ನವದೆಹಲಿ: ಜಪಾನ್ನ ಟೋಕಿಯೋದಲ್ಲಿ ನಡೆಯುತ್ತಿರುವ ಒಲಿಂಪಿಕ್ಸ್ನಲ್ಲಿ ಭಾಗಿಯಾಗಿರುವ ಭಾರತದ ಅಥ್ಲೀಟ್ಸ್ಗಳಿಗೆ ಪ್ರಧಾನಿ ನರೇಂದ್ರ ಮೋದಿ ವಿಶೇಷ ಆಹ್ವಾನ ನೀಡಿದ್ದಾರೆ. ಆಗಸ್ಟ್ 15ರಂದು ಸ್ವಾತಂತ್ರ್ಯೋತ್ಸವ ಆಚರಣೆ ಸಂದರ್ಭದಲ್ಲಿ ದೆಹಲಿಯ ಕೆಂಪು ಕೋಟೆಗೆ ಇವರಿಗೆಲ್ಲ ವಿಶೇಷ ಅತಿಥಿಗಳಾಗಿ ಆಹ್ವಾನ ಮಾಡಲಾಗಿದೆ.
-
On 15th August, Prime Minister Narendra Modi will invite the entire Indian Olympics contingent to the Red Fort as special guests. He will also personally meet and interact with all of them around that time.#Olympics pic.twitter.com/Sw0rbENdVb
— ANI (@ANI) August 3, 2021 " class="align-text-top noRightClick twitterSection" data="
">On 15th August, Prime Minister Narendra Modi will invite the entire Indian Olympics contingent to the Red Fort as special guests. He will also personally meet and interact with all of them around that time.#Olympics pic.twitter.com/Sw0rbENdVb
— ANI (@ANI) August 3, 2021On 15th August, Prime Minister Narendra Modi will invite the entire Indian Olympics contingent to the Red Fort as special guests. He will also personally meet and interact with all of them around that time.#Olympics pic.twitter.com/Sw0rbENdVb
— ANI (@ANI) August 3, 2021
ಟೋಕಿಯೋ ಒಲಿಂಪಿಕ್ಸ್ನಲ್ಲಿ ಈ ಸಲ ಭಾರತದ ಹೆಚ್ಚಿನ ಅಥ್ಲೀಟ್ಸ್ಗಳು ಭಾಗಿಯಾಗಿದ್ದು, ಪದಕ ಗೆಲ್ಲುವಲ್ಲಿ ವಿಫಲಗೊಂಡಿದ್ದರೂ, ಅದ್ಭುತ ಪ್ರದರ್ಶನ ನೀಡುವಲ್ಲಿ ಯಶಸ್ವಿಯಾಗಿದ್ದಾರೆ. ಟೋಕಿಯೋಗೆ ತೆರಳುವುದಕ್ಕೂ ಮುಂಚಿತವಾಗಿ ಪ್ರಧಾನಿ ನರೇಂದ್ರ ಮೋದಿ ವಿಡಿಯೋ ಕಾನ್ಫರೆನ್ಸ್ ಮೂಲಕ ಎಲ್ಲ ಅಥ್ಲೀಟ್ಸ್ಗಳೊಂದಿಗೆ ಮಾತನಾಡಿದ್ದರು. ಈ ವೇಳೆ, ಅವರಿಗೆ ಮತ್ತಷ್ಟು ಆತ್ಮಸ್ಥೈರ್ಯ ತುಂಬಿ, ಕ್ರೀಡಾಕೂಟದಲ್ಲಿ ಭಾಗಿಯಾಗಲು ಕಳುಹಿಸಿಕೊಟ್ಟಿದ್ದರು.
ಪ್ರಧಾನ್ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಅವರು, ಈ ಸಲ ಭಾರತದಿಂದ ಅತಿ ಹೆಚ್ಚಿನ ಅಥ್ಲೀಟ್ಸ್ಗಳು ಟೋಕಿಯೋ ಒಲಿಂಪಿಕ್ಸ್ನಲ್ಲಿ ಭಾಗಿಯಾಗಲು ಅರ್ಹತೆ ಗಿಟ್ಟಿಸಿಕೊಂಡಿದ್ದು, ವಿಶ್ವದ ಟಾಪ್ ಕ್ರೀಡಾಪಟುಗಳೊಂದಿಗೆ ಸೆಣಸಾಟ ನಡೆಸಿದ್ದಾರೆ. ಜೊತೆಗೆ ಉತ್ತಮವಾದ ಪ್ರದರ್ಶನ ನೀಡಿದ್ದಾರೆ ಎಂದರು. ದೇಶದ ಅತಿದೊಡ್ಡ ಬಿಕ್ಕಟ್ಟಿಗೆ ಒಳಗಾಗಿ ಕೋವಿಡ್ನಿಂದ ಹೋರಾಟ ನಡೆಸಿದ್ದ ಸಂದರ್ಭದಲ್ಲಿ ಅನೇಕ ಆಟಗಾರರು ಈ ಸಾಧನೆ ಮಾಡಿರುವುದು ನಿಜಕ್ಕೂ ಶ್ಲಾಘನೀಯ ಎಂದರು. ಇದೀಗ ಸ್ವಾತಂತ್ರ್ಯೋತ್ಸವ ದಿನ ಪ್ರಧಾನಿ ನರೇಂದ್ರ ಮೋದಿ ಎಲ್ಲರನ್ನೂ ವೈಯಕ್ತಿಕವಾಗಿ ಭೇಟಿ ಮಾಡಿ ಮಾತುಕತೆ ನಡೆಸಲಿದ್ದಾರೆ.
ಈ ಸಲದ ಟೋಕಿಯೋ ಒಲಿಂಪಿಕ್ಸ್ನಲ್ಲಿ 120ಕ್ಕೂ ಅಧಿಕ ಕ್ರೀಡಾಪಟುಗಳು ಭಾಗಿಯಾಗಿದ್ದು, ಮೀರಾಬಾಯಿ ಚನು ಬೆಳ್ಳಿ ಹಾಗೂ ಸಿಂಧು ಕಂಚಿನ ಪದಕ ಗೆದ್ದಿದ್ದಾರೆ.