ETV Bharat / bharat

‘ಬೆಂಕಿಯೊಂದಿಗೆ ಆಟವಾಡುತ್ತಿದ್ದೀರ’.. ಮಸೂದೆಗಳನ್ನು ಮುಂದೂಡಲಾಗುವುದಿಲ್ಲ ಎಂದ ಸುಪ್ರೀಂ - ಪಂಜಾಬ್ ವಿಶೇಷ ಅಧಿವೇಶನ

ಪಂಜಾಬ್ ಸರ್ಕಾರ ಮತ್ತು ರಾಜ್ಯಪಾಲರ ನಡುವೆ ನಡೆಯುತ್ತಿರುವ ವಿವಾದವನ್ನು ಸುಪ್ರೀಂ ಕೋರ್ಟ್ ತೀವ್ರ ಕಳವಳಕಾರಿ ವಿಷಯ ಎಂದು ಹೇಳಿದೆ.

Playing with fire  SC to Punjab Governor  over delay in assent to bills  Punjab Governor Banwarilal Purohit “  Chief Justice of India DY Chandrachud  ಮಸೂದೆಗಳನ್ನು ಮುಂದೂಡಲಾಗುವುದಿಲ್ಲ  ಬೆಂಕಿಯೊಂದಿಗೆ ಆಟವಾಡುತ್ತಿದ್ದೀರಾ  ಪಂಜಾಬ್ ಸರ್ಕಾರ ಮತ್ತು ರಾಜ್ಯಪಾಲ  ಸುಪ್ರೀಂ ಕೋರ್ಟ್ ತೀವ್ರ ಕಳವಳ  ಪಂಜಾಬ್ ಮತ್ತು ತಮಿಳುನಾಡು ವಿಧಾನಸಭೆ  ಮಸೂದೆಗಳಿಗೆ ರಾಜ್ಯಪಾಲರ ಅನುಮೋದನೆ ವಿಳಂಬ  ಪಂಜಾಬ್ ವಿಶೇಷ ಅಧಿವೇಶನ  ಜೂನ್‌ನಲ್ಲಿ ಕರೆದಿದ್ದ ಅಧಿವೇಶನ
ಮಸೂದೆಗಳನ್ನು ಮುಂದೂಡಲಾಗುವುದಿಲ್ಲ, ನಿರ್ಧಾರ ತೆಗೆದುಕೊಳ್ಳಿ ಎಂದ ಸುಪ್ರೀಂ
author img

By ETV Bharat Karnataka Team

Published : Nov 11, 2023, 8:24 AM IST

ನವದೆಹಲಿ: ಪಂಜಾಬ್ ಮತ್ತು ತಮಿಳುನಾಡು ವಿಧಾನಸಭೆ ಅಂಗೀಕರಿಸಿದ ಹಲವು ಮಸೂದೆಗಳಿಗೆ ರಾಜ್ಯಪಾಲರ ಅನುಮೋದನೆ ವಿಳಂಬವಾಗುತ್ತಿರುವುದಕ್ಕೆ ಸುಪ್ರೀಂ ಕೋರ್ಟ್ ಬೇಸರ ವ್ಯಕ್ತಪಡಿಸಿದೆ. ಪಂಜಾಬ್ ಮತ್ತು ತಮಿಳುನಾಡು ಸರ್ಕಾರಗಳು ತಮ್ಮ ರಾಜ್ಯಪಾಲರ ವಿರುದ್ಧ ವಿಧಾನಸಭೆ ಅಂಗೀಕರಿಸಿದ ಮಸೂದೆಗಳನ್ನು ಸ್ಥಗಿತಗೊಳಿಸಿವೆ ಎಂದು ದೂರಿದ್ದವು. ಇಂತಹ ವಿಚಾರಗಳನ್ನು ಸುಪ್ರೀಂ ಕೋರ್ಟ್ ಗಂಭೀರ ಮತ್ತು ಕಳವಳಕಾರಿ ವಿಷಯ ಎಂದು ಹೇಳಿದೆ.

ಪಂಜಾಬ್ ಸರ್ಕಾರದ ಅರ್ಜಿಯ ಮೇರೆಗೆ ಸುಪ್ರೀಂ ಕೋರ್ಟ್ ರಾಜ್ಯಪಾಲ ಬನ್ವಾರಿಲಾಲ್ ಪುರೋಹಿತ್ ಅವರಿಗೆ ಕಳುಹಿಸಿದ ಮಸೂದೆಗಳ ಬಗ್ಗೆ ನಿರ್ಧಾರ ತೆಗೆದುಕೊಳ್ಳುವಂತೆ ಸೂಚಿಸಿದೆ. ತಮಿಳುನಾಡು ರಾಜ್ಯಪಾಲ ಆರ್.ಎನ್. ರವಿ ವಿರುದ್ಧ ರಾಜ್ಯ ಸರ್ಕಾರ ಸಲ್ಲಿಸಿರುವ ಅರ್ಜಿಯ ವಿಚಾರಣೆಗೆ ಮುಂದಿನ ದಿನಾಂಕವನ್ನು ನೀಡಲಾಗಿದೆ.

ಜೂನ್ ಮತ್ತು ಅಕ್ಟೋಬರ್ ತಿಂಗಳುಗಳಲ್ಲಿ ಪಂಜಾಬ್ ವಿಶೇಷ ಅಧಿವೇಶನಗಳನ್ನು ಕರೆಯಲಾಗಿತ್ತು. ಜೂನ್‌ನಲ್ಲಿ ಕರೆದಿದ್ದ ಅಧಿವೇಶನದಲ್ಲಿ ನಾಲ್ಕು ಮಸೂದೆಗಳನ್ನು ಅಂಗೀಕರಿಸಲಾಗಿತ್ತು. ರಾಜ್ಯಪಾಲ ಬನ್ವಾರಿಲಾಲ್ ಪುರೋಹಿತ್ ಅವರು ಮಸೂದೆಗಳಿಗೆ ತಮ್ಮ ಅನುಮೋದನೆಯನ್ನು ನೀಡಲಿಲ್ಲ. ವಿಶೇಷ ಅಧಿವೇಶನವನ್ನು ಕಾನೂನುಬಾಹಿರ ಎಂದು ಬಣ್ಣಿಸಿದರು. ಇದರ ವಿರುದ್ಧ ಪಂಜಾಬ್‌ನ ಆಮ್ ಆದ್ಮಿ ಪಕ್ಷ (ಎಎಪಿ) ಸರ್ಕಾರ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು.

ವಿಧಾನಸಭೆಯ ವಿಶೇಷ ಅಧಿವೇಶನದಲ್ಲಿ ಅಂಗೀಕರಿಸಿದ ಮಸೂದೆಗಳನ್ನು ರಾಜ್ಯಪಾಲ ಬನ್ವಾರಿಲಾಲ್ ಪುರೋಹಿತ್ ತಡೆಹಿಡಿದಿದ್ದಾರೆ ಎಂದು ಪಂಜಾಬ್ ಸರ್ಕಾರ ದೂರಿತ್ತು. ಆದರೆ ರಾಜ್ಯಪಾಲ ಬನ್ವಾರಿಲಾಲ್ ಪುರೋಹಿತ್ ಅವರು ಮಸೂದೆಗಳನ್ನು ಅಂಗೀಕರಿಸಿದ ವಿಧಾನಸಭೆಯ ಅಧಿವೇಶನ ಅಸಿಂಧು ಎಂದು ಹೇಳಿದ್ದಾರೆ. ಜೂನ್ ಮತ್ತು ಅಕ್ಟೋಬರ್‌ನಲ್ಲಿ ಕರೆಯಲಾದ ವಿಧಾನಸಭೆಯ ಅಧಿವೇಶನಗಳನ್ನು ಮಾನ್ಯವೆಂದು ಘೋಷಿಸಲು ಪಂಜಾಬ್ ಸರ್ಕಾರವು ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಿತ್ತು.

ನವೆಂಬರ್ 10 ರಂದು ಈ ವಿಷಯದ ವಿಚಾರಣೆಯ ವೇಳೆ ಸುಪ್ರೀಂ ಕೋರ್ಟ್‌ನ ತ್ರಿಸದಸ್ಯ ಪೀಠವು ಕಟ್ಟುನಿಟ್ಟಾದ ಕ್ರಮಗಳನ್ನು ಕೈಗೊಂಡಿತು. ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿವೈ ಚಂದ್ರಚೂಡ್, ನ್ಯಾಯಮೂರ್ತಿ ಜೆಬಿ ಪರ್ದಿವಾಲಾ ಮತ್ತು ನ್ಯಾಯಮೂರ್ತಿ ಮನೋಜ್ ಮಿಶ್ರಾ ಒಳಗೊಂಡ ಪೀಠ, ರಾಜ್ಯಪಾಲರು ವಿಧಾನಸಭೆ ಅಧಿವೇಶನದ ಸಿಂಧುತ್ವದ ಬಗ್ಗೆ ಅನುಮಾನ ವ್ಯಕ್ತಪಡಿಸಲು ಯಾವುದೇ ಸಾಂವಿಧಾನಿಕ ಆಧಾರವಿಲ್ಲ ಎಂದು ತಿಳಿಸಿದೆ.

ಭಾರತದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಇದೆ. ರಾಜ್ಯಪಾಲರು ಸಾಂವಿಧಾನಿಕ ಮುಖ್ಯಸ್ಥರ ಸ್ಥಾನಮಾನವನ್ನು ಹೊಂದಿದ್ದಾರೆ. ಆದರೆ ಕೆಲವು ವಿಷಯಗಳನ್ನು ಹೊರತುಪಡಿಸಿ ಹೆಚ್ಚಿನ ವಿಷಯಗಳಲ್ಲಿ ಅವರು ಸಚಿವ ಸಂಪುಟದ ಸಲಹೆಯ ಮೇರೆಗೆ ಕೆಲಸ ಮಾಡಬೇಕಾಗುತ್ತದೆ ಎಂದು ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ನೇತೃತ್ವದ ಪೀಠ ಹೇಳಿದೆ.

ಚುನಾಯಿತ ಪ್ರತಿನಿಧಿಗಳು ಯಾವುದೇ ಕಾನೂನನ್ನು ಜಾರಿಗೊಳಿಸಿದರೆ ಅದನ್ನು ತಡೆಹಿಡಿಯಲಾಗುವುದಿಲ್ಲ. ರಾಜ್ಯಪಾಲರಿಗೆ ವಿಧೇಯಕವನ್ನು ಹಿಂದಿರುಗಿಸುವ ಹಕ್ಕಿದೆ. ಆದರೆ ವಿಧಾನಸಭೆಯು ಅದೇ ಮಸೂದೆಯನ್ನು ಮತ್ತೊಮ್ಮೆ ಅಂಗೀಕರಿಸಿದರೆ ರಾಜ್ಯಪಾಲರು ಅದಕ್ಕೆ ಒಪ್ಪಿಗೆ ನೀಡಬೇಕಾಗುತ್ತದೆ. ರಾಜ್ಯ ವಿಧಾನಸಭೆ ಅಂಗೀಕರಿಸಿದ ಮಸೂದೆಗಳಿಗೆ ಒಪ್ಪಿಗೆ ನೀಡದ ಪಂಜಾಬ್ ರಾಜ್ಯಪಾಲರ ನಿಲುವಿಗೆ ಅಸಮಾಧಾನ ವ್ಯಕ್ತಪಡಿಸಿದ ಪೀಠ, ನೀವು ‘ಬೆಂಕಿಯೊಂದಿಗೆ ಆಟವಾಡುತ್ತಿದ್ದೀರಿ’ ಎಂದಿದೆ.

ರಾಜ್ಯಪಾಲರಿಗೆ ಸುಪ್ರೀಂ ಕೋರ್ಟ್ ನೀಡಿರುವ ಕಟ್ಟುನಿಟ್ಟಿನ ಸೂಚನೆಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಭಗವಂತ್​ ಮಾನ್​, ರಾಜ್ಯವನ್ನು ಸರಿಯಾಗಿ ನಡೆಸುವುದು ನನ್ನ ಜವಾಬ್ದಾರಿ. ನಾನು ಪಂಜಾಬ್ ಜನತೆಗೆ ಉತ್ತರದಾಯಿಯಾಗಿದ್ದೇನೆ. ನಾನು ಸದನದಲ್ಲಿ ಪ್ರಮುಖ ವಿಧೇಯಕಗಳನ್ನು ಅಂಗೀಕರಿಸಬೇಕು ಮತ್ತು ಅದಕ್ಕೆ ಅನುಗುಣವಾಗಿ ರಾಜ್ಯಪಾಲರು ಒಪ್ಪಿಗೆ ನೀಡಬೇಕು. ರಾಜ್ಯಪಾಲರ ಬಗ್ಗೆ ನನಗೆ ಅಪಾರ ಗೌರವವಿದ್ದು, ಇದು ನ್ಯಾಯಾಲಯದಲ್ಲಿ ಸೋಲು-ಗೆಲುವಿನ ವಿಚಾರವಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.

ಓದಿ: ಎಟಿಎಂ ದರೋಡೆ ಮಾಡುವ ಖದೀಮರನ್ನು ಮಟ್ಟ ಹಾಕಲು ಮಾಸ್ಟರ್​ ಪ್ಲಾನ್​ ರೂಪಿಸುವಂತೆ ಒಡಿಶಾ ಹೈಕೋರ್ಟ್ ಸೂಚನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.