವದೇಶಿ ಲಘು ಯುದ್ಧ ವಿಮಾನವಾಗಿದ್ದು, ಯಾವುದೇ ಹವಾಮಾನದಲ್ಲೂ ಹಾರಬಲ್ಲದು. ಇದು ಇಬ್ಬರು ಪೈಲಟ್‌ಗಳಿರುವ ಫೈಟರ್ ಜೆಟ್. ಇದನ್ನು LiFT ಎಂದು ಕರೆಯಲಾಗುತ್ತದೆ. ಅಂದರೆ ಲೀಡ್-ಇನ್ ಫೈಟರ್ ಟ್ರೈನರ್. ವಾಯುಪಡೆಯು ಹೆಚ್‌ಎಎಲ್‌ನಿಂದ 123 ತೇಜಸ್ ವಿಮಾನಗಳನ್ನು ಆರ್ಡರ್ ಮಾಡಿದ್ದು, ಅದರಲ್ಲಿ 26 ವಿಮಾನಗಳನ್ನು ವಿತರಿಸಲಾಗಿದೆ. ಇವೆಲ್ಲವೂ ತೇಜಸ್ ಮಾರ್ಕ್-1. ಮುಂಬರುವ ದಿನಗಳಲ್ಲಿ ಉಳಿದ ತೇಜಸ್​ ವಿಮಾನಗಳನ್ನು 2024 ಮತ್ತು 2028 ರ ನಡುವೆ ವಿತರಿಸಲಾಗುವ ಈ ವಿಮಾನಗಳ ಹೆಚ್ಚಿನ ಅಪ್‌ಗ್ರೇಡ್ ಆವೃತ್ತಿಗಳನ್ನು ಹೆಚ್‌ಎಎಲ್ ವಾಯುಪಡೆಗೆ ಹಸ್ತಾಂತರಿಸಲಿದೆ.

ಪ್ರಧಾನಿಯವರ ಆಗಮನದ ಹಿನ್ನೆಲೆಯಲ್ಲಿ ಹೆಚ್‌ಎಎಲ್ ಸುತ್ತಮುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಾಗಿದ್ದು, ವೈಟ್‌ಫೀಲ್ಡ್ ಡಿಸಿಪಿ ನೇತೃತ್ವದಲ್ಲಿ 4 ಎಸಿಪಿ, 8 ಇನ್ಸ್​ಪೆಕ್ಟರ್ ಸೇರಿದಂತೆ 500 ಪೊಲೀಸರನ್ನು ಸ್ಥಳದಲ್ಲಿ ನಿಯೋಜಿಸಲಾಗಿದೆ.

ಓದಿ: ಬೆಂಗಳೂರಿಗೆ ಪ್ರಧಾನಿ ನರೇಂದ್ರ ಮೋದಿ ಆಗಮನ: ಹೆಚ್ಎಎಲ್​ನ ಕಾರ್ಯಕ್ರಮದಲ್ಲಿ ಭಾಗಿ

Last Updated : Nov 25, 2023, 4:38 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.