ನವದಹೆಲಿ: ರಾಷ್ಟ್ರ ರಾಜಧಾನಿಯಲ್ಲಿ ಶಬ್ದ ಮಾಲಿನ್ಯ ನಿಂತ್ರಣಕ್ಕೆ ಸಿಎಂ ಅರವಿಂದ್ ಕೇಜ್ರಿವಾಲ್ ಸರ್ಕಾರ ಇನ್ನಿಲ್ಲದ ಕಸರತ್ತು ನಡೆಸುತ್ತಿದೆ. ಇನ್ಮುಂದೆ ಸಭೆ, ಸಮಾರಂಭಗಳಲ್ಲಿ ನಿಯಮ ಉಲ್ಲಂಘಿಸಿ ಧ್ವನಿವರ್ಧಕಗಳ ಮೂಲಕ ಶಬ್ದ ಮಾಲಿನ್ಯ ಮಾಡಿದರೆ 1 ಲಕ್ಷದ ವರೆಗೆ ದಂಡ ವಿಧಿಸುವುದಾಗಿ ಹೇಳಿದೆ. ಶಬ್ದ ಮಾಲಿನ್ಯದ ದಂಡದ ದರ ಪರಿಷ್ಕರಿಸಿರುವ ಸರ್ಕಾರ, ಹಬ್ಬಗಳ ಸಮಯದಲ್ಲಿ ಮನೆ, ವಸತಿ ಪ್ರದೇಶಗಳಲ್ಲಿ ನಿಗದಿಗಿಂತ ಹೆಚ್ಚಿನ ಅವಧಿಯಲ್ಲಿ ಪಟಾಕಿ ಸಿಡಿಸಿದರೆ 1 ಸಾವಿರ ದಂಡ. ಸೈಲೆಂಟ್ ವಲಯಗಳಲ್ಲಿ ನಿಯಮ ಉಲ್ಲಂಘಿಸಿದರೆ 3 ಸಾವಿರ ದಂಡ ವಿಧಿಸಲಿದೆ.
ಮದುವೆ, ಸಾರ್ವಜನಿಕ ರ‍್ಯಾಲಿಗಳು ಮತ್ತು ವಸತಿ ಪ್ರದೇಶಗಳಲ್ಲಿ ಧಾರ್ಮಿಕ ಕಾರ್ಯಗಳಲ್ಲಿ ನಿಯಮ ಉಲ್ಲಂಘಿ ಪಟಾಕಿ ಸುಟ್ಟರೆ 10,000 ರೂ, ಸೈಲೆಂಟ್ ವಲಯಗಳಲ್ಲಿ ಈ ದಂಡ ಮೊತ್ತ 20,000 ಇದೆ. ಇದೇ ಪ್ರದೇಶಗಳಲ್ಲಿ 2ನೇ ಬಾರಿ ನಿಯಮ ಉಲ್ಲಂಘಟಿಸಿದ್ರೆ 40 ಸಾವಿರ ಹಾಗೂ 1 ಲಕ್ಷಕ್ಕಿಂತ ಹೆಚ್ಚಿನ ದಂಡವನ್ನು ವಿಧಿಸುತ್ತದೆ. ಮಾತ್ರವಲ್ಲದೆ ಪ್ರದೇಶವನ್ನು ಸೀಲ್ ಮಾಡುವ ಎಚ್ಚರಿಕೆಯನ್ನೂ ಸರ್ಕಾರ ನೀಡಿದೆ.
ಇನ್ನು, ಜನರೇಟರ್ ಸೆಟ್‌ಗಳಿಂದ ಉಂಟಾಗುವ ಮಾಲಿನ್ಯವನ್ನು ಕಡಿಮೆ ಮಾಡಲು ಮಾಲಿನ್ಯ ನಿಯಂತ್ರಣ ಸಮಿತಿ ಕಠಿಣ ಕ್ರಮಗಳನ್ನು ಕೈಗೊಂಡಿದೆ. ಅನುಮತಿ ಇಲ್ಲದೆ ಲೌಡ್ ಸ್ಪೀಕರ್ ಬಳಸಿದರೆ 10 ಸಾವಿರ ದಂಡ ವಿಧಿಸಲಾಗುತ್ತದೆ.
ಇದನ್ನೂ ಓದಿ: ಕೇಂದ್ರ ಸಂಪುಟದಲ್ಲಿ ಶೇ.90ರಷ್ಟು ಸಚಿವರು ಕೋಟ್ಯಧಿಪತಿಗಳು; ಶೇ.42ರಷ್ಟು ಕ್ರಿಮಿನಲ್ಸ್: ADR ವರದಿ
62.5 ರಿಂದ 1000 ಕೆವಿಎ ಜನರೇಟರ್ ಅನ್ನು ಬಳಸಿದರೆ 25 ಸಾವಿರ, 1 ಸಾವಿರಕ್ಕೂ ಹೆಚ್ಚಿನ ಕೆವಿಎ ಸಾಮರ್ಥ್ಯದ ಜನರೇಟರ್ ಬಳಸಿ ಶಬ್ದ ಮಾಡಿದರೆ 1 ಲಕ್ಷ ರೂಪಾಯಿ ಫೈನ್ ಕಟ್ಟಬೇಕು. ಭಾರಿ ಶಬ್ದ ಮಾಡುವಂತ ನಿರ್ಮಾಣದ ಉಪಕರಣಗಳನ್ನು ಬಳಸಿದರೆ 50 ಸಾವಿರ ದಂಡ ವಿಧಿಸಲಾಗುತ್ತದೆ. ಸದ್ಯ ದೆಹಲಿಯಲ್ಲಿರುವ ಈ ನಿಮಯ ಮುಂದಿನ ದಿನಗಳಲ್ಲಿ ಸಿಲಿಕಾನ್ ಸಿಟಿ ಬೆಂಗಳೂರಿಗೆ ಬಂದರೂ ಅಚ್ಚರಿ ಇಲ್ಲ.