ಛತ್ತೀಸ್ಗಢ : ಕೊರೊನಾದಿಂದ ಸಾವು-ನೋವು ನೋಡಿ ಬೇಸರಗೊಂಡಿರುವ ನರ್ಸ್‌ವೊಬ್ಬರು ಹತಾಶೆಯಿಂದ ಗೋಡೆಗೆ ಒರಗಿ ಕುತಿರುವ ಫೋಟೋ ಇಂಟರ್ನೆಟ್ನಲ್ಲಿ ವೈರಲ್ ಆಗಿದೆ.
ಪಂಕಜೂರ್ ಆಸ್ಪತ್ರೆಯ ನರ್ಸ್ ಲಿಲಸಾನಿ ಕೊಡಾಪಿ ನೆಲದ ಮೇಲೆ ಕುಳಿತು ಕಾಲುಗಳನ್ನು ಚಾಚಿದ್ದಾರೆ. ಪಿಪಿಇ ಕಿಟ್‌ನಲ್ಲಿ ಧರಿಸಿರುವ ನರ್ಸ್ ಹಲವಾರು ಗಂಟೆ ಕೆಲಸ ಮಾಡಿ ಕೆಲ ಸಮಯ ವಿಶ್ರಾಂತಿ ಪಡೆಯುತ್ತಿದ್ದರು ಎನ್ನಲಾಗಿದೆ.
ಕಳೆದ 24 ಗಂಟೆಗಳಲ್ಲಿ ಭಾರದಲ್ಲಿ 2,97,540 ಮಂದಿ ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ. ಇದರೊಂದಿಗೆ ಗುಣಮುಖರಾದವರ ಸಂಖ್ಯೆ 1,53,84,418ಕ್ಕೆ ಏರಿದೆ.
ರಾಷ್ಟ್ರದಲ್ಲಿ ಒಟ್ಟು ಚೇತರಿಕೆ ಪ್ರಮಾಣ ಶೇ. 81.99ರಷ್ಟಿದ್ದು, ಅದರಲ್ಲಿ ಹತ್ತು ರಾಜ್ಯಗಳು ಗುಣಮುಖರಾದವರ ಪ್ರಮಾಣ ಶೇ. 76.61ರಷ್ಟಿವೆ.