ETV Bharat / bharat

ಮುಂಬೈನ ಹೋಟೆಲ್​ಗಳಲ್ಲಿ ಚಿಕನ್​ ಎಂದು ಪಾರಿವಾಳದ ಬಿರಿಯಾನಿ: ನಿವೃತ್ತ ಸೇನಾಧಿಕಾರಿ ದೂರು - ಸಾಕ್ಷಿ ಸಮೇತ ನಿವೃತ್ತ ಅಧಿಕಾರಿ ಸಲ್ಲಿಸಿದ ದೂರು

ಮುಂಬೈನ ಕೆಲವು ಹೋಟೆಲ್​ಗಳಲ್ಲಿ ಪಾರಿವಾಳದ ಬಿರಿಯಾನಿಯನ್ನು ಚಿಕನ್​ ಬಿರಿಯಾನಿ ಎಂದು ನಂಬಿಸಿ ನೀಡಲಾಗುತ್ತಿದೆ. ನಗರದ ರೆಸಿಡೆನ್ಸಿಯಲ್​ ಸೊಸೈಟಿ ಮಹಡಿ ಮೇಲೆ ಪಾರಿವಾಳಗಳನ್ನು ಸಾಕಿ ಅದನ್ನು ಗುಪ್ತವಾಗಿ ಮಾರಾಟ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.

ಮುಂಬೈನ ಹೋಟೆಲ್​ಗಳಲ್ಲಿ ಚಿಕನ್​ ಎಂದು ಪರಿವಾಳ ಬಿರಿಯಾನಿ: ನಿವೃತ್ತ ಸೇನಾಧಿಕಾರಿ ದೂರು
http://10.10.50.85:6060/reg-lowres/27-November-2022/mh-mum-peigonchillyinmumbai-7210570_27112022222341_2711f_1669568021_202.jpg
author img

By

Published : Nov 28, 2022, 10:05 AM IST

ಮುಂಬೈ: ಚಿಕನ್​ ಬಿರಿಯಾನಿ ಎಂದು ಪಾರಿವಾಳದ ಬಿರಿಯಾನಿಯನ್ನು ಗ್ರಾಹಕರಿಗೆ ರೆಸ್ಟೋರೆಂಟ್​​ಗಳಲ್ಲಿ ಮಾರಾಟ ಮಾಡುತ್ತಿರುವ ಘಟನೆ ಮಹಾನಗರಿಯಲ್ಲಿ ಬೆಳಕಿಗೆ ಬಂದಿದೆ. ಈ ಸಂಬಂದ ನಿವೃತ್ತ ಸೇನಾ ಅಧಿಕಾರಿ ಪೊಲೀಸರಿಗೆ ದೂರು ಕೂಡ ಸಲ್ಲಿಸಿದ್ದಾರೆ.

ಮುಂಬೈನ ಹೋಟೆಲ್​ಗಳಲ್ಲಿ ಚಿಕನ್​ ಎಂದು ಪರಿವಾಳ ಬಿರಿಯಾನಿ: ನಿವೃತ್ತ ಸೇನಾಧಿಕಾರಿ ದೂರು
ಮುಂಬೈನ ಹೋಟೆಲ್​ಗಳಲ್ಲಿ ಚಿಕನ್​ ಎಂದು ಪರಿವಾಳ ಬಿರಿಯಾನಿ: ನಿವೃತ್ತ ಸೇನಾಧಿಕಾರಿ ದೂರು

ಮುಂಬೈನ ಕೆಲವು ಹೋಟೆಲ್​ಗಳಲ್ಲಿ ಪಾರಿವಾಳದ ಬಿರಿಯಾನಿಯನ್ನು ಚಿಕನ್​ ಬಿರಿಯಾನಿ ಎಂದು ನಂಬಿಸಿ ನೀಡಲಾಗುತ್ತಿದೆ. ನಗರದ ರೆಸಿಡೆನ್ಸಿಯಲ್​ ಸೊಸೈಟಿ ಮಹಡಿ ಮೇಲೆ ಪಾರಿವಾಳಗಳನ್ನು ಸಾಕಿ ಅದನ್ನು ಗುಪ್ತವಾಗಿ ಮಾರಾಟ ಮಾಡಲಾಗುತ್ತಿದೆ ಎಂದು ಆರೋಪಿಸಿದ್ದು, ಈ ಸಂಬಂಧ ಸಿಯೊನ್​ ಪೊಲೀಸ್​ ಠಾಣೆಯಲ್ಲಿ ನಿವೃತ್ತ ಅಧಿಕಾರಿ ಪ್ರಕರಣ ದಾಖಲಿಸಿದ್ದು, ಈ ಸಂಬಂಧ ತನಿಖೆ ಆರಂಭಿಸಲಾಗಿದೆ.

ಏನಿದು ಘಟನೆ?: ಸಿಯೊನ್​ ಪೊಲೀಸ್​ ಠಾಣೆ ಪ್ರದೆಶದಲ್ಲಿ ನರೊತ್ತಮ್​​ ನಿವಾಸ್​ ಕೋ ಆಪರೇಟಿವ್ ಸೊಸೈಟಿಯಲ್ಲಿ ನಿವೃತ್ತ ಅಧಿಕಾರಿಗೆ ಹರೇಶ್​ ಗಗಲನಿ(71) ವಾಸ ಮಾಡುತ್ತಿದ್ದಾರೆ. ಈ ಸೊಸೈಟಿ ಮಹಡಿ ಮೇಲೆ ಪಾರಿವಾಳಗಳನ್ನು ಇಟ್ಟು, ಸಾಕಿ ಅದನ್ನು ಹೋಟೆಲ್​​ಗಳಿಗೆ ಮಾರಾಟ ಮಾಡಲಾಗುತ್ತಿದೆ. ಈ ಸಂಬಂಧ ತನಿಖೆ ನಡೆಸಿರುವ ನಿವೃತ್ತ ಅಧಿಕಾರಿ ಇದಕ್ಕೆ ಸಾಕ್ಷಿಯಾಗಿ ಫೋಟೋಗಳನ್ನು ತೆಗೆದಿದ್ದಾರೆ.

ಈ ಎಲ್ಲ ದಾಖಲೆ ಆಧಾರದ ಮೇಲೆ ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ಇನ್ನು ಪ್ರಕರಣ ಸಂಬಂದ ಪೊಲೀಸರು ಇನ್ನು ಯಾವುದೇ ಆರೋಪಿಗಳನ್ನು ಬಂಧಿಸಿಲ್ಲ. ಆದರೆ, ಈ ಪ್ರಕರಣ ಎಲ್ಲರಲ್ಲೂ ಕುತೂಹಲ ಮತ್ತು ಅಚ್ಚರಿ ಮೂಡಿಸಿದೆ.

ಪಾರಿವಾಳ ತಂದು ಪೋಷಣೆ: ದೂರಿನಲ್ಲಿ ನಮೂದಿಸಿರುವ ಆರೋಪಿ ಅಭಿಷೇಕ್​ ಸಾವಂತ್​ ಈ ಪಾರಿವಾಳಗಳ ಮಾಲೀಕನಾಗಿದ್ದು, ಈತ ಇದೇ ಸೊಸೈಟಿಯಲ್ಲಿ ವಾಸಿಸುತ್ತಿದ್ದಾರೆ. ಮಾರ್ಚ್​ 2022ರಿಂದ ಮೇ 2022ರವರೆಗೆ ಪಾರಿವಾಳಗಳನ್ನು ಸಾಕಿದ ಆತ ಅವುಗಳನ್ನು ಹೋಟೆಲ್​ಗಳಿಗೆ ಮಾರಾಟ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ.

ಪ್ರಕರಣ ದಾಖಲು: ಸಾಕ್ಷಿ ಸಮೇತ ನಿವೃತ್ತ ಅಧಿಕಾರಿ ಸಲ್ಲಿಸಿದ ದೂರು ಆಧಾರದ ಮೇಲೆ ಪೊಲೀಸರು ಅಭಿಷೇಕ್​ ಸಾವಂತ್​ ಮೇಲೆ ಪ್ರಕರಣ ದಾಖಲಿಸಿದ್ದಾರೆ. ಈತ ಆತನ ಡ್ರೈವರ್​ ಸಹಾಯದಿಂದ ಪಾರಿವಾಳ ಮಾರಾಟ ಮಾಡುತ್ತಿದ್ದ. ಸೊಸೈಟಿಯ ಮಹಡಿ ಮೇಲೆ ವಾಚ್​ಮಾನ್​ ನೀರು ಬಿಡಲು ಹೋಗುತ್ತಿದ್ದ. ಈ ಬಗ್ಗೆ ಸಹಾಯಕ ಸೊಸೈಟಿಯ ಜನರಿಗೆ ಈ ವಿಷಯ ತಿಳಿಸಿದ್ದ. ಆದರೆ, ಈ ಬಗ್ಗೆ ಯಾರು ಹೆಚ್ಚಿನ ಗಮನ ನೀಡಿರಲಿಲ್ಲ. ಆದರೆ, ಈಗ ಪ್ರಕರಣ ಬೆಳಕಿಗೆ ಬಂದ ಬಳಿಕ ಅವರು ದೂರು ನೀಡಿದ್ದಾರೆ. ಸೆಕ್ಷನ್​ 34, 429 ಮತ್ತು 447 ಅಡಿ ದೂರು ದಾಖಲಿಸಲಾಗಿದ್ದು, ಇನ್ನೂ ಯಾರನ್ನೂ ಬಂಧಿಸಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: ಕ್ಷುಲ್ಲಕ ವಿಚಾರಕ್ಕೆ ಗಲಾಟೆ: ಪಾಟ್ನಾದ ರೈಲ್ವೆ ನಿಲ್ದಾಣದಲ್ಲಿ ಯುವಕನ ಮೇಲೆ ಗುಂಡಿನ ದಾಳಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.