ನವದೆಹಲಿ: ಮಹಾಮಾರಿ ಕೊರೊನಾ ವೈರಸ್ ವಿರುದ್ಧದ ಹೋರಾಟದ ವೇಳೆ ಸ್ಥಾಪಿತಗೊಂಡಿರುವ ಪಿಎಂ ಕೇರ್ಸ್ ಪಂಢ್ಗೆ ಸಂಬಂಧಿಸಿದಂತೆ ಮಹತ್ವದ ಸುದ್ದಿವೊಂದು ಬಹಿರಂಗಗೊಂಡಿದೆ. ಮಾರ್ಚ್ 2020ರಿಂದ ಮಾರ್ಚ್ 31, 2021ರ ನಡುವೆ ಒಟ್ಟು 10,990 ಕೋಟಿ ರೂ. ದೇಣಿಗೆ ರೂಪದಲ್ಲಿ ಸಂಗ್ರಹಗೊಂಡಿದ್ದು, ಇದರಲ್ಲಿ ಬಳಕೆಯಾಗಿರುವುದು ಮಾತ್ರ 3,976 ಕೋಟಿ ರೂ. ಎಂಬ ಮಾಹಿತಿ ಇದೀಗ ಹೊರಬಿದ್ದಿದೆ.
ಖಾಸಗಿ ಸುದ್ದಿವಾಹಿನಿವೊಂದು ವರದಿ ಮಾಡಿರುವ ಪ್ರಕಾರ ಮಾರ್ಚ್ 2021ರವರೆಗೆ ಪಿಎಂ ಕೇರ್ಸ್ ಫಂಡ್ನಲ್ಲಿ 7,041 ಕೋಟಿ ರೂ ಸಂಗ್ರಹವಾಗಿದ್ದು, ಆರಂಭದ ವರ್ಷದಲ್ಲಿ 3,976 ಕೋಟಿ ರೂ. ಸಂಗ್ರಹವಾಗಿದೆ ಎಂದು ತಿಳಿದು ಬಂದಿದೆ.
ಕೋವಿಡ್ ತುರ್ತು ಪರಿಸ್ಥಿತಿ ಸಂದರ್ಭಗಳಲ್ಲಿ ಈ ಹಣ ಬಳಕೆ ಮಾಡಿಕೊಳ್ಳುವ ಉದ್ದೇಶದಿಂದ ಪಿಎಂ ಕೇರ್ಸ್ ಸ್ಥಾಪನೆ ಮಾಡಲಾಗಿದ್ದು, ಇಲ್ಲಿಯವರೆಗೆ 3,976 ಕೋಟಿ ರೂ. ಮಾತ್ರ ಬಳಕೆ ಮಾಡಲಾಗಿದೆ ಎಂದು ವರದಿಯಾಗಿದೆ.
ಇದನ್ನೂ ಓದಿರಿ: ಗೀಸರ್ ಹೊರಸೂಸಿದ ವಿಷಾನಿಲ ಸೇವಿಸಿ ಏರ್ ಇಂಡಿಯಾ ಹಿರಿಯ ಲೇಡಿ ಪೈಲಟ್ ಸಾವು
6.6 ಕೋಟಿ ಕೋವಿಡ್ ಲಸಿಕೆ ಡೋಸ್ಗೋಸ್ಕರ, 1,392 ಕೋಟಿ ರೂ. ಖರ್ಚು ಮಾಡಿದ್ದು, 50 ಸಾವಿರ ವೆಂಟಿಲೇಟರ್ ಖರೀದಿಗೋಸ್ಕರ 1,344 ಕೋಟಿ ರೂ. ವೆಚ್ಚ ಮಾಡಿದೆ. ದೇಶದ ವಲಸೆ ಜನರ ಕಲ್ಯಾಣಕ್ಕಾಗಿ 1,000 ಕೋಟಿ ರೂ . ಖರ್ಚು ಮಾಡಲಾಗಿದೆ ಎಂದು ವರದಿ ಮಾಡಿದೆ. ಉಳಿದಂತೆ 162 ಆಮ್ಲಜನಕ ಉತ್ಪಾದನಾ ಘಟಕ ಸ್ಥಾಪನೆ ಮಾಡಲು 201.58 ಕೋಟಿ ರೂ. ಖರ್ಚು ಮಾಡಲಾಗಿದ್ದು,ಕೋವಿಡ್ ಲಸಿಕೆಗಳ ಪರೀಕ್ಷೆಗೋಸ್ಕರ 20.41 ಕೋಟಿ ರೂ.ಬಳಕೆಯಾಗಿದೆ.
ಇದೇ ವಿಚಾರವಾಗಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ವಿಪಕ್ಷಗಳು ಹಣ ಬಳಕೆಗೆ ಸಂಬಂಧಿಸಿದಂತೆ ತನಿಖೆ ನಡೆಸುವಂತೆ ಒತ್ತಾಯ ಮಾಡಿವೆ.