ಹೈದರಾಬಾದ್: ಇಂದು ಜಗತ್ತಿನಾದ್ಯಂತ ನೆಲೆಸಿರುವ ಕ್ರೈಸ್ತ ಧರ್ಮೀಯರು ಈಸ್ಟರ್ ಹಬ್ಬವನ್ನು ಬಹಳ ವಿಜೃಂಭಣೆಯಿಂದ ಆಚರಣೆ ಮಾಡುತ್ತಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಈಸ್ಟರ್ ಹಬ್ಬದ ಶುಭಾಶಯ ತಿಳಿಸಿ ಟ್ವೀಟ್ ಮಾಡಿದ್ದಾರೆ.
"ಈಸ್ಟರ್ ಹಬ್ಬದ ಶುಭಾಶಯಗಳು. ಈ ದಿನ, ನಾವು ಯೇಸುಕ್ರಿಸ್ತನ ಧಾರ್ಮಿಕ ಬೋಧನೆಗಳನ್ನು ನೆನಪಿಸಿಕೊಳ್ಳುತ್ತೇವೆ. ಸಾಮಾಜಿಕ ಸಬಲೀಕರಣಕ್ಕೆ ಅವರು ನೀಡಿದ ಆದ್ಯತೆ ವಿಶ್ವದಾದ್ಯಂತ ಲಕ್ಷಾಂತರ ಜನರನ್ನು ಪ್ರೇರೇಪಿಸುತ್ತದೆ" ಎಂದು ಬರೆದಿದ್ದಾರೆ.
-
Greetings on Easter!
— Narendra Modi (@narendramodi) April 4, 2021 " class="align-text-top noRightClick twitterSection" data="
On this day, we remember the pious teachings of Jesus Christ. His emphasis on social empowerment inspires millions across the world.
">Greetings on Easter!
— Narendra Modi (@narendramodi) April 4, 2021
On this day, we remember the pious teachings of Jesus Christ. His emphasis on social empowerment inspires millions across the world.Greetings on Easter!
— Narendra Modi (@narendramodi) April 4, 2021
On this day, we remember the pious teachings of Jesus Christ. His emphasis on social empowerment inspires millions across the world.
ಇನ್ನು ಇದೇ ವೇಳೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಸಹ ಟ್ವೀಟ್ ಮಾಡಿ ಶುಭಕೋರಿದ್ದಾರೆ. "ಪ್ರಪಂಚದಾದ್ಯಂತ ಆಚರಿಸಲ್ಪಡುವ ಯೇಸುಕ್ರಿಸ್ತನ ಪುನರುತ್ಥಾನವು ನಮಗೆ ಭರವಸೆ ಮತ್ತು ಸಂತೋಷವನ್ನು ನೀಡುತ್ತದೆ. ಈ ಹಬ್ಬ ಮಾನವೀಯತೆ, ಒಳ್ಳೆಯತನದ ಬಗ್ಗೆ ನಂಬಿಕೆಯನ್ನು ಪುನರುಚ್ಚರಿಸುತ್ತದೆ. ಯೇಸುಕ್ರಿಸ್ತನ ಬೋಧನೆಗಳು ನಮ್ಮ ಸಮಾಜದಲ್ಲಿ ಪ್ರೀತಿ, ವಾತ್ಸಲ್ಯ ಮತ್ತು ಸಾಮರಸ್ಯದ ಬಂಧಗಳನ್ನು ಬಲಪಡಿಸಲಿ" ಎಂದಿದ್ದಾರೆ.
-
Easter greetings to all! The resurrection of Jesus Christ, celebrated across the world, gives us hope and happiness; reaffirms our faith in innate goodness of humanity. May the teachings of Jesus Christ strengthen the bonds of love, affection and harmony in our society!
— President of India (@rashtrapatibhvn) April 4, 2021 " class="align-text-top noRightClick twitterSection" data="
">Easter greetings to all! The resurrection of Jesus Christ, celebrated across the world, gives us hope and happiness; reaffirms our faith in innate goodness of humanity. May the teachings of Jesus Christ strengthen the bonds of love, affection and harmony in our society!
— President of India (@rashtrapatibhvn) April 4, 2021Easter greetings to all! The resurrection of Jesus Christ, celebrated across the world, gives us hope and happiness; reaffirms our faith in innate goodness of humanity. May the teachings of Jesus Christ strengthen the bonds of love, affection and harmony in our society!
— President of India (@rashtrapatibhvn) April 4, 2021
ಹಬ್ಬದ ಬಗ್ಗೆ ಒಂದಿಷ್ಟು ಮಾಹಿತಿ...
ಈಸ್ಟರ್ ಹಬ್ಬವು ಕ್ರೈಸ್ತ ಮತೀಯರ ಮುಖ್ಯ ಹಬ್ಬ. ಕ್ರಿಸ್ತನ ಪುನರುತ್ಥಾನದ ವಾರ್ಷಿಕ ಸ್ಮರಣೆಗಾಗಿ ಇದನ್ನು ಆಚರಿಸುತ್ತಾರೆ. ಹಬ್ಬ ಸಾಮಾನ್ಯವಾಗಿ ಪ್ರತಿ ವರ್ಷ ಮಾರ್ಚ್ 22ರಿಂದ ಏಪ್ರಿಲ್ 25ರ ಒಳಗೆ ಬರುತ್ತದೆ. ಹಬ್ಬಕ್ಕೆ ಮುನ್ನ 40 ದಿನಗಳ ಕಾಲ ಉಪವಾಸ ಮಾಡುತ್ತಾರೆ. ಗುಡ್ ಫ್ರೈಡೆ ಬಳಿಕ ಬರುವ ಮೊದಲ ಭಾನುವಾರವೇ ಈಸ್ಟರ್ ಹಬ್ಬ. ಆ ದಿನ ಮೇಣದಬತ್ತಿಗಳನ್ನು ಹಚ್ಚಿ, ಸಂತೋಷದಿಂದ ಹಬ್ಬ ಆಚರಿಸಲಾಗುತ್ತದೆ.