ETV Bharat / bharat

ಪಿಯೂಷ್​ ಜೈನ್ ನಿವಾಸದ ಮೇಲೆ ಐಟಿ ದಾಳಿ, ಪುತ್ರ ಪ್ರತ್ಯೂಷ್ ಜೈನ್ ವಶಕ್ಕೆ: ನಿಗೂಢ ಸ್ಥಳದಲ್ಲಿ ವಿಚಾರಣೆ - ಪ್ರತ್ಯೂಷ್ ಜೈನ್ ವಿಚಾರಣೆ ನಡೆಸುತ್ತಿರುವ ಐಟಿ ಅಧಿಕಾರಿಗಳು

ಉತ್ತರ ಪ್ರದೇಶದ ಉದ್ಯಮಿ ಹಾಗೂ ಸಮಾಜವಾದಿ ಪಕ್ಷದ ನಾಯಕ ಪಿಯೂಷ್ ಜೈನ್ ನಿವಾಸದ ಮೇಲೆ ಐಟಿ ದಾಳಿ ನಡೆಸಿದ್ದು, ಪುತ್ರ ಪ್ರತ್ಯೂಷ್ ಜೈನ್​ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

piyush-jain-son-pratyush-detained-by-income-tax-team-in-kanpur
ಪಿಯೂಷ್​ ಜೈನ್ ನಿವಾಸದ ಮೇಲೆ ಐಟಿ ದಾಳಿ, ಪುತ್ರ ಪ್ರತ್ಯೂಷ್ ಜೈನ್ ವಶಕ್ಕೆ, ನಿಗೂಢ ಸ್ಥಳದಲ್ಲಿ ವಿಚಾರಣೆ
author img

By

Published : Dec 24, 2021, 3:31 PM IST

ಕಾನ್ಪುರ(ಉತ್ತರ ಪ್ರದೇಶ): ಸಮಾಜವಾದಿ ಪಕ್ಷದ ನಾಯಕ ಮತ್ತು ಉದ್ಯಮಿಯಾಗಿರುವ ಪಿಯೂಷ್ ಜೈನ್ ಅವರ ಮನೆ, ಕಾರ್ಖಾನೆ ಮತ್ತು ಇತರ ಆಸ್ತಿಗಳ ಮೇಲೆ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿ, ಕೋಟ್ಯಂತರ ರೂಪಾಯಿ ನಗದು ಮತ್ತು ಜಪ್ತಿ ಮಾಡಿದ್ದು, ಶುಕ್ರವಾರವೂ ಶೋಧ ಕಾರ್ಯ ಮುಂದುವರೆದಿದೆ.

ಶೋಧ ಕಾರ್ಯ ನಡೆಸುವುದರ ಜೊತೆಗೆ ಪಿಯೂಷ್ ಜೈನ್ ಪುತ್ರನಾದ ಪ್ರತ್ಯೂಷ್ ಜೈನ್ ಅನ್ನು ವಶಕ್ಕೆ ಪಡೆದಿರುವ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು, ಅವರನ್ನು ಅಜ್ಞಾತ ಸ್ಥಳಕ್ಕೆ ಕರೆದೊಯ್ದು ವಿಚಾರಣೆ ನಡೆಸುತ್ತಿದ್ದಾರೆ. ಮತ್ತೊಂದೆಡೆ ಶಿಖರ್ ಪಾನ್ ಮಸಾಲಾ ಕಂಪನಿಯ ಮಾಲೀಕ ಪ್ರವೀಣ್ ಜೈನ್​ಗೆ ಸಂಬಂಧಿಸಿದ ಸ್ವತ್ತುಗಳ ಮೇಲೆಯೂ ಆದಾಯ ತೆರಿಗೆ ಇಲಾಖಾಧಿಕಾರಿಗಳು ದಾಳಿ ನಡೆಸಿದ್ದಾರೆ.

ಸದ್ಯಕ್ಕೆ ಪಿಯೂಷ್ ಜೈನ್ ಅವರ ನಿವಾಸದಲ್ಲಿ ಐಟಿ ಅಧಿಕಾರಿಗಳು ಬೀಡುಬಿಟ್ಟಿದ್ದು, ನಕಲಿ ಸಂಸ್ಥೆಗಳ ಹೆಸರಿನಲ್ಲಿ ಕೋಟ್ಯಂತರ ರೂಪಾಯಿಯ ಜಿಎಸ್​ಟಿಯನ್ನು ಪಿಯೂಷ್ ಜೈನ್ ವಂಚಿಸಿದ್ದಾರೆ ಎಂಬ ಆರೋಪದ ತನಿಖೆ ನಡೆಸಲಾಗುತ್ತಿದೆ. ಪಿಯೂಷ್ ಜೈನ್ ಅವರ ಮನೆಯಲ್ಲಿದ್ದ ನಗದನ್ನು ಯಂತ್ರಗಳ ಮೂಲಕ ಎಣಿಸಲಾಗುತ್ತಿದೆ.

ಕಾನ್ಪುರ ನಗರದ ನಿವಾಸಿಗಳಾದ ಪಿಯೂಷ್ ಜೈನ್ ಮತ್ತು ಅವರ ಸಹೋದರ ಅಂಬರೀಶ್ ಜೈನ್ ಸುಗಂಧ ದ್ರವ್ಯಗಳ ವ್ಯಾಪಾರದಲ್ಲಿ ಅತಿ ದೊಡ್ಡ ಉದ್ಯಮಿಗಳಾಗಿದ್ದು, ಇದರ ಜೊತೆಗೆ ಪಾನ್ ಮಸಾಲಾದಲ್ಲಿ ಬಳಸುವ ಪರಿಮಳಯುಕ್ತ ಪದಾರ್ಥಗಳನ್ನೂ ಇವರ ಕಂಪನಿ ಉತ್ಪಾದನೆ ಮಾಡುತ್ತದೆ. ಇವರ ಕಂಪನಿಯಾದ ಓಡೋ ವಿದೇಶಕ್ಕೂ ಸರಕುಗಳನ್ನು ಪೂರೈಕೆ ಮಾಡುತ್ತದೆ.

ಇತ್ತೀಚೆಗಷ್ಟೇ ಸಮಾಜವಾದಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಅಖಿಲೇಶ್ ಯಾದವ್ ಈ ಕಂಪನಿಯ ಸುಗಂಧ ದ್ರವ್ಯವೊಂದನ್ನು ಬಿಡುಗಡೆ ಮಾಡಿದ್ದರು ಎಂಬುದು ಉಲ್ಲೇಖಾರ್ಹಯವಾಗಿದೆ. ಪಿಯೂಷ್ ಜೈನ್ ಅಖಿಲೇಶ್ ಯಾದವ್​ಗೆ ಆಪ್ತರು ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: IT Raid: SP ನಾಯಕನ ಮನೆಯಲ್ಲಿ 150 ಕೋಟಿ ಅಕ್ರಮ ಹಣ ಪತ್ತೆ: ಎಣಿಸಿ ಎಣಿಸಿ ಸುಸ್ತಾದ ಅಧಿಕಾರಿಗಳು..!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.