ETV Bharat / bharat

ಕೇರಳ ಆರ್‌ಎಸ್‌ಎಸ್‌ ಮುಖಂಡನ ಹತ್ಯೆ ಪ್ರಕರಣ: ಪಿಎಫ್‌ಐ ಕಾರ್ಯಕರ್ತನ ಬಂಧನ - ಆರ್‌ಎಸ್‌ಎಸ್

ಕೇರಳದ ಪಾಲಕ್ಕಾಡ್ ಜಿಲ್ಲೆಯಲ್ಲಿ ಆರ್‌ಎಸ್‌ಎಸ್ ಮುಖಂಡ ಎಸ್‌.ಕೆ.ಶ್ರೀನಿವಾಸನ್​​ ಅವರನ್ನು ಏಪ್ರಿಲ್ 16 ರಂದು ಹತ್ಯೆ ಮಾಡಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪಿಎಫ್‌ಐನ ಮುಖಂಡನನ್ನು ಸೋಮವಾರ ಪೊಲೀಸರು ಬಂಧಿಸಿದ್ದಾರೆ.

murder of RSS leader Sreenivasan
ಆರ್‌ಎಸ್‌ಎಸ್ ಮುಖಂಡ ಎಸ್‌ ಕೆ ಶ್ರೀನಿವಾಸನ್​​
author img

By

Published : Sep 20, 2022, 9:50 AM IST

ಪಾಲಕ್ಕಾಡ್ (ಕೇರಳ): ಏಪ್ರಿಲ್‌ನಲ್ಲಿ ನಡೆದ ಆರ್‌ಎಸ್‌ಎಸ್ ಮುಖಂಡನ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಸ್ಲಾಮಿಕ್ ಸಂಘಟನೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಮುಖಂಡನೋರ್ವನನ್ನು ಬಂಧಿಸಲಾಗಿದೆ. ಆರ್‌ಎಸ್‌ಎಸ್ ಮುಖಂಡ ಎಸ್‌.ಕೆ.ಶ್ರೀನಿವಾಸನ್ (45) ಹತ್ಯೆಗೆ ಸಂಚು ರೂಪಿಸಿದ್ದಕ್ಕಾಗಿ ಪಿಎಫ್‌ಐನ ಪಾಲಕ್ಕಾಡ್ ಜಿಲ್ಲಾ ಕಾರ್ಯದರ್ಶಿ ಅಬೂಬಕರ್ ಸಿದ್ದಿಕ್​ನನ್ನು ಏಪ್ರಿಲ್ 16 ರಂದು ಬಂಧಿಸಲಾಗಿದೆ.

ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ (IUML), CPI(M) ಮತ್ತು BJP ಯೂತ್ ಲೀಗ್‌ನ ಯುವ ಘಟಕ ಸೇರಿದಂತೆ ವಿವಿಧ ರಾಜಕೀಯ ಸಂಘಟನೆಗಳ ನಾಯಕರ ಪಟ್ಟಿಯನ್ನು ತಯಾರಿಸಿದ PFI ಕಾರ್ಯಕರ್ತರ ಗುಂಪಿನ ಭಾಗವಾಗಿಯೂ ಆರೋಪಿ ಇದ್ದರು ಎಂದು ತಿಳಿದುಬಂದಿದೆ. ಶ್ರೀನಿವಾಸನ್ ಹತ್ಯೆಗೆ ಸಂಬಂಧಿಸಿದಂತೆ 20 ಕ್ಕೂ ಹೆಚ್ಚು ಜನರನ್ನು ಈಗಾಗಲೇ ಬಂಧಿಸಲಾಗಿದೆ. ಇವರೆಲ್ಲಾ ಪಿಎಫ್ಐ ಮತ್ತು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (SDPI) ಯ ಕಾರ್ಯಕರ್ತರಾಗಿದ್ದಾರೆ.

ಇದನ್ನೂ ಓದಿ: ಕಲಬುರಗಿ: ಬೈಕ್​ನಲ್ಲಿ ಹೊರಟ ಯುವಕನ ಬೆನ್ನಟ್ಟಿ ಕೊಚ್ಚಿ ಕೊಲೆಗೈದ ಹಂತಕರು

ಏಪ್ರಿಲ್ 15 ರಂದು ನಡೆದ ಪಿಎಫ್‌ಐ ಮುಖಂಡ ಸುಬೈರ್ (43) ಹತ್ಯೆಗೆ ಪ್ರತೀಕಾರವಾಗಿ ಶ್ರೀನಿವಾಸರನ್ನು ಹತ್ಯೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆರ್​ಎಸ್​ಎಸ್​​ ಕಾರ್ಯಕರ್ತ ಶ್ರೀನಿವಾಸನ್ ಅವರ ಮೇಲೆ ಏಪ್ರಿಲ್ 16 ರಂದು ಆರು ಜನರ ತಂಡವು ದಾಳಿ ನಡೆಸಿತ್ತು. ಇದಕ್ಕೂ 24 ಗಂಟೆಗಳ ಮೊದಲು ಜಿಲ್ಲೆಯ ಎಲಪ್ಪಲ್ಲಿಯಲ್ಲಿ ಸುಬೈರ್ ಕೊಲೆಯಾಗಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.