ETV Bharat / bharat

ರಕ್ಷಾಬಂಧನ ವಿಶೇಷ: ಪ್ರಧಾನಿ ಸೇರಿ ಗಣ್ಯರಿಂದ ಶುಭಾಶಯ, ಕನ್ನಡದಲ್ಲೇ ವೆಂಕಯ್ಯ ನಾಯ್ಡು ಟ್ವೀಟ್​ - ಕೇಂದ್ರ ಗೃಹ ಸಚಿವ ಅಮಿತ್ ಶಾ

ರಕ್ಷಾಬಂಧನದ ವಿಶೇಷ ದಿನವಾದ ಇಂದು ಎಲ್ಲೆಡೆ ಸಂಭ್ರಮದಿಂದ ಹಬ್ಬ ಆಚರಣೆ ಮಾಡಲಾಗುತ್ತಿದೆ. ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ, ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಸೇರಿದಂತೆ ಅನೇಕ ಗಣ್ಯರು ಶುಭಾಶಯ ಕೋರಿದ್ದಾರೆ.

Rakshabandhan
ದೇಶದ ಗಣ್ಯರಿಂದ ಶುಭಾಶಯ ಸಲ್ಲಿಕೆ
author img

By

Published : Aug 22, 2021, 11:18 AM IST

ನವದೆಹಲಿ: ಇಂದು ದೇಶದಲ್ಲಿ ಪವಿತ್ರ ರಕ್ಷಾ ಬಂಧನದ ಸಂಭ್ರಮ. ಈ ಶುಭ ಹಬ್ಬಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ಶುಭಾಶಯ ಕೋರಿದ್ದಾರೆ. "ರಕ್ಷಾಬಂಧನದ ಶುಭ ಸಂದರ್ಭದಲ್ಲಿ ದೇಶದ ಜನತೆಗೆ ಶುಭಾಶಯಗಳು" ಎಂದು ಪ್ರಧಾನಿ ಟ್ವೀಟ್ ಮಾಡಿದ್ದಾರೆ.

  • सभी देशवासियों को रक्षाबंधन के पावन पर्व पर ढेरों शुभकामनाएं।

    — Narendra Modi (@narendramodi) August 22, 2021 " class="align-text-top noRightClick twitterSection" data=" ">

ಉಪರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು ಅವರು ಸಹ ರಕ್ಷಾಬಂಧನದಂದು ಶುಭಾಶಯ ಸಲ್ಲಿಸಿದ್ದಾರೆ. ಈ ಹಬ್ಬದ ಮೂಲಕ ಮಹಿಳೆಯರಿಗೆ ಸುರಕ್ಷಿತ ವಾತಾವರಣವನ್ನು ಕಲ್ಪಿಸುವ ಶಪಥ ಮಾಡೋಣ ಎಂದು ಕನ್ನಡದಲ್ಲೇ ಶುಭ ಕೋರಿದ್ದಾರೆ.

"ರಕ್ಷಾಬಂಧನದ ಶುಭಾಶಯಗಳು. ರಕ್ಷಾಬಂಧನವು ಸಹೋದರ ಮತ್ತು ಸಹೋದರಿಯರ ನಡುವಿನ ವಿಶೇಷ ಮತ್ತು ಆಳವಾದ ಪ್ರೀತಿ ಮತ್ತು ಗೌರವದ ಆಚರಣೆಯಾಗಿದೆ. ಈ ಶುಭ ದಿನದಂದು, ನಾವು ಮಹಿಳೆಯರ ಘನತೆಯನ್ನು ಎತ್ತಿಹಿಡಿಯಲು ಮತ್ತು ಅವರಿಗೆ ಸುರಕ್ಷಿತ ವಾತಾವರಣವನ್ನು ಕಲ್ಪಿಸುವ ಸಂಕಲ್ಪ ಮಾಡೋಣ" ಎಂದು ಉಪರಾಷ್ಟ್ರಪತಿ ಕಚೇರಿಯಿಂದ ಟ್ವೀಟ್ ಮಾಡಲಾಗಿದೆ.

  • ರಕ್ಷಾ ಬಂಧನದ ಶುಭಾಕಾಂಕ್ಷೆಗಳು

    ರಕ್ಷಾ ಬಂಧನ ಹಬ್ಬವು ಅಣ್ಣ-ತಂಗಿಯರ ನಡುವಿನ ಪ್ರೀತಿ ಹಾಗು ಗೌರವದ ವಿಶೇಷ ಮತ್ತು ಆಳವಾದ ಬಾಂಧವ್ಯದ ಸಂಭ್ರಮಾಚರಣೆ. ಈ ಪವಿತ್ರ ದಿನದಂದು ಮಹಿಳೆಯರ ಘನತೆ ಎತ್ತಿ ಹಿಡಿಯುವ ಮತ್ತು ಅವರಿಗೆ ಸದಾ ಗೌರವ ಹಾಗು ಸುರಕ್ಷಿತ ವಾತಾವರಣ ಕಲ್ಪಿಸುವ ಸಂಕಲ್ಪ ಮಾಡೋಣ. #Kannada #Rakshabandhan

    — Vice President of India (@VPSecretariat) August 22, 2021 " class="align-text-top noRightClick twitterSection" data=" ">

ಕೇಂದ್ರ ಗೃಹ ಸಚಿವ ಅಮಿತ್ ಶಾ ಕೂಡ ಹಬ್ಬದ ಶುಭಾಶಯ ಕೋರಿದ್ದಾರೆ. "ರಕ್ಷಾಬಂಧನದ ಶುಭ ಸಂದರ್ಭದಲ್ಲಿ ಎಲ್ಲಾ ಜನರಿಗೆ ಹಾರ್ದಿಕ ಶುಭಾಶಯಗಳು" ಎಂದು ಶಾ ಟ್ವೀಟ್ ಮಾಡಿದ್ದಾರೆ.

  • समस्त देशवासियों को रक्षाबंधन के पावन पर्व की हार्दिक शुभकामनाएँ।

    — Amit Shah (@AmitShah) August 22, 2021 " class="align-text-top noRightClick twitterSection" data=" ">

ರಕ್ಷಾಬಂಧನವು ಅತ್ಯಂತ ಜನಪ್ರಿಯ ಹಿಂದೂ ಹಬ್ಬಗಳಲ್ಲಿ ಒಂದಾಗಿದೆ. ಇದು ಒಡಹುಟ್ಟಿದವರ ನಡುವಿನ ವಿಶೇಷ ಬಾಂಧವ್ಯದ ನೆನಪಿಗಾಗಿ ರಾಷ್ಟ್ರದಾದ್ಯಂತ ಆಚರಿಸಲಾಗುವ ಹಬ್ಬವಾಗಿದೆ. ಸಾಂಪ್ರದಾಯಿಕವಾಗಿ, ಈ ದಿನ, ಸಹೋದರಿಯರು ತಮ್ಮ ಸಹೋದರರ ಕೈಗೆ ರಾಖಿಯನ್ನು ಕಟ್ಟುತ್ತಾರೆ. ಬಳಿಕ ಇಬ್ಬರೂ ಉಡುಗೊರೆಗಳನ್ನು ವಿನಿಮಯ ಮಾಡಿಕೊಳ್ಳುತ್ತಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.