ETV Bharat / bharat

Cryptocurrency ಕುರಿತು ಪ್ರಧಾನಿ ಮೋದಿ ಸಭೆ: ಟೆರರ್ ಫಂಡಿಂಗ್ ಕುರಿತು ಆತಂಕ - ಕ್ರಿಪ್ಟೋಕರೆನ್ಸಿ ಕುರಿತು ಪ್ರಧಾನಿ ಮೋದಿ ಸಭೆ

ಕ್ರಿಪ್ಟೋಕರೆನ್ಸಿ(cryptocurrency) ಅಭಿವೃದ್ಧಿಗೊಳ್ಳುತ್ತಿರುವ ತಂತ್ರಜ್ಞಾನವಾಗಿದೆ ಎಂಬ ಅಂಶವನ್ನು ಸರ್ಕಾರವು ಅರಿತುಕೊಂಡಿದ್ದು, ಇದನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ ಎಂದು ಪ್ರಧಾನಿಗಳು ಹೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ.

PM chairs meet on cryptocurrency; concerns raised over money laundering, terror financing risks
ಕ್ರಿಪ್ಟೋಕರೆನ್ಸಿ ಕುರಿತು ಪ್ರಧಾನಿ ಮೋದಿ ಸಭೆ: ಟೆರರ್ ಫಂಡಿಂಗ್ ಆತಂಕ
author img

By

Published : Nov 13, 2021, 9:47 PM IST

ನವದೆಹಲಿ: ಕ್ರಿಪ್ಟೋಕರೆನ್ಸಿ (Cryptocurrency) ಇತ್ತೀಚೆಗೆ ಭಾರಿ ಸದ್ದು ಮಾಡುತ್ತಿದೆ. ಈ ಬೆನ್ನಲ್ಲೇ ಕ್ರಿಪ್ಟೋಕರೆನ್ಸಿ ವಿಚಾರವಾಗಿ ಶನಿವಾರ ಸಭೆ ನಡೆಸಿದ ಅದರ ಅಧ್ಯಕ್ಷತೆಯನ್ನು ವಹಿಸಿದ್ದ ಪ್ರಧಾನಿ ಮೋದಿ (Prime Minister Modi) ಅವರು ಅಕ್ರಮ ಹಣ ವರ್ಗಾವಣೆ (Money Laundering) ಮತ್ತು ಭಯೋತ್ಪಾದನೆಗೆ ಹಣಕಾಸು ಒದಗಿಸಲು ಸಾಧ್ಯವಾಗುವ ಕ್ರಿಪ್ಟೋಕರೆನ್ಸಿಯಂಥಹ ಅನಿಯಂತ್ರಿತ ವ್ಯವಸ್ಥೆಗಳಿಗೆ ಅವಕಾಶ ನೀಡಲಾಗುವುದಿಲ್ಲ ಎಂದಿದ್ದಾರೆ ಎಂದು ಸರ್ಕಾರದ ಮೂಲಗಳು ಮಾಹಿತಿ ನೀಡಿವೆ.

ಕ್ರಿಪ್ಟೋಕರೆನ್ಸಿ ಅಭಿವೃದ್ಧಿಗೊಳ್ಳುತ್ತಿರುವ ತಂತ್ರಜ್ಞಾನವಾಗಿದೆ ಎಂಬ ಅಂಶವನ್ನು ಸರ್ಕಾರವು ಅರಿತುಕೊಂಡಿದ್ದು, ಇದನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ. ಸರ್ಕಾರವು ತಜ್ಞರು ಮತ್ತು ಇತರರೊಂದಿಗೆ ಚರ್ಚಿಸಿ ಕ್ರಮಗಳನ್ನು ತೆಗೆದುಕೊಳ್ಳುತ್ತದೆ ಎಂದು ಮೋದಿ ಅಭಿಪ್ರಾಯಪಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಕ್ರಿಪ್ಟೋ ಕರೆನ್ಸಿ ವಿಚಾರವಾಗಿ ಆರ್‌ಬಿಐ, ಹಣಕಾಸು ಸಚಿವಾಲಯ, ಗೃಹ ಸಚಿವಾಲಯವು ಅಧ್ಯಯನ ಮಾಡಿವೆ. ದೇಶದೊಳಗಿನ ಮತ್ತು ಪ್ರಪಂಚದಾದ್ಯಂತದ ತಜ್ಞರನ್ನು ಸಂಪರ್ಕಿಸಿ ಅಭಿಪ್ರಾಯನ್ನು ಸಂಗ್ರಹಿಸಲಾಗಿದೆ. ಜಾಗತಿಕವಾಗಿ ಈಗಿರುವ ಕ್ರಿಪ್ಟೋಕರೆನ್ಸಿಯ ವಿವಿಧ ಮಾದರಿಗಳನ್ನು ವಿಶ್ಲೇಷಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

ಭಾರತೀಯ ರಿಸರ್ವ್ ಬ್ಯಾಂಕ್ (Reserve Bank of India) ಕ್ರಿಪ್ಟೋಕರೆನ್ಸಿಗಳ ವಿರುದ್ಧ ಪದೇ ಪದೇ ತನ್ನ ಬಲವಾದ ಅಭಿಪ್ರಾಯಗಳನ್ನು ಹೇಳುತ್ತಿದೆ. ದೇಶದ ಆರ್ಥಿಕತೆಯ ದೃಷ್ಟಿಯಿಂದ ಹಾಗೂ ಆರ್ಥಿಕ ಸ್ಥಿರತೆಗೆ ಕ್ರಿಪ್ಟೋಕರೆನ್ಸಿ ಬೆದರಿಕೆ ಉಂಟುಮಾಡುತ್ತದೆ ಎಂದು ಆರ್​ಬಿಐ ಈ ಮೊದಲೇ ಹೇಳಿದೆ.

ಆರ್​ಬಿಐ ಹೊರಡಿಸಿದ್ದ ಕ್ರಿಪ್ಟೋಕರೆನ್ಸಿಗಳನ್ನು ನಿಷೇಧಿಸುವ ಅಧಿಸೂಚನೆಯನ್ನು ಮಾರ್ಚ್ 2020ರಲ್ಲಿ ಸುಪ್ರೀಂಕೋರ್ಟ್ ವಜಾಗೊಳಿಸಿತ್ತು. ಇದರ ನಂತರ ಫೆಬ್ರುವರಿ 5, 2021ರಲ್ಲಿ, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಡಿಜಿಟಲ್ ಕರೆನ್ಸಿ ಮಾದರಿಯನ್ನು ಸೂಚಿಸಲು ಕೇಂದ್ರೀಯ ಪ್ಯಾನಲ್​ ಅನ್ನು ರಚನೆ ಮಾಡಿತ್ತು.

ಇದನ್ನೂ ಓದಿ: Kurup Movie: ಕ್ರಿಮಿನಲ್​ಗಳಲ್ಲೇ ಕ್ರಿಮಿನಲ್​ನ ಸ್ಟೋರಿ ಇದು: ಚಿತ್ರದ ಕತೆಯ ಹಿಂದಿನ ಕತೆಯೇ ರೋಚಕ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.