ETV Bharat / bharat

ರಾಮಮಂದಿರ ನಿರ್ಮಾಣ ತಾಳ್ಮೆಗೆ ಸಿಕ್ಕ ವಿಜಯ: ವಿಜಯದಶಮಿಗೆ 10 ವಾಗ್ದಾನ ಮಾಡುವಂತೆ ಮೋದಿ ಕರೆ - ಪ್ರಧಾನಿ ಮೋದಿ

ವಿಜಯದಶಮಿ ಹಿನ್ನೆಲೆಯಲ್ಲಿ ದೆಹಲಿಯಲ್ಲಿ ನಡೆದ ರಾವಣ ದಹನ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಹತ್ತು ವಾಗ್ದಾನ ಮಾಡಲು ದೇಶದ ಜನರನ್ನು ಕೋರಿದರು.

ಪ್ರಧಾನಿ ಮೋದಿ
ಪ್ರಧಾನಿ ಮೋದಿ
author img

By ETV Bharat Karnataka Team

Published : Oct 24, 2023, 10:47 PM IST

ನವದೆಹಲಿ: ಇಲ್ಲಿನ ದ್ವಾರಕಾದಲ್ಲಿರುವ ಡಿಡಿಎ ಮೈದಾನದಲ್ಲಿ ಮಂಗಳವಾರ ನಡೆದ ದಸರಾ ಆಚರಣೆಯಲ್ಲಿ ಭಾಗವಹಿಸಿದ ಪ್ರಧಾನಿ ನರೇಂದ್ರ ಮೋದಿ ಅವರು ಕನಿಷ್ಠ ಒಂದು ಬಡ ಕುಟುಂಬದ ಸಾಮಾಜಿಕ, ಆರ್ಥಿಕ ಸ್ಥಿತಿ ಸುಧಾರಿಸುವ, ಜಾತಿವಾದ ನಿರ್ಮೂಲನೆ, ಪ್ರಾದೇಶಿಕತೆ ಹೆಸರಿನಲ್ಲಿ ದೇಶ ವಿಭಜನೆ ತಡೆಯುವ ಪ್ರತಿಜ್ಞೆ ಸೇರಿದಂತೆ 10 ವಾಗ್ದಾನಗಳನ್ನು ಮಾಡುವಂತೆ ದೇಶದ ಜನರಿಗೆ ಒತ್ತಾಯಿಸಿದರು.

ರಾವಣ ದಹನ ಕಾರ್ಯಕ್ರಮಕ್ಕೆ ಜನಸಾಗರವೇ ಆಗಮಿಸಿತ್ತು. ಪ್ರಧಾನಿ ಮೋದಿ ಅವರು ಕೇಸರಿ ಬಣ್ಣದ ಪೇಟ ಮತ್ತು ಕೋಟನ್ನು ಧರಿಸಿದ್ದರು. ಇಡೀ ಮೈದಾನದಲ್ಲಿ 'ಸಿಯಾವರ್​ ರಾಮಚಂದ್ರ ಕೀ ಜೈ' ಘೋಷಣೆಗಳು ಮೊಳಗಿದವು. ಈ ವೇಳೆ ಜನರನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ, ಜನರಿಗೆ ನವರಾತ್ರಿ ಮತ್ತು ವಿಜಯದಶಮಿಯ ಶುಭಾಶಯಗಳನ್ನು ಕೋರಿದರು.

ಬಳಿಕ ದೇಶಾದ್ಯಂತ ಜಾತಿ ಗಣತಿಗೆ ಒತ್ತಾಯಿಸುತ್ತಿರುವ ವಿಪಕ್ಷಗಳ ಇಂಡಿಯಾ ಕೂಟವನ್ನು ತರಾಟೆಗೆ ತೆಗೆದುಕೊಂಡ ಪ್ರಧಾನಿ, ರಾವಣ ದಹನ ಕೇವಲ ಪ್ರತಿಕೃತಿ ದಹನಕ್ಕೆ ಸೀಮಿತವಾಗದೇ, ತಾಯಿ ಭಾರತಿಯನ್ನು ವಿಭಜಿಸಲು ಪ್ರಯತ್ನಿಸುವ ಶಕ್ತಿಗಳ ವಿರುದ್ಧವೂ ಆಗಿರಬೇಕು. ಜಾತಿವಾದ ಮತ್ತು ಪ್ರಾದೇಶಿಕತೆಯ ಹೆಸರಿನಲ್ಲಿ ದೇಶವನ್ನು ಇಬ್ಭಾಗ ಮಾಡಲು ಹೊರಟಿರುವ ವಿರೋಧಿಗಳನ್ನು ಮಟ್ಟ ಹಾಕಬೇಕು ಎಂದು ಕರೆನೀಡಿದರು.

ರಾಮಮಂದಿರ ತಾಳ್ಮೆಗೆ ಸಿಕ್ಕ ವಿಜಯ: ರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ತಾಳ್ಮೆಯ ವಿಜಯದ ಸಂಕೇತವಾಗಿದೆ. ದೀರ್ಘಕಾಲದ ಕಾಯುವಿಕೆಯ ನಂತರ ಅಯೋಧ್ಯೆಯಲ್ಲಿ ರಾಮಚಂದ್ರನ ಭವ್ಯ ಮಂದಿರ ತಲೆ ಎತ್ತಿದೆ. ನಾವೆಲ್ಲರೂ ಅದನ್ನು ನೋಡುವ ಭಾಗ್ಯ ಪಡೆದಿದ್ದೇವೆ. ಇದು ನಮ್ಮ ತಾಳ್ಮೆಗೆ ಸಿಕ್ಕ ಗೆಲುವಾಗಿದೆ ಎಂದು ಬಣ್ಣಿಸಿದರು.

ದಸರಾ ಹಬ್ಬವು ಕೆಟ್ಟದ್ದರ ವಿರುದ್ಧ ಒಳಿತಿನ ವಿಜಯವನ್ನು ಸಂಕೇತಿಸುತ್ತದೆ. ನಮಗೆ ಭಗವದ್ಗೀತೆಯ ಜ್ಞಾನವಿದೆ. ಐಎನ್‌ಎಸ್ ವಿಕ್ರಾಂತ್ ಮತ್ತು ತೇಜಸ್ ಯುದ್ಧನೌಕೆಗಳನ್ನು ನಿರ್ಮಿಸಿಕೊಳ್ಳುವ ತಾಕತ್ತಿದೆ. ನಮ್ಮ ಗಡಿಯನ್ನು ಹೇಗೆ ರಕ್ಷಿಸಿಕೊಳ್ಳುವುದು ಎಂಬುದೂ ಗೊತ್ತಿದೆ ಎಂದು ಹೇಳಿದರು.

ಪ್ರಧಾನಿ ಹೇಳಿದ ಹತ್ತು ವಾಗ್ದಾನಗಳು: ವಿಜಯದಶಮಿಯ ವೇಳೆ 10 ವಾಗ್ದಾನಗಳನ್ನು ಕೈಗೊಳ್ಳುವಂತೆ ಪ್ರಧಾನಿ ಮೋದಿ ಜನರನ್ನು ಕೋರಿದರು. 1)ನೀರಿನ ಸಂರಕ್ಷಣೆ, 2)ಡಿಜಿಟಲ್ ವಹಿವಾಟು ಉತ್ತೇಜಿಸುವುದು, 3)ನಮ್ಮ ಸುತ್ತಮುತ್ತಲಿನ ಪ್ರದೇಶ ಸ್ವಚ್ಛತೆ ಕಾಪಾಡುವುದು, 4)ಸ್ಥಳೀಯ ತಯಾರಿಕರಿಗೆ ಬೆಂಬಲ, 5)ದೇಶದಲ್ಲಿ ಭಾರತದಲ್ಲಿ ತಯಾರಿಸಿದ ಉತ್ಪನ್ನಗಳನ್ನು ಖರೀದಿಸುವುದು, 6)ಶ್ರೇಷ್ಠ ಕೆಲಸ ಮಾಡುವುದು, 7)ಮೊದಲು ದೇಶದೆಲ್ಲೆಡೆ ಭೇಟಿ ನೀಡಿ ನಂತರ ಮಾತ್ರ ವಿದೇಶಕ್ಕೆ ಭೇಟಿ ನೀಡಿ, 8)ರಾಗಿ ಸೇರಿದಂತೆ ನೈಸರ್ಗಿಕ ಕೃಷಿಯನ್ನು ಪ್ರೋತ್ಸಾಹಿಸುವುದು. 9)ಯೋಗ ಮತ್ತು ಕ್ರೀಡೆ ಜತೆಗೆ ಫಿಟ್‌ನೆಸ್‌ಗೆ ಆದ್ಯತೆ, 10)ಬಡ ಕುಟುಂಬದ ಅಭ್ಯುದಯ.

ಇದನ್ನೂ ಓದಿ: ಮೈಸೂರು ಜಂಬೂ ಸವಾರಿ ವೈಭವ: ಫೋಟೋಗಳಲ್ಲಿ ನೋಡಿ..

ETV Bharat Logo

Copyright © 2025 Ushodaya Enterprises Pvt. Ltd., All Rights Reserved.