ಕಂಧಮಾಲ್ (ಒಡಿಶಾ): ಕಲಿಕೆಗೆ ವಯಸ್ಸು, ಸ್ಥಾನಮಾನ ಸೇರಿದಂತೆ ಯಾವುದೂ ಅಡ್ಡಿಯಲ್ಲ. ಒಡಿಶಾದ ಫುಲ್ಭಾನಿಯ ಶಾಸಕ ಅಂಗದ ಕನ್ಹರ್ ಇದನ್ನು ಮಾಡಿ ತೋರಿಸಿದ್ದಾರೆ. ತಮ್ಮ 58ನೇ ವಯಸ್ಸಿನಲ್ಲಿ 10ನೇ ತರಗತಿ ಪರೀಕ್ಷೆ ಬರೆದು ಓದು ಅರ್ಧಕ್ಕೆ ನಿಲ್ಲಿಸಿದ್ದ ಅನೇಕರು ಮತ್ತು ಇತರೆ ಅನಕ್ಷರಸ್ಥ ಜನಪ್ರತಿನಿಧಿಗಳಿಗೆ ಈ ಎಂಎಲ್ಎ ಮಾದರಿಯಾಗಿದ್ದಾರೆ.
ಒಡಿಶಾದಲ್ಲಿ ಶುಕ್ರವಾರದಿಂದ 10ನೇ ತರಗತಿ ಅಥವಾ ಪ್ರೌಢಶಾಲಾ ಪ್ರಮಾಣಪತ್ರ (ಎಚ್ಎಸ್ಸಿ) ಅಂತಿಮ ಪರೀಕ್ಷೆಗಳು ಆರಂಭವಾಗಿವೆ. ಜನಪ್ರತಿನಿಧಿಗಳು ಪರೀಕ್ಷಾ ಕೇಂದ್ರಗಳಿಗೆ ವೀಕ್ಷಕರಾಗಿ ತೆರಳಿ ಪರಿಶೀಲನೆ ನಡೆಸುವುದು ಸಾಮಾನ್ಯ. ಆದರೆ, ಆಡಳಿತಾರೂಢ ಬಿಜೆಡಿ ಶಾಸಕ ಅಂಗದ ಕನ್ಹರ್ ಮಕ್ಕಳಂತೆ ಹಾಲ್ ಟಿಕೆಟ್ ಪಡೆದು ಪರೀಕ್ಷಾ ಕೇಂದ್ರಕ್ಕೆ ತೆರಳಿ ಪರೀಕ್ಷೆ ಬರೆದರು.
ಕಂಧಮಾಲ್ ಜಿಲ್ಲೆಯ ಪಟಿಭಾರಿ ಗ್ರಾಮದಲ್ಲಿ ನಡೆದ ಕೇಂದ್ರದಲ್ಲಿ ಬೆಳಗ್ಗೆ 8 ಗಂಟೆಗೆ ಸರಿಯಾಗಿ ಪರೀಕ್ಷೆಗೆ ಶಾಸಕರು ಕುಳಿತಿದ್ದಾರೆ. 1978ರಲ್ಲಿ ಅರ್ಧಕ್ಕೆ ಓದು ನಿಲ್ಲಿಸಿದ್ದು ದಶಕಗಳ ಬಳಿಕ ಕ್ರಮ ಸಂಖ್ಯೆಗೆ ಅನುಗುಣವಾಗಿ ಎಕ್ಸಾಂ ಮುಗಿಸಿದರು. ಇವರನ್ನೇ ಮಾದರಿಯಾಗಿಸಿಕೊಂಡ ಕೆಲ ಸ್ನೇಹಿತರು ಮತ್ತು ಸ್ಥಳೀಯ ಸರ್ಪಂಚ್ಗಳೂ ಕೂಡಾ ಪರೀಕ್ಷೆ ಬರೆದು ಗಮನ ಸೆಳೆದರು.
ಇದನ್ನೂ ಓದಿ: ಪಟಿಯಾಲದಲ್ಲಿ ಎರಡು ಗುಂಪುಗಳ ಘರ್ಷಣೆ; ಪರಿಸ್ಥಿತಿ ಹತೋಟಿಗೆ ಬಿಗಿ ಪೊಲೀಸ್ ಬಂದೋಬಸ್ತ್