ನವದೆಹಲಿ: ಕೊರೊನಾ ಸಾಂಕ್ರಾಮಿಕದಿಂದಾದಿ ದೇಶವು ಆರೋಗ್ಯ ತುರ್ತು ಪರಿಸ್ಥಿತಿ ಎದುರಿಸುತ್ತಿದ್ದು, ಲಸಿಕೆಗಳು, ಆಮ್ಲಜನಕ ಮತ್ತು ಔಷಧಿಗಳ ಜೊತೆ ಪ್ರಧಾನಿ ನರೇಂದ್ರ ಮೋದಿಯೂ ನಾಪತ್ತೆಯಾಗಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಕೇಂದ್ರ ಸರ್ಕಾರವನ್ನು ಟೀಕಿಸಿದ್ದಾರೆ.
"ಸೆಂಟ್ರಲ್ ವಿಸ್ಟಾ ಯೋಜನೆ, ಔಷಧಿಗಳ ಮೇಲಿನ ಜಿಎಸ್ಟಿ, ಅಲ್ಲಿ ಇಲ್ಲಿ ಮತ್ತು ಪ್ರಧಾನಮಂತ್ರಿಯ ಫೋಟೋಗಳು ಮಾತ್ರ ಉಳಿದುಕೊಂಡಿವೆ. ಅದನ್ನು ಬಿಟ್ಟರೆ ವ್ಯಾಕ್ಸಿನ್, ಆಕ್ಸಿಜನ್, ಔಷಧಿಗಳ ಜೊತೆ ಪ್ರಧಾನಿ ಮೋದಿಯೂ ಗಾಯಬ್ ಆಗಿದ್ದಾರೆ" ಎಂದು ರಾಗಾ ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.
-
वैक्सीन, ऑक्सीजन और दवाओं के साथ PM भी ग़ायब हैं।
— Rahul Gandhi (@RahulGandhi) May 13, 2021 " class="align-text-top noRightClick twitterSection" data="
बचे हैं तो बस सेंट्रल विस्टा, दवाओं पर GST और यहाँ-वहाँ PM के फ़ोटो।
">वैक्सीन, ऑक्सीजन और दवाओं के साथ PM भी ग़ायब हैं।
— Rahul Gandhi (@RahulGandhi) May 13, 2021
बचे हैं तो बस सेंट्रल विस्टा, दवाओं पर GST और यहाँ-वहाँ PM के फ़ोटो।वैक्सीन, ऑक्सीजन और दवाओं के साथ PM भी ग़ायब हैं।
— Rahul Gandhi (@RahulGandhi) May 13, 2021
बचे हैं तो बस सेंट्रल विस्टा, दवाओं पर GST और यहाँ-वहाँ PM के फ़ोटो।
ಇದನ್ನೂ ಓದಿ: ನಿನ್ನೆ ದೇಶದಲ್ಲಿ ಕೋವಿಡ್ ಸುನಾಮಿಗೆ 4,120 ಮಂದಿ ಬಲಿ: 3.62 ಲಕ್ಷ ಸೋಂಕಿತರು ಪತ್ತೆ
ದೇಶದಲ್ಲಿ ಕೋವಿಡ್ ಎರಡನೇ ಅಲೆ ದಿನೇ ದಿನೆ ಉಲ್ಬಣಗೊಳ್ಳುತ್ತಿದ್ದು, ಸಾವು-ನೋವುಗಳ ಮಧ್ಯೆ ದೇಶಾದ್ಯಂತ ಲಸಿಕೆ, ಹಾಸಿಗೆ, ಆಮ್ಲಜನಕದ ಅಭಾವ ಎದುರಾಗಿದೆ. ಕಳೆದ 24 ಗಂಟೆಗಳಲ್ಲಿ ಹೊಸದಾಗಿ 3,62,727 ಕೋವಿಡ್ ಕೇಸ್ಗಳು ಹಾಗೂ 4,120 ಸಾವು ವರದಿಯಾಗಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 37,10,525ಕ್ಕೆ ಏರಿಕೆಯಾಗಿದೆ.