ನವದೆಹಲಿ: ಬೆಂಗಳೂರು-ಧಾರವಾಡ ನಡುವೆ ಸಂಚರಿಸಲಿರುವ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಮಧ್ಯಪ್ರದೇಶದ ರಾಜಧಾನಿ ಭೋಪಾಲ್ನ ರಾಣಿ ಕಮಲಪತಿ ರೈಲು ನಿಲ್ದಾಣದಿಂದ ಇಂದು ವರ್ಚುವಲ್ ಆಗಿ ಚಾಲನೆ ನೀಡಿದರು. ಇದರೊಂದಿಗೆ ಇತರ ನಾಲ್ಕು ವಂದೇ ಭಾರತ್ ರೈಲುಗಳಿಗೂ ಚಾಲನೆ ನೀಡಿದ್ದಾರೆ.
-
#WATCH | Madhya Pradesh: Prime Minister Narendra Modi reaches Rani Kamlapati Railway Station in Bhopal.
— ANI (@ANI) June 27, 2023 " class="align-text-top noRightClick twitterSection" data="
PM will flag off five new Vande Bharat Express trains from here. pic.twitter.com/ozRdD93A8l
">#WATCH | Madhya Pradesh: Prime Minister Narendra Modi reaches Rani Kamlapati Railway Station in Bhopal.
— ANI (@ANI) June 27, 2023
PM will flag off five new Vande Bharat Express trains from here. pic.twitter.com/ozRdD93A8l#WATCH | Madhya Pradesh: Prime Minister Narendra Modi reaches Rani Kamlapati Railway Station in Bhopal.
— ANI (@ANI) June 27, 2023
PM will flag off five new Vande Bharat Express trains from here. pic.twitter.com/ozRdD93A8l
ಬೆಂಗಳೂರು-ಧಾರವಾಡ, ಭೋಪಾಲ್-ಜಬಲ್ಪುರ್, ಖಜೂರಾಹೊ - ಭೋಪಾಲ್-ಇಂದೋರ್, ಮಡಗಾಂ-ಮುಂಬೈ, ಹತಿಯಾ-ಪಾಟ್ನಾ ರೈಲುಗಳಿಗೆ ಚಾಲನೆ ಸಿಕ್ಕಿದೆ. ಈ ಮೂಲಕ ದೇಶದಲ್ಲಿ ಒಟ್ಟು 23 ರೈಲುಗಳು ಕಾರ್ಯ ನಿರ್ವಹಿಸಲಿವೆ. ಬೆಂಗಳೂರು ಧಾರವಾಡ ರೈಲು ಕರ್ನಾಟಕದ ಎರಡನೇಯ ವಂದೇ ಭಾರತ್ ಎಕ್ಸ್‌ಪ್ರೆಸ್ ಆಗಿದೆ. ನಾಳೆ ಸಂಜೆ 5.45ಕ್ಕೆ ಬೆಂಗಳೂರಿನಿಂದ ರೈಲು ವೇಳಾ ಪಟ್ಟಿ ಪ್ರಕಾರ ಚಲಿಸಲಿದೆ.
-
#WATCH | PM Narendra Modi interacts with school students onboard the Vande Bharat train at Rani Kamlapati railway station in Bhopal, Madhya Pradesh pic.twitter.com/YkEtTdm8R3
— ANI (@ANI) June 27, 2023 " class="align-text-top noRightClick twitterSection" data="
">#WATCH | PM Narendra Modi interacts with school students onboard the Vande Bharat train at Rani Kamlapati railway station in Bhopal, Madhya Pradesh pic.twitter.com/YkEtTdm8R3
— ANI (@ANI) June 27, 2023#WATCH | PM Narendra Modi interacts with school students onboard the Vande Bharat train at Rani Kamlapati railway station in Bhopal, Madhya Pradesh pic.twitter.com/YkEtTdm8R3
— ANI (@ANI) June 27, 2023
ಧಾರವಾಡ - ಬೆಂಗಳೂರು ವಂದೇ ಭಾರತ್ ಎಕ್ಸ್‌ಪ್ರೆಸ್ ಕರ್ನಾಟಕದ ಪ್ರಮುಖ ನಗರಗಳಾದ ಧಾರವಾಡ, ಹುಬ್ಬಳ್ಳಿ, ದಾವಣಗೆರೆಯಿಂದ ರಾಜ್ಯ ರಾಜಧಾನಿ ಬೆಂಗಳೂರಿಗೆ ಸಂಪರ್ಕಿಸುತ್ತದೆ. ಇದು ಪ್ರವಾಸಿಗರು, ಕೈಗಾರಿಕೋದ್ಯಮಿಗಳು ಸೇರಿದಂತೆ ಜನರಿಗೆ ಅನುಕೂಲಕರವಾಗಿರಲಿದೆ. ಈ ಮಾರ್ಗದಲ್ಲಿ ಅತಿ ವೇಗದ ರೈಲಿಗೆ ಹೋಲಿಸಿದರೆ ಈ ರೈಲು ಸುಮಾರು ಮೂವತ್ತು ನಿಮಿಷಗಳಷ್ಟು ವೇಗವಾಗಿ ಚಲಿಸಲಿದೆ.
ಪ್ರಧಾನಿ ಚಾಲನೆ ನೀಡಿದ ರೈಲಿನಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹಾಗೂ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಧಾರವಾಡದಿಂದ - ಬೆಂಗಳೂರಿಗೆ ಪ್ರಯಾಣ ಬೆಳೆಸಿದರು.
-
Madhya Pradesh | PM Narendra Modi flags off five Vande Bharat trains from Rani Kamlapati Railway Station in Bhopal. pic.twitter.com/7DrfR28LGH
— ANI (@ANI) June 27, 2023 " class="align-text-top noRightClick twitterSection" data="
">Madhya Pradesh | PM Narendra Modi flags off five Vande Bharat trains from Rani Kamlapati Railway Station in Bhopal. pic.twitter.com/7DrfR28LGH
— ANI (@ANI) June 27, 2023Madhya Pradesh | PM Narendra Modi flags off five Vande Bharat trains from Rani Kamlapati Railway Station in Bhopal. pic.twitter.com/7DrfR28LGH
— ANI (@ANI) June 27, 2023
ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ Vande Bharat Express ರೈಲುಗಳು
- ನವದೆಹಲಿ - ವಾರಾಣಸಿ : ರೈಲು ಸಂಖ್ಯೆ 22435/22436 ದೆಹಲಿ ವಾರಣಾಸಿ ನಡುವಿನ 759 ಕಿ.ಮೀ ದೂರವನ್ನು 8 ಗಂಟೆಗಳಲ್ಲಿ ಕ್ರಮಿಸುತ್ತದೆ.
- ಹಜರತ್ ನಿಜಾಮುದ್ದೀನ್ - ರಾಣಿ ಕಮಲಾಪತಿ ನಿಲ್ದಾಣ (ಭೂಪಾಲ್): ರೈಲು ಸಂಖ್ಯೆ 20171/20172 ಹಜರತ್ ನಿಜಾಮುದ್ದೀನ್-ರಾಣಿ ಕಮಲಾಪತಿ ನಡುವೆ 702 ಕಿ.ಮಿ ಅಂತರ ಇದ್ದು, ಪ್ರಯಾಣದ ಸಮಯ 7.5 ಗಂಟೆ.
- ಚೆನ್ನೈ - ಕೊಯಮತ್ತೂರು : ರೈಲು ಸಂಖ್ಯೆ 20643/ 20644 ಕೊಯಮತ್ತೂರಿ-ಚೆನ್ನೈ ನಡುವೆ 497 ಕಿಲೋಮೀಟರ್ ಅಂತರವಿದ್ದು 5 ಗಂಟೆ 50 ನಿಮಿಷಗಳಲ್ಲಿ ಪ್ರಯಾಣವನ್ನು ಪೂರ್ಣಗೊಳಿಸುತ್ತದೆ.
- ವಿಶಾಖಪಟ್ಟಣಂ - ಸಿಕಂದರಾಬಾದ್ : ರೈಲು ಸಂಖ್ಯೆ 20833/ 20834 ವಿಶಾಖಪಟ್ಟಣಂ - ಸಿಕಂದರಾಬಾದ್ ನಡುವೆ 699 ಕಿಮೀ ದೂರ ಇದ್ದು 8.5 ಗಂಟೆಗಳಲ್ಲಿ ಕ್ರಮಿಸುತ್ತದೆ.
- ನವದೆಹಲಿ - ಅಂಬ್ ಅಂಡೌರಾ : ರೈಲು ಸಂಖ್ಯೆ 22447/22448 ನವದೆಹಲಿ - ಹಿಮಾಚಲ ಪ್ರದೇಶ ನಡುವೆ 437 ಕಿಮೀ ಅಂತರ ಇದ್ದು ಅಂಬ್ 5 ಗಂಟೆ 15 ನಿಮಿಷಗಳಲ್ಲಿ ಕ್ರಮಿಸುತ್ತದೆ.
- ಮುಂಬೈ-ಗಾಂಧಿನಗರ : ರೈಲು ಸಂಖ್ಯೆ 20901/ 20902 ಮುಂಬೈ - ಗಾಂಧಿನಗರ ನಡುವೆ 520 ಕಿ.ಮಿ ಅಂತರ ಇದ್ದು, 6 ಗಂಟೆ 20 ಪ್ರಯಾಣದ ಸಮಯವಾಗಿದೆ.
- ಅಜ್ಮೀರ್-ದೆಹಲಿ ಕ್ಯಾಂಟ್ : ರೈಲು ಸಂಖ್ಯೆ 20977 / 20978 ಅಜ್ಮೀರ್-ದೆಹಲಿ ಕ್ಯಾಂಟ್ ನಡುವೆ 428 ಕಿಮೀ ಅಂತರವಿದ್ದು, 5 ಗಂಟೆ 15 ಪ್ರಯಾಣದ ಸಮಯ.
- ನವದೆಹಲಿ - ಶ್ರೀ ಮಾತಾ ವೈಷ್ಣೋ ದೇವಿ ಕತ್ರಾ (ಜಮ್ಮು ಮತ್ತು ಕಾಶ್ಮೀರ): ರೈಲು ಸಂಖ್ಯೆ 22439/ 22440 ಮಾತಾ ವೈಷ್ಣೋ ದೇವಿ ಕತ್ರಾ - ನವದೆಹಲಿ ನಡುವೆ 655 ಕಿಲೋಮೀಟರ್ ದೂರ ಇದ್ದು 8 ಗಂಟೆಗಳಲ್ಲಿ ಕ್ರಮಿಸುತ್ತದೆ.
- ತಿರುಪತಿ-ಸಿಕಂದರಾಬಾದ್: ತಿರುಪತಿ-ಸಿಕಂದರಾಬಾದ್ 661 ಕಿ.ಮಿ ಅಂತರ ಇದ್ದು, 8:30 ಗಂಟೆಗಳಲ್ಲಿ ಕ್ರಮಿಸುತ್ತದೆ.
- ಬಿಲಾಸ್‌ಪುರ-ನಾಗ್‌ಪುರ : ರೈಲು ಸಂಖ್ಯೆ 20825/20826 ಬಿಲಾಸ್‌ಪುರ-ನಾಗ್ಪುರ ನಡುವೆ 413 ಕಿ.ಮಿ ಅಂತರ ಇದ್ದು, 5 ಗಂಟೆ 30 ನಿಮಿಷಗಳಲ್ಲಿ ಕ್ರಮಿಸುತ್ತದೆ.
- ಹೊಸ ಜಲ್ಪೈಗುರಿ-ಹೌರಾ : ರೈಲು ಸಂಖ್ಯೆ 22301 / 22302 ನ್ಯೂ ಜಲ್ಪೈಗುರಿ-ಹೌರಾ ನಡುವಿನ 561 ಕಿಮೀ ದೂರವನ್ನು 7 ಗಂಟೆ 30 ನಿಮಿಷಗಳಲ್ಲಿ ಕ್ರಮಿಸುತ್ತದೆ.
- ಸೋಲಾಪುರ-ಮುಂಬೈ : ರೈಲು ಸಂಖ್ಯೆ 22226/22227 ಸೊಲ್ಲಾಪುರ-ಮುಂಬೈ ನಡುವಿನ 455 ಕಿಲೋಮೀಟರ್ ದೂರವನ್ನು 6 ಗಂಟೆ 35 ನಿಮಿಷಗಳಲ್ಲಿ ಕ್ರಮಿಸುತ್ತದೆ.
- ಶಿರಡಿ-ಮುಂಬೈ : ರೈಲು ಸಂಖ್ಯೆ 22223/22224 ಶಿರಡಿ-ಮುಂಬೈ ನಡುವಿನ 343 ಕಿ.ಮಿ ದೂರವನ್ನು 5 ಗಂಟೆ 20 ನಿಮಿಷಗಳಲ್ಲಿ ಕ್ರಮಿಸುತ್ತದೆ.
- ಮೈಸೂರು-ಚೆನ್ನೈ : ರೈಲು ಸಂಖ್ಯೆ 20607/ 20608 ಮೈಸೂರು-ಚೆನ್ನೈ ನಡುವಿನ 560 ಕಿಲೋಮೀಟರ್ ದೂರವನ್ನು 6:30 ಗಂಟೆಗಳಲ್ಲಿ ಕ್ರಮಿಸುತ್ತದೆ.
- ಹೌರಾ-ಪುರಿ-ಹೌರಾ : ರೈಲು ಸಂಖ್ಯೆ 22895/22896 ಹೌರಾ-ಪುರಿಯ ನಡುವಿನ 500 ಕಿಮೀ ದೂರವನ್ನು 6.5 ಗಂಟೆಗಳಲ್ಲಿ ಕ್ರಮಿಸುತ್ತದೆ.
- ತಿರುವನಂತಪುರಂ - ಕಾಸರಗೋಡು : ರೈಲು ಸಂಖ್ಯೆ 20634/ 20633 ತಿರುವನಂತಪುರಂ ಸೆಂಟ್ರಲ್-ಕಾಸರಗೋಡು ಕಾರಿಡಾರ್ ನಡುವಿನ 586 ಕಿಮೀ ದೂರವನ್ನು 5 ಗಂಟೆಗಳಲ್ಲಿ ಕ್ರಮಿಸುತ್ತದೆ.
- ನ್ಯೂ ಜಲ್ಪೈಗುರಿ - ಗುವಾಹಟಿ : ರೈಲು ಸಂಖ್ಯೆ 22228/ 22227 ನ್ಯೂ ಜಲ್ಪೈಗುರಿ-ಗುವಾಹಟಿಗೆ ನಡುವಿನ 410 ಕಿಮೀ ದೂರವನ್ನು 6 ಗಂಟೆಗಳಲ್ಲಿ ಕ್ರಮಿಸುತ್ತದೆ.
- ದೆಹಲಿ-ಡೆಹ್ರಾಡೂನ್ : ರೈಲು ಸಂಖ್ಯೆ 22457/22458 ದೆಹಲಿ-ಡೆಹ್ರಾಡೂನ್ ನಡುವಿನ 314 ಕಿಮೀ ದೂರವನ್ನು 4 ಗಂಟೆ 45 ನಿಮಿಷಗಳಲ್ಲಿ ಕ್ರಮಿಸುತ್ತದೆ.
ಇದನ್ನೂ ಓದಿ: Vande Bharat: ಬೆಂಗಳೂರು - ಧಾರವಾಡ ವಂದೇ ಭಾರತ್ ರೈಲಿಗೆ ಇಂದು ಪ್ರಧಾನಿಯಿಂದ ಚಾಲನೆ: ಪ್ರಯಾಣದ ದರ ಎಷ್ಟು ಗೊತ್ತಾ?