ETV Bharat / bharat

ಗುಜರಾತ್​ನಲ್ಲಿ 10 ಸಾವಿರ ಶತಾಯುಷಿ ಮತದಾರರು: ಪಿಎಂ ಮೋದಿ ತಾಯಿ ಹೀರಾಬೆನ್ ಕೂಡ ಒಬ್ಬರು

ಗುಜರಾತ್ ವಿಧಾನಸಭೆಗೆ ಮುಂದಿನ ತಿಂಗಳು ನಡೆಯುವ ಮತದಾನದಲ್ಲಿ ಹಕ್ಕು ಚಲಾಯಿಸುವ ಶತಾಯುಷಿಗಳು 10 ಸಾವಿರಕ್ಕೂ ಅಧಿಕ ಜನರಿದ್ದಾರೆ. ಅವರಲ್ಲಿ ಪ್ರಧಾನಿ ಮೋದಿ ಅವರ ತಾಯಿ ಹೀರಾಬೆನ್​ ಅವರೂ ಇದ್ದಾರೆ.

pm-modi-100-year-old-mother
ಗುಜರಾತ್​ನಲ್ಲಿ 10 ಸಾವಿರ ಶತಾಯುಷಿ ಮತದಾರರು
author img

By

Published : Nov 22, 2022, 10:55 PM IST

ಗಾಂಧಿನಗರ(ಗುಜರಾತ್​): ಡಿಸೆಂಬರ್​ 1 ಮತ್ತು 5 ರಂದು ನಡೆಯುವ ಗುಜರಾತ್​ ಚುನಾವಣೆಗೆ ಆಯೋಗ ಸಕಲ ಸಿದ್ಧತೆ ನಡೆಸಿದೆ. ಮತದಾರರ ಪಟ್ಟಿಯನ್ನು ಅಂತಿಮಗೊಳಿಸಿದ್ದು, ಇದರಲ್ಲಿ 100 ವರ್ಷ ಪೂರೈಸಿದವರೇ 10 ಸಾವಿರಕ್ಕೂ ಅಧಿಕ ಮತದಾರರಿದ್ದಾರೆ. ಇದರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ತಾಯಿ ಶತಾಯುಷಿಯಾದ ಹೀರಾಬೆನ್​ ಮೋದಿ ಅವರು ಕೂಡ ಒಬ್ಬರಾಗಿದ್ದಾರೆ.

ಪ್ರಧಾನಿ ಅವರ ತಾಯಿ ಹೀರಾಬೆನ್ ಮೋದಿ ಅವರು ರೈಸನ್ ಪೆಟ್ರೋಲ್ ಪಂಪ್‌ನ ಹಿಂಭಾಗದಲ್ಲಿರುವ ವಾಡಿಭಾಯಿ ವಿದ್ಯಾ ಕಾಂಪ್ಲೆಕ್ಸ್‌ನ ಪ್ರಾಥಮಿಕ ಶಾಲೆಯಲ್ಲಿ ಮತ ಚಲಾಯಿಸಲಿದ್ದಾರೆ. ಹೀರಾಬೆನ್​ ಅವರು ಕೊನೆಯ ಬಾರಿಗೆ ಅಂದರೆ 2021 ರ ನವೆಂಬರ್​ 3 ರಂದು ನಡೆದ ಗಾಂಧಿನಗರ ಕಾರ್ಪೊರೇಷನ್ ಚುನಾವಣೆಯಲ್ಲಿ ತಮ್ಮ ಹಕ್ಕು ಚಲಾಯಿಸಿದ್ದರು.

5 ಕೋಟಿ ಮತದಾರರಲ್ಲಿ 10 ಸಾವಿರ ಶತಾಯಿಷಿಗಳು: ರಾಜ್ಯದಲ್ಲಿ ಒಟ್ಟಾರೆ 4.91ಕೋಟಿ ಮತದಾರರು ತಮ್ಮ ಮತದಾನದ ಹಕ್ಕನ್ನು ಚಲಾಯಿಸಲು ಅರ್ಹತೆ ಹೊಂದಿದ್ದಾರೆ. ಅದರಲ್ಲಿ 10,357 ಜನ ಶತಾಯುಷಿಗಳು ಇದ್ದಾರೆ. 100 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನವರು ಎರಡೂ ಹಂತಗಳಲ್ಲಿ ಮತದಾನದ ಹಕ್ಕನ್ನು ಹೊಂದಿದ್ದಾರೆ.

ಇದರಲ್ಲಿ 5,115 ಜನರು ಮೊದಲ ಹಂತದಲ್ಲಿ ಮತ ನೀಡಿದರೆ, ಎರಡನೇ ಹಂತದಲ್ಲಿ 5,242 ಜನ ಶತಾಯುಷಿಗಳು ಮತ ಹಾಕಲಿದ್ದಾರೆ. ಅಹಮದಾಬಾದ್​ 1500 ಶತಾಯುಷಿ ಮತದಾರರನ್ನು ಹೊಂದಿ ಅತಿಹೆಚ್ಚಿರುವ ಜಿಲ್ಲೆಯಾದರೆ, 8 ಜನರನ್ನು ಹೊಂದಿರುವ ಡ್ಯಾಂಗ್​ ಅತಿ ಕಡಿಮೆ ಶತಾಯುಷಿ ಮತದಾರರನ್ನು ಹೊಂದಿರುವ ಜಿಲ್ಲೆಯಾಗಿದೆ.

ಮನೆಯಿಂದಲೇ ಮತದಾನಕ್ಕೆ ಅವಕಾಶ: ಕೊರೊನಾ, ಅಂಗವೈಕಲ್ಯ ಮತ್ತು ದುರ್ಬಲರಾಗಿರುವ 80 ವರ್ಷ ಮೇಲ್ಪಟ್ಟ ಮತದಾರರು ಮನೆಯಿಂದಲೇ ಮತದಾನ ಮಾಡುವ ಅವಕಾಶವನ್ನು ಹೊಂದಿದ್ದಾರೆ. ಈ ಮಾದರಿಯಲ್ಲಿ ಮತದಾನ ಮಾಡುವ ಜನರು ಚುನಾವಣಾ ಆಯೋಗದಿಂದ ಲಭ್ಯವಿರುವ 12 ಡಿ ಫಾರ್ಮ್ ಅನ್ನು ನಿಗದಿತ ವೇಳೆಗೆ ಭರ್ತಿ ಮಾಡಿ ಅರ್ಜಿ ಹಾಕಬೇಕು. ಇದಕ್ಕೆ ಆಯೋಗ ಸಮ್ಮತಿಸಿದಲ್ಲಿ ಅವರು ಮತಕೇಂದ್ರಕ್ಕೆ ಬರುವ ಪ್ರಮೇಯ ತಪ್ಪಲಿದೆ.

ಓದಿ: ಭಯೋತ್ಪಾದನೆ ಚಟುವಟಿಕೆ ನಮ್ಮ ಸರ್ಕಾರ ಮುಲಾಜಿಲ್ಲದೇ ಮಟ್ಟ ಹಾಕುತ್ತದೆ: ಸಚಿವ R ಅಶೋಕ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.