ETV Bharat / bharat

ಮುಂಬೈನಲ್ಲಿ ಎರಡು ವಂದೇ ಭಾರತ್​ ರೈಲುಗಳಿಗೆ ಪ್ರಧಾನಿ ಮೋದಿ ಚಾಲನೆ - ಪ್ರಧಾನಿ ನರೇಂದ್ರ ಮೋದಿ ಅವರು ಚಾಲನೆ

ಮುಂಬೈ-ಸೋಲಾಪುರ ಹಾಗೂ ಮುಂಬೈ-ಸಾಯಿನಗರ್​ ಶಿರಡಿ ನಗರದಲ್ಲಿ ಸಂಚರಿಸುವ ಎರಡು ನವೀಕೃತ ಮಾದರಿಯ ವಂದೇ ಭಾರತ್​ ರೈಲಿಗೆ ಇಂದು ಚಾಲನೆ ನೀಡಲಾಗಿದೆ.

ಮುಂಬೈನಲ್ಲಿ ಎರಡು ವಂದೇ ಭಾರತ್​ ರೈಲಿಗೆ ಪ್ರಧಾನಿ ಚಾಲನೆ
two-vande-bharat-train-introduce-in-mumbai-pm-modi-flags-off
author img

By

Published : Feb 10, 2023, 5:11 PM IST

ಮುಂಬೈ: ಎರಡು ಹೊಸ ವಂದೇ ಭಾರತ್​ ರೈಲುಗಳಿಗೆ ಪ್ರಧಾನಿ ನರೇಂದ್ರ ಮೋದಿ ಇಂದು ಮುಂಬೈನಲ್ಲಿ ಚಾಲನೆ ನೀಡಿದರು. ಛತ್ರಪತಿ ಶಿವಾಜಿ ಮಹಾರಾಜ ಟರ್ಮಿನಸ್​ನಲ್ಲಿ ನಡೆದ ಕಾರ್ಯಕ್ರಮದಲ್ಲಿ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್​​, ಮಹಾರಾಷ್ಟ್ರ ಸಿಎಂ ಏಕನಾಥ ಶಿಂಧೆ ಮತ್ತು ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್​ ಇದ್ದರು.

ಯಾರಿಗೆ ಅನುಕೂಲ?: ಮುಂಬೈ-ಸೋಲಾಪುರ ಹಾಗೂ ಮುಂಬೈ-ಸಾಯಿನಗರ್​ ಶಿರಡಿ ನಗರದಲ್ಲಿ ಹೊಸ ಮತ್ತು ನವೀಕೃತ ಮಾದರಿಯ ವಂದೇ ಭಾರತ್​ ಎಕ್ಸ್​ಪ್ರೆಸ್​ ರೈಲುಗಳು ಸಂಚರಿಸಲಿವೆ. ಈ ಮೂಲಕ ಒಂಭತ್ತನೇ ವಂದೇ ಭಾರತ್​ ಟ್ರೈನ್​ ಮುಂಬೈ-ಸೋಲಾಪುರ ಮಾರ್ಗದಲ್ಲಿ ಸಂಚರಿಸಲಿದೆ. ಇದರಿಂದ ಸಿದ್ದೇಶ್ವರ, ಅಕ್ಕಲಕೋಟ್​, ತುಲ್ಜಪುರ್​, ಪಂಡ್ರಾಪುರಗೆ ಸಂಚರಿಸಲಿರುವ ಯಾತ್ರಾರ್ಥಿಗಳಿಗೆ ಅನುಕೂಲವಾಗಲಿದೆ.

ಮಹಾರಾಷ್ಟ್ರ ಸಿಎಂ ಏಕಾನಥ್​ ಶಿಂಧೆ ಮಾತನಾಡಿ, ಕೇಂದ್ರ ಸರ್ಕಾರ ಬಜೆಟ್​ನಲ್ಲಿ ಮಹಾರಾಷ್ಟ್ರಕ್ಕೆ ಏನು ನೀಡಿದೆ ಎಂದು ಕೆಲವರು ಪ್ರಶ್ನಿಸಿದ್ದಾರೆ. ಅವರು ಸರಿಯಾಗಿ ಬಜೆಟ್ ಪ್ರತಿಯನ್ನು ಓದಿಲ್ಲ ಎನ್ನಿಸುತ್ತದೆ. ರಾಜ್ಯದಲ್ಲಿ ರೈಲ್ವೆ ಯೋಜನೆಗಾಗಿ ಇದೇ ಮೊದಲ ಬಾರಿಗೆ 13,500 ಕೋಟಿ ರೂ ನೀಡಲಾಗಿದೆ ಎಂದು ಹೇಳಿದರು.

ರೈಲ್ವೇ ಅಧಿಕಾರಿಗಳ ಪ್ರಕಾರ, ಈ ಮಾರ್ಗದಲ್ಲಿ ಸಂಚರಿಸಲು ಸೂಪರ್​ಫಾಸ್ಟ್​ ರೈಲುಗಳು 7 ಗಂಟೆ 55 ನಿಮಿಷ ತೆಗೆದುಕೊಂಡರೆ, ವಂದೇ ಭಾರತ್​ ರೈಲುಗಳು ಅದೇ ಪ್ರಯಾಣಕ್ಕೆ 6 ಗಂಟೆ 30 ನಿಮಿಷ ತೆಗೆದುಕೊಳ್ಳಲಿದೆ. ಈ ಮೂಲಕ ಪ್ರಯಾಣಿಕರಿಗೆ 1 ಗಂಟೆ 30 ನಿಮಿಷ ಉಳಿಯುತ್ತದೆ. ಇದು ಯಾತ್ರಾರ್ಥಿ ಕೇಂದ್ರ, ಜವಳಿ ಹಬ್​​, ಪ್ರವಾಸಿ ತಾಣ ಮತ್ತು ಶೈಕ್ಷಣಿಕ ತಾಣಗಳಿಗೆ ಸಂಪರ್ಕ ಕಲ್ಪಿಸುತ್ತದೆ. ಮುಂಬೈ ಮತ್ತು ಸಾಯಿನಗರ ಶಿರಡಿ ನಡುವೆ ಸಂಚರಿಸುವ 10ನೇ ವಂದೇ ಭಾರತ್​ ರೈಲು ಇದಾಗಿದೆ. ರೈಲು ಮಹಾರಾಷ್ಟ್ರದ ಪ್ರಮುಖ ಯಾತ್ರಾರ್ಥಿ ಕ್ಷೇತ್ರಗಳಾದ ಮಹಾರಾಷ್ಟ್ರದ ನಾಸಿಕ್​, ತ್ರಯಂಬಕೇಶ್ವರ, ಸಾಯಿನಗರ ಶಿರಡಿ ಮತ್ತು ಶನಿ ಶಿಂಗ್ನಾಪುರಕ್ಕೆ ಸಂಪರ್ಕ ಕಲ್ಪಿಸುತ್ತದೆ.

ವಿಶೇಷತೆ ಏನು?: ವಂದೇ ಭಾರತ್ ಸೆಮಿ ಹೈ ಸ್ಪೀಡ್​​ ರೈಲು ಗಂಟೆಗೆ 100 ಕಿ.ಮೀ ವೇಗವನ್ನು 52 ಸೆಕೆಂಡ್​ನಲ್ಲಿ ತಲುಪಲಿದೆ. ಗರಿಷ್ಠ ವೇಗ ಗಂಟೆಗೆ 180 ಕಿ.ಮೀ ಇದೆ. ಸುಧಾರಿತ ವಂದೇ ಭಾರತ್​ ರೈಲು 430 ಟನ್​ ಭಾರವಿದೆ. ಬೇಡಿಕೆಯ ಮೇರೆಗೆ ವೈ-ಫೈ ವ್ಯವಸ್ಥೆ ಕಲ್ಪಿಸಲಾಗಿದೆ. ಪ್ರತಿ ಕೋಚ್​ನಲ್ಲಿ 32 ಇಂಚಿನ ಸ್ಕ್ರೀನ್​ ನೀಡಲಾಗಿದೆ. ಪರಿಸರಸ್ನೇಹಿ ಎಸಿ ವ್ಯವಸ್ಥೆ ಕೂಡ ರೈಲಿನಲ್ಲಿದೆ. ​

ಇದನ್ನೂ ಓದಿ: ಐಪಿಎಸ್​ ಆಧಿಕಾರಿಗಳ ಸ್ಫೂರ್ತಿದಾಯಕ ಕಥೆ; ಕನಸನ್ನು ನನಸಾಗಿಸಿಕೊಂಡು ಗುರಿ ಮುಟ್ಟಿದ ಮಹಿಳಾ ಸಾಧಕಿಯರು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.