ETV Bharat / bharat

'ನಂದಿಗ್ರಾಮ' ಸೇರಿ ಪ.ಬಂಗಾಳದ 30, ಅಸ್ಸೋಂನ 39 ಕ್ಷೇತ್ರಗಳಲ್ಲಿ 2ನೇ ಹಂತದ ಮತದಾನ - ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆ

ಪಶ್ಚಿಮ ಬಂಗಾಳದಲ್ಲಿ ಇಂದು ಎರಡನೇ ಹಂತದ ಮತದಾನ ನಡೆಯಲಿದ್ದು, ಒಟ್ಟೂ 30 ಕ್ಷೇತ್ರಗಳ ಪೈಕಿ ತೃಣಮೂಲ ಕಾಂಗ್ರೆಸ್ ಮತ್ತು ಬಿಜೆಪಿ ಎಲ್ಲ ಕಡೆಗಳಲ್ಲೂ ಸ್ಪರ್ಧಿಸಿವೆ. ಅಸ್ಸೋಂನ 39 ಕ್ಷೇತ್ರಗಳಲ್ಲಿ ಎರಡನೇ ಹಂತದ ಮತಚಲಾವಣೆ ನಡೆಯಲಿದೆ.

phase-2-polls-in-assam-and-west-bengal-today
'ನಂದಿಗ್ರಾಮ' ಸೇರಿ ಪ.ಬಂಗಾಳದ 30, ಅಸ್ಸೋಂನ 39 ಕ್ಷೇತ್ರಗಳಲ್ಲಿ 2ನೇ ಹಂತದ ಮತದಾನ
author img

By

Published : Apr 1, 2021, 5:14 AM IST

ಕೋಲ್ಕತ್ತಾ/ಗುವಾಹಟಿ: ಪಂಚರಾಜ್ಯ ವಿಧಾನಸಭೆ ಚುನಾವಣೆಯ ಭಾಗವಾದ ಪಶ್ಚಿಮ ಬಂಗಾಳ ಹಾಗೂ ಅಸ್ಸೋಂನಲ್ಲಿ ಇಂದು 2ನೇ ಹಂತದ ಮತದಾನ ನಡೆಯಲಿದೆ.

ಪಶ್ಚಿಮ ಬಂಗಾಳದ 30 ಕ್ಷೇತ್ರಗಳಲ್ಲಿ ಮತದಾನ:

ಪಶ್ಚಿಮ ಬಂಗಾಳದಲ್ಲಿ ಇಂದು ಎರಡನೇ ಹಂತದ ಮತದಾನ ನಡೆಯಲಿದ್ದು, ಒಟ್ಟೂ 30 ಕ್ಷೇತ್ರಗಳ ಪೈಕಿ ತೃಣಮೂಲ ಕಾಂಗ್ರೆಸ್ ಮತ್ತು ಬಿಜೆಪಿ ಎಲ್ಲ ಕಡೆಗಳಲ್ಲೂ ಸ್ಪರ್ಧಿಸಿವೆ. ಇನ್ನುಳಿದಂತೆ ಸಿಪಿಐಎಂ 15, ಕಾಂಗ್ರೆಸ್ 9, ಎಐಎಫ್‌ಬಿ 2 ಮತ್ತು ಸಿಪಿಐ 2 ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಕಣಕ್ಕಿಳಿಸಿವೆ. ಬಂಕುರಾ ಕ್ಷೇತ್ರದಲ್ಲಿ ಅತಿ ಹೆಚ್ಚು 11 ಅಭ್ಯರ್ಥಿಗಳಿದ್ದರೆ, ಕೇಶಪುರದಲ್ಲಿ ಕನಿಷ್ಠ ಮೂವರು ಸ್ಪರ್ಧಿಸಿದ್ದಾರೆ. ಈ ಹಂತದಲ್ಲಿ 152 ಪುರುಷರು ಮತ್ತು 19 ಮಹಿಳೆಯರು ಸೇರಿ 171 ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ. 76,07,667 ಮತದಾರರು 8,332 ಮತಗಟ್ಟೆಗಳಲ್ಲಿ ಹಕ್ಕು ಚಲಾಯಿಸಲಿದ್ದಾರೆ.

2ನೇ ಹಂತದಲ್ಲಿ ಚುನಾವಣೆ ನಡೆಯುವ ಕ್ಷೇತ್ರಗಳ ಪೈಕಿ ಸಿಎಂ ಮಮತಾ ಬ್ಯಾನರ್ಜಿ ಸ್ಪರ್ಧಿಸಿರುವ ನಂದಿಗ್ರಾಮವು ಪ್ರಮುಖವಾಗಿದೆ. ನಂದಿಗ್ರಾಮದಲ್ಲಿ ಮಮತಾಗೆ ಪ್ರತಿಸ್ಫರ್ಧಿಯಾಗಿ ಟಿಎಂಸಿ ಮಾಜಿ ಮುಖಂಡ, ಕಳೆದ ಡಿಸೆಂಬರ್​​ನಲ್ಲಿ ಬಿಜೆಪಿಗೆ ಸೇರ್ಪಡೆಯಾಗಿರುವ ಸುವೆಂದು ಅಧಿಕಾರಿ ಕಣಕ್ಕಿಳಿದಿದ್ದಾರೆ. ಇಬ್ಬರ ನಡುವೆ ಭಾರೀ ಪೈಪೋಟಿಯಿದ್ದು, ರಾಜಕೀಯ ಜಿದ್ದಾಜಿದ್ದಿಗೆ ಕಾರಣವಾಗಿದೆ. ಸಿಪಿಐ-ಎಂ ಕೂಡ ಪ್ರಬಲ ಅಭ್ಯರ್ಥಿಯನ್ನೇ ಕಣಕ್ಕಿಳಿಸಿದೆ. ಎಡ-ಐಎಸ್​ಎಫ್​-ಕಾಂಗ್ರೆಸ್ ಮೂರು ಪಕ್ಷಗಳ ಮೈತ್ರಿ ಅಭ್ಯರ್ಥಿಯಾಗಿ ಮೀನಾಕ್ಷಿ ಮುಖರ್ಜಿ ಸ್ಪರ್ಧೆಗಿಳಿದಿದ್ದಾರೆ. ರಾಜ್ಯದಲ್ಲಿ ವಿಧಾನಸಭೆ ಚುನಾವಣೆಯು ಒಟ್ಟೂ 8 ಹಂತಗಳಲ್ಲಿ ನಡೆಯುತ್ತಿದೆ.

ಅಸ್ಸೋಂನ 39 ಕ್ಷೇತ್ರಗಳಲ್ಲಿ ಮತಚಲಾವಣೆ:

ಅಸ್ಸೋಂನ ಕರಿಮ್‌ಗಂಜ್ ಉತ್ತರ, ಕರಿಮ್‌ಗಂಜ್ ದಕ್ಷಿಣ, ಲಖಿಪುರ್ ಸೇರಿದಂತೆ 39 ಕ್ಷೇತ್ರಗಳಲ್ಲಿ ಎರಡನೇ ಹಂತದ ಮತಚಲಾವಣೆ ಇಂದು ನಡೆಯಲಿದೆ. ಈ ಹಂತದಲ್ಲಿ ಬರಾಕ್ ಕಣಿವೆಯಲ್ಲಿ 15 ವಿಧಾನಸಭಾ ಸ್ಥಾನಗಳಿವೆ. ಒಟ್ಟೂ 345 ಅಭ್ಯರ್ಥಿಗಳು ಸ್ಪರ್ಧಿಸಿದ್ದು, 73,44,631 ಜನ ಮತ ಚಲಾಯಿಸಲಿದ್ದು, ಅದರಲ್ಲಿ 37,34,537 ಮಂದಿ ಪುರುಷರು, 36,09,959 ಮಹಿಳೆಯರು ಮತ್ತು 135 ಮಂದಿ ತೃತೀಯ ಲಿಂಗಿ ಮತದಾರರಿದ್ದಾರೆ. 13 ಜಿಲ್ಲೆಗಳ 39 ಕ್ಷೇತ್ರಗಳಲ್ಲಿ ಒಟ್ಟು 10,592 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.

ಎರಡೂ ರಾಜ್ಯಗಳಲ್ಲಿ ಮುಕ್ತ ಮತ್ತು ನ್ಯಾಯಯುತ ಚುನಾವಣೆಗೆ ಕೇಂದ್ರ ಮತ್ತು ರಾಜ್ಯ ಸಶಸ್ತ್ರ ಪೊಲೀಸ್ ಪಡೆ ಸೇರಿದಂತೆ ವಿವಿಧ ತುಕಡಿಗಳ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಕೇಂದ್ರ ಚುನಾವಣಾ ಆಯೋಗ ಎಲ್ಲ ರೀತಿಯ ಸಿದ್ಧತೆ ಮಾಡಿಕೊಂಡಿದೆ. ಬೆಳಗ್ಗೆ 7ರಿಂದ ಸಂಜೆ 6 ಗಂಟೆಯವರೆಗೆ ಮತದಾನ ನಡೆಯಲಿದ್ದು, ಕೋವಿಡ್ ಮಾರ್ಗಸೂಚಿ ಅನುಸರಣೆ ಕಡ್ಡಾಯಗೊಳಿಸಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.