ETV Bharat / bharat

TRIPS ಮನ್ನಾಗೆ ಬೆಂಬಲಿಸಿ: ಯುರೋಪ್ ನಾಯಕರಿಗೆ ಮೋದಿ ಮನವಿ - ಯುರೋಪಿಯನ್ ಕೌನ್ಸಿಲ್ ಸಭೆ

ಯುರೋಪಿಯನ್ ಕೌನ್ಸಿಲ್ ಸಭೆಯಲ್ಲಿ ವರ್ಚುವಲ್ ಮೂಲಕ ಭಾಗಿಯಾದ ಮೋದಿ, ಕೋವಿಡ್ ಸಂಬಂಧಿತ ಚಿಕಿತ್ಸೆಗಳು ಮತ್ತು ಲಸಿಕೆಗಳಿಗಾಗಿ ಬೌದ್ಧಿಕ ಆಸ್ತಿ ಹಕ್ಕುಗಳ ವ್ಯಾಪಾರ-ಸಂಬಂಧಿತ ಅಂಶಗಳನ್ನು ಮನ್ನಾ ಮಾಡಬೇಕಿದೆ. ಅದಕ್ಕಾಗಿ ಎಲ್ಲರ ಬೆಂಬಲ ಅಗತ್ಯವಿದೆ ಎಂದರು.

PM Modi asks EU to support TRIPS
PM Modi asks EU to support TRIPS
author img

By

Published : May 9, 2021, 5:40 AM IST

ನವದೆಹಲಿ: ಕೋವಿಡ್ ವ್ಯಾಕ್ಸಿನ್ ತಯಾರಿಸಲು ವಿಶ್ವ ವ್ಯಾಪಾರ ಸಂಸ್ಥೆಯಲ್ಲಿ ಬೌದ್ಧಿಕ ಆಸ್ತಿ ಹಕ್ಕುಗಳ ವ್ಯಾಪಾರ-ಸಂಬಂಧಿತ ಅಂಶಗಳನ್ನು (ಟಿಆರ್​ಐಪಿಎಸ್) ಮನ್ನಾ ಮಾಡುವುದಕ್ಕೆ ಬೆಂಬಲಿಸುವಂತೆ ಯುರೋಪಿಯನ್ ನಾಯಕರಿಗೆ ಪ್ರಧಾನಿ ನರೇಂದ್ರ ಮೋದಿ ಮನವಿ ಮಾಡಿದ್ದಾರೆ.

ಯುರೋಪಿಯನ್ ಕೌನ್ಸಿಲ್ ಸಭೆಯಲ್ಲಿ ವರ್ಚುವಲ್ ಮೂಲಕ ಭಾಗಿಯಾದ ಮೋದಿ, ಕೋವಿಡ್ ಸಂಬಂಧಿತ ಚಿಕಿತ್ಸೆಗಳು ಮತ್ತು ಲಸಿಕೆಗಳಿಗಾಗಿ ಬೌದ್ಧಿಕ ಆಸ್ತಿ ಹಕ್ಕುಗಳ ವ್ಯಾಪಾರ-ಸಂಬಂಧಿತ ಅಂಶಗಳನ್ನು ಮನ್ನಾ ಮಾಡಬೇಕಿದೆ. ಅದಕ್ಕಾಗಿ ಎಲ್ಲರ ಬೆಂಬಲ ಅಗತ್ಯವಿದೆ ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ಇಯು ಕೌನ್ಸಿಲ್ ಚಾರ್ಲ್ಸ್ ಮಿಚೆಲ್, ಬೌದ್ಧಿಕ ಹಕ್ಕು ಮತ್ತು ವ್ಯಾಕ್ಸಿನ್ ಬಗ್ಗೆ ನಮ್ಮ ನಾಯಕರ ಜೊತೆ ಚರ್ಚಿಸಿದ್ದು, ಬೇರೆ ಬೇರೆ ಅಭಿಪ್ರಾಯಗಳು ಬಂದಿವೆ. ಆದರೂ ಕೂಡ ವ್ಯಾಕ್ಸಿನ್ ಉತ್ಪಾದನೆ ಮತ್ತು ಪೂರೈಕೆಗೆ ಸಹಕಾರಿಯಾಗುವಂತಹ ಯಾವುದೇ ನಡೆಗೆ ಬೆಂಬಲ ಸೂಚಿಸಲು ಸಿದ್ಧರಿದ್ದೇವೆ ಎಂದು ಭರವಸೆ ನೀಡಿದ್ದಾರೆ.

ಬೌದ್ಧಿಕ ಹಕ್ಕುಗಳ ವ್ಯಾಪಾರ ಸಂಬಂಧಿ ಅಂಶಗಳನ್ನು ಮನ್ನಾ ಮಾಡುವುದಕ್ಕೆ ಬೆಂಬಲಿಸಿ ಎಂದು ಮೋದಿ ಅವರು ಇಯು ನಾಯಕರನ್ನು ಸ್ವಾಗತಿಸಿದರು. ಈಗಾಗಲೇ ಇದಕ್ಕೆ ದಕ್ಷಿಣ ಆಫ್ರಿಕಾ ಮತ್ತು ಅಮೆರಿಕ ಬೆಂಬಲಿಸಿವೆ. ಈ ಬಗ್ಗೆ ಯುರೋಪ ನಾಯಕರ ಬೆಂಬಲ ಕಾಯುತ್ತಿದ್ದೇವೆ ಎಂದು ಪ್ರಧಾನಿ ಹೇಳಿದರು ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಕಾರ್ಯದರ್ಶಿ ವಿಕಾಸ್ ಸ್ವರೂಪ್ ಮಾಹಿತಿ ನೀಡಿದ್ದಾರೆ.

ಇನ್ನು ಶೃಂಗಸಭೆಯಲ್ಲಿ ಭಾಗವಹಿಸಿದ್ದ ಬೆಲ್ಜಿಯಂ ಪ್ರಧಾನಿ ಅಲೆಕ್ಸಾಂಡರ್ ಡಿ ಕ್ರೂ ಅವರು ಪ್ರಧಾನಿ ಮೋದಿ ಅವರಿಗೆ ಕೆಮ್ ಚೋ ಎಂದು ಸ್ವಾಗತಿಸಿದರು.

ಯುರೋಪಿಯನ್ ಕೌನ್ಸಿಲ್ ಅಧ್ಯಕ್ಷ ಚಾರ್ಲ್ಸ್ ಮೈಕೆಲ್ ಅವರ ಆಹ್ವಾನದ ಮೇರೆಗೆ ಮೋದಿ ಯುರೋಪಿಯನ್ ಕೌನ್ಸಿಲ್ ಸಭೆಯಲ್ಲಿ ವಾಸ್ತವಿಕವಾಗಿ ಭಾಗವಹಿಸಿದ್ದಾರೆ. ಎಲ್ಲಾ 27 ಯುರೋಪಿಯನ್​ ಒಕ್ಕೂಟದ ಸದಸ್ಯ ರಾಷ್ಟ್ರಗಳ ಮುಖ್ಯಸ್ಥರು ಈ ಸಭೆಯಲ್ಲಿ ಭಾಗವಹಿಸಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.