ಭಾವನಗರ್(ಗುಜರಾತ್): ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಗುಜರಾತ್‌ನ ಭಾವನಗರದಲ್ಲಿ ನಡೆದ ಸಾಮೂಹಿಕ ವಿವಾಹ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿ, ಸಮಾಜಕ್ಕೆ ಕೈಲಾದ ಕೊಡುಗೆ ನೀಡುವಂತೆ ನೂತನ ವಧು ವರರಿಗೆ ಮನವಿ ಮಾಡಿದರು.
-
Gujarat | Prime Minister Narendra Modi attends mass wedding ceremony – 'Papa Ni Pari' Lagnotsav 2022, in Bhavnagar https://t.co/Bwt1tD7FMw pic.twitter.com/4tjrf6Q9iy
— ANI (@ANI) November 6, 2022 " class="align-text-top noRightClick twitterSection" data="
">Gujarat | Prime Minister Narendra Modi attends mass wedding ceremony – 'Papa Ni Pari' Lagnotsav 2022, in Bhavnagar https://t.co/Bwt1tD7FMw pic.twitter.com/4tjrf6Q9iy
— ANI (@ANI) November 6, 2022Gujarat | Prime Minister Narendra Modi attends mass wedding ceremony – 'Papa Ni Pari' Lagnotsav 2022, in Bhavnagar https://t.co/Bwt1tD7FMw pic.twitter.com/4tjrf6Q9iy
— ANI (@ANI) November 6, 2022
ಇಲ್ಲಿನ ಜವಾಹರ್ ಮೈದಾನದಲ್ಲಿ ಸಾಮೂಹಿಕ ವಿವಾಹ ಕಾರ್ಯಕ್ರಮ ಆಯೋಜಿಸಲಾಗಿತ್ತು. ತಂದೆ ಕಳೆದುಕೊಂಡ 551 ಯುವತಿಯರು ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಮಹೋತ್ಸವದಲ್ಲಿ ಮೋದಿ ಪಾಲ್ಗೊಂಡು ನವ ಜೋಡಿಗಳಿಗೆ ಶುಭ ಹಾರೈಸಿದರು. "ಇಲ್ಲಿ ಮದುವೆಯಾಗಿರುವ ನವ ಜೋಡಿಗಳು, ಮನೆಯವರ ಒತ್ತಾಯಕ್ಕೆ, ಸಂಬಂಧಿಕರ ಒತ್ತಾಯಕ್ಕೆ ಗಂಟುಬಿದ್ದು ಮತ್ತೆ ಅದ್ಧೂರಿಯಾಗಿ ಮದುವೆಯಾಗಬೇಡಿ. ಸುಖಾಸುಮ್ಮನೆ ಹಣ ವ್ಯರ್ಥ ಮಾಡಬೇಡಿ. ಜೀವನದಲ್ಲಿ ಸುಖ, ಶಾಂತಿ ನೆಮ್ಮದಿಯಿಂದಿರಿ" ಎಂದು ಪ್ರಧಾನಿ ಕಿವಿಮಾತು ಹೇಳಿದರು.
-
Live: PM Shri @narendramodi attends mass wedding ceremony – 'Papa Ni Pari' Lagnotsav 2022, at Bhavnagar, Gujarat https://t.co/c0PJ3oQqM3
— BJP Gujarat (@BJP4Gujarat) November 6, 2022 " class="align-text-top noRightClick twitterSection" data="
">Live: PM Shri @narendramodi attends mass wedding ceremony – 'Papa Ni Pari' Lagnotsav 2022, at Bhavnagar, Gujarat https://t.co/c0PJ3oQqM3
— BJP Gujarat (@BJP4Gujarat) November 6, 2022Live: PM Shri @narendramodi attends mass wedding ceremony – 'Papa Ni Pari' Lagnotsav 2022, at Bhavnagar, Gujarat https://t.co/c0PJ3oQqM3
— BJP Gujarat (@BJP4Gujarat) November 6, 2022
ಇದನ್ನೂ ಓದಿ: 'ನಾನು ಸೃಷ್ಟಿಸಿದ ಗುಜರಾತ್..' ಚುನಾವಣಾ ಪ್ರಚಾರದಲ್ಲಿ ಪ್ರಧಾನಿ ಮೋದಿ ಘೋಷಣೆ
ಗುಜರಾತ್ ರಾಜ್ಯವು ಕ್ರಮೇಣವಾಗಿ ಸಾಮೂಹಿಕ ವಿವಾಹ ಪದ್ಧತಿಯನ್ನು ಅಳವಡಿಸಿಕೊಂಡು ಬರುತ್ತಿದೆ. ಮೊದಲು, ಜನರು ಕೇವಲ ಪ್ರದರ್ಶನಕ್ಕಾಗಿ ಅದ್ಧೂರಿ ಮದುವೆ ಸಮಾರಂಭಗಳನ್ನು ಆಯೋಜಿಸಲು ಸಾಲವಾಗಿ ಹಣ ತೆಗೆದುಕೊಳ್ಳುತ್ತಿದ್ದರು. ಆದರೆ ಈಗ ಜಾಗೃತರಾಗಿದ್ದಾರೆ. ಸಾಮೂಹಿಕ ವಿವಾಹ ಕಾರ್ಯಕ್ರಮಗಳತ್ತ ಮುಖ ಮಾಡಿದ್ದಾರೆ ಎಂದು ಮೋದಿ ಮೆಚ್ಚುಗೆ ವ್ಯಕ್ತಪಡಿಸಿದರು.
ಡಿಸೆಂಬರ್‌ನಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು ನರೇಂದ್ರ ಮೋದಿ ಗುಜರಾತ್ ಪ್ರವಾಸದಲ್ಲಿದ್ದಾರೆ. ಡಿಸೆಂಬರ್ 1 ಹಾಗೂ ಡಿ.5ರಂದು ಎರಡು ಹಂತಗಳಲ್ಲಿ ಮತದಾನ ನಡೆಯಲಿದೆ. ಡಿ.8 ರಂದು ಮತ ಎಣಿಕೆ ನಿಗದಿಯಾಗಿದೆ. ಸಾಮೂಹಿಕ ವಿವಾಹ ಮಹೋತ್ಸವದಲ್ಲಿ ಪಾಲ್ಗೊಳ್ಳುವುದಕ್ಕೂ ಮುನ್ನ ಅವರು ವಲ್ಸಾದ್ ಜಿಲ್ಲೆಯಲ್ಲಿ ನಡೆದ ಸಾವರ್ಜನಿಕ ರ‍್ಯಾಲಿ ಉದ್ದೇಶಿಸಿ ಮಾತನಾಡಿದರು.