ETV Bharat / bharat

ಕೋವ್ಯಾಕ್ಸಿನ್​ನ ಮೂರನೇ ಹಂತದ ಪ್ರಯೋಗ ಆರಂಭ: ಏಮ್ಸ್​​ನಲ್ಲಿ ನಾಲ್ವರ ಮೇಲೆ ಪರೀಕ್ಷೆ

author img

By

Published : Nov 26, 2020, 8:16 PM IST

ಐಸಿಎಂಆರ್ ಹಾಗೂ ಭಾರತ್ ಬಯೋಟೆಕ್ ಕೊರೊನಾ ಸೋಂಕಿನ ನಿಯಂತ್ರಣಕ್ಕಾಗಿ 'ಕೋವ್ಯಾಕ್ಸಿನ್' ಲಸಿಕೆಯನ್ನು ಅಭಿವೃದ್ಧಿಪಡಿಸುತ್ತಿವೆ.

Covaxin
ಕೋವ್ಯಾಕ್ಸಿನ್

ನವದೆಹಲಿ: ಕೊರೊನಾ ಲಸಿಕೆಯ ಮೂರನೇ ಹಂತದ ಪ್ರಯೋಗವು ಗುರುವಾರ ನವದೆಹಲಿಯ ಏಮ್ಸ್​ನಲ್ಲಿ ಪ್ರಾರಂಭವಾಗಿದ್ದು, ನರ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ. ಎಂ.ವಿ.ಪದ್ಮ ಶ್ರೀವಾಸ್ತವ ಹಾಗೂ ಮೂವರು ಸ್ವಯಂ ಸೇವಕರ ಮೇಲೆ ಪ್ರಯೋಗ ನಡೆದಿದೆ.

ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ (ಐಸಿಎಂಆರ್) ಸಹಯೋಗದೊಂದಿಗೆ ಭಾರತ್ ಬಯೋಟೆಕ್ ಕೊರೊನಾ ಸೋಂಕಿನ ನಿಯಂತ್ರಣಕ್ಕಾಗಿ 'ಕೋವ್ಯಾಕ್ಸಿನ್' ಲಸಿಕೆಯನ್ನು ಅಭಿವೃದ್ಧಿಪಡಿಸುತ್ತಿದೆ.

ಇದನ್ನೂ ಓದಿ: 3ನೇ ಹಂತದ ಪ್ರಯೋಗ ಆರಂಭಿಸಿದ ಕೋವ್ಯಾಕ್ಸಿನ್​​... ದೆಹಲಿ, ಪಾಟ್ನಾ ಸೇರಿ 19 ಕಡೆ ಪ್ರಯೋಗ!

ಮುಂದಿನ ದಿನಗಳಲ್ಲಿ ಸುಮಾರು 15 ಸಾವಿರ ಸ್ವಯಂಸೇವಕರ ಮೇಲೆ ಪ್ರಯೋಗ ನಡೆಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ. ಈಗ ಸದ್ಯಕ್ಕೆ 0.5 ml ಡೋಸ್​ಅನ್ನು ಸ್ವಯಂಸೇವಕರಿಗೆ ನೀಡಲಾಗಿದೆ. ಅವರನ್ನು ಮುಂದಿನ ಕೆಲವು ದಿನಗಳವರೆಗೆ ನಿಗಾದಲ್ಲಿ ಇರಿಸಲಾಗುತ್ತದೆ ಮೂಲವೊಂದು ತಿಳಿಸಿದೆ.

ಕೋವ್ಯಾಕ್ಸಿನ್ ದೇಶೀಯವಾಗಿ ಅಭಿವೃದ್ಧಿಪಡಿಸುತ್ತಿರುವ ಕೊರೊನಾ ಲಸಿಕೆಯಾಗಿದ್ದು, ಪ್ರಯೋಗದಲ್ಲಿ ಭಾಗಿಯಾಗಿ ಮೊದಲ ಡೋಸ್ ಪಡೆದ ಸ್ವಯಂ ಸೇವಕನಾಗಿ ನನಗೆ ಗೌರವವಿದ್ದು, ಸಂತೋಷವಾಗುತ್ತಿದೆ ಎಂದು ಡಾ. ಎಂ.ವಿ.ಪದ್ಮ ಶ್ರೀವಾಸ್ತವ ಹೇಳಿದ್ದಾರೆ.

ಕೋವ್ಯಾಕ್ಸಿನ್ ಲಸಿಕೆಯ ಎರಡನೇ ಪ್ರಯೋಗ ಪೂರ್ಣಗೊಂಡು ಮೂರನೇ ಹಂತದ ಪ್ರಯೋಗಕ್ಕೆ ಅನುಮತಿ ನೀಡುವಂತೆ ಸರ್ಕಾರಕ್ಕೆ ಮನವಿ ಮಾಡುವ ವೇಳೆ ಲಸಿಕೆ ಚೆನ್ನಾಗಿ ಕೆಲಸ ಮಾಡುತ್ತಿದ್ದು, ಯಾವುದೇ ಗಂಭೀರ ಅಥವಾ ಪ್ರತಿಕೂಲ ಪರಿಣಾಮಗಳು ಉಂಟಾಗಿಲ್ಲ ಎಂದು ಅವರು ಹೇಳಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.