ಕೊಲಂಬೊ (ಶ್ರೀಲಂಕಾ): ಫೆಬ್ರವರಿ 4ರಂದು ಶ್ರೀಲಂಕಾ ದೇಶವು ತನ್ನ 73ನೇ ಸ್ವಾತಂತ್ರ್ಯ ದಿನಾಚರಣೆ ಆಚರಿಸಿಕೊಳ್ಳಲಿದ್ದು, ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಶ್ರೀಲಂಕಾದ ಪ್ರಧಾನಿ ಮಹಿಂದಾ ರಾಜಪಕ್ಸೆ ಅವರನ್ನು ಅಭಿನಂದಿಸಿದ್ದಾರೆ.
ಹೈಕಮಿಷನ್ ಹೇಳಿಕೆ ಬಿಡುಗಡೆ ಮಾಡಿದ್ದು, 'ಭಾರತ ಹಾಗೂ ಶ್ರೀಲಂಕಾ ಭಾಷೆ, ಧಾರ್ಮಿಕ ಮತ್ತು ಸಾಂಸ್ಕೃತಿಕ ಸಂಪ್ರದಾಯಗಳ ಆಧಾರದ ಮೇಲೆ ಸಮಾನತೆ ಹಂಚಿಕೊಂಡಿದ್ದು, ಸಹಸ್ರಮಾನ ಹಳೆಯ ಸಂಬಂಧಗಳನ್ನು ಹೊಂದಿವೆ' ಎಂದು ಪ್ರಧಾನಿ ತಿಳಿಸಿದ್ದಾರೆ.
ಕೋವಿಡ್-19 ಸಾಂಕ್ರಾಮಿಕ ವಿರುದ್ಧದ ಜಂಟಿ ಹೋರಾಟ ಸೇರಿದಂತೆ ಕಳೆದ ವರ್ಷದಲ್ಲಿ ಉಭಯ ರಾಷ್ಟ್ರಗಳ ನಡುವಿನ ಸಹಕಾರವನ್ನು ಅವರು ಒತ್ತಿಹೇಳಿದ್ದಾರೆ.
"ಮುಂದಿನ ವರ್ಷಗಳಲ್ಲಿ ಉಭಯ ರಾಷ್ಟ್ರಗಳ ನಡುವಿನ ಸಂಬಂಧಗಳು ಮತ್ತಷ್ಟು ಗಟ್ಟಿಯಾಗಲಿವೆ ಮತ್ತು ನಮ್ಮ ಜನರ ಪ್ರಗತಿ ಸಾಮಾನ್ಯ ಏಳಿಗೆಗೆ ಸಹಕಾರಿಯಾಗಲಿ ಎಂದು ಅವರು ಹಾರೈಸಿದರು" ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.