ETV Bharat / bharat

ಅನ್ಯಧರ್ಮೀಯರ ಹಿಟ್​ ಲಿಸ್ಟ್​ ತಯಾರಿಸಿದ್ದ ಪಿಎಫ್​ಐ ರಹಸ್ಯ ವಿಭಾಗ: ಕೋರ್ಟ್​ಗೆ ಎನ್​ಐಎ ಮಾಹಿತಿ - ಪಿಎಫ್‌ಐ

ನಿಷೇಧಕ್ಕೊಳಗಾಗಿರುವ ಪಿಎಫ್​ಐ ಸಂಘಟನೆ ಭಯೋತ್ಪಾದನೆಗಾಗಿ ಯುವಕರನ್ನು ನೇಮಿಸಿಕೊಳ್ಳಲು ವಿಶೇಷ ವಿಭಾಗವನ್ನು ಹೊಂದಿತ್ತು ಎಂಬುದನ್ನು ತನಿಖೆ ನಡೆಸುತ್ತಿರುವ ಎನ್​ಐಎ ಕೋರ್ಟ್​ಗೆ ತಿಳಿಸಿದೆ.

pfi-has-a-secret-wing
ಪಿಎಫ್​ಐ ರಹಸ್ಯ ವಿಭಾಗ
author img

By

Published : Dec 21, 2022, 6:56 AM IST

ಎರ್ನಾಕುಲಂ(ಕೇರಳ): ದೇಶದಲ್ಲಿ ಭಯೋತ್ಪಾದನೆ ಕೃತ್ಯ ನಡೆಸಿ ನಿಷೇಧಕ್ಕೊಳಗಾಗಿರುವ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ)ದ ಕರ್ಮಕಾಂಡಗಳು ಬಗೆದಷ್ಟು ಹೊರಬರುತ್ತಿವೆ. ಪಿಎಫ್​​ಐ ಅನ್ಯಧರ್ಮಗಳ ಯುವಕರನ್ನು ಉಗ್ರ ಕೃತ್ಯಗಳಿಗೆ ನೇಮಿಸಿಕೊಳ್ಳುವ ರಹಸ್ಯ ವಿಭಾಗವನ್ನು ಹೊಂದಿದ್ದು, ಇದು ಎಫ್​ಐ ಕಚೇರಿಯ ಹೊರಗೆ ಕೆಲಸ ಮಾಡುತ್ತಿತ್ತು ಎಂಬುದನ್ನು ರಾಷ್ಟ್ರೀಯ ತನಿಖಾ ದಳ ಪತ್ತೆ ಹಚ್ಚಿದೆ.

ಬಂಧಿತರಾಗಿರುವ ಪಿಎಫ್​ಐ ಮುಖಂಡರ ನ್ಯಾಯಾಂಗ ಬಂಧನದ ಅವಧಿಯ ವಿಸ್ತರಣೆಗಾಗಿ ಸಲ್ಲಿಸಲಾದ ಅರ್ಜಿಯಲ್ಲಿ ಎನ್​ಐಎ ಈ ಭಯಾನಕ ಅಂಶವನ್ನು ನ್ಯಾಯಾಲಯಕ್ಕೆ ತಿಳಿಸಿದೆ. ಮೂರು ತಿಂಗಳ ತನಿಖೆಯಲ್ಲಿ ಆಘಾತಕಾರಿ ಅಂಶಗಳು ಬಹಿರಂಗವಾಗಿವೆ ಎಂಬುದನ್ನು ಕೋರ್ಟ್​ ಗಮನಕ್ಕೆ ತಂದಿದೆ.

ನಿಷೇಧಿತ ಪಿಎಫ್​ಐ ದೇಶದಲ್ಲಿ ಆಂತರಿಕ ಗಲಭೆಗೆ ದೊಡ್ಡ ಸಂಚು ಹೂಡಿತ್ತು. ಅನ್ಯಧರ್ಮ ಗುರುಗಳನ್ನು ಗುರುತಿಸಿ ಹಿಟ್​​ ಲಿಸ್ಟ್​ ತಯಾರಿಸಿದೆ. ಇದಕ್ಕಾಗಿ ಯುವಕರನ್ನು ನೇಮಕ ಮಾಡಿಕೊಂಡಿದೆ. ಇದು ಪಿಎಫ್​ಐ ಕಚೇರಿಗಳ ಆಚೆ ನಡೆಯುತ್ತಿತ್ತು. ಇದಕ್ಕಾಗಿಯೇ ವಿಶೇಷ ಕಾರ್ಯಪಡೆ ರಚಿಸಿಕೊಳ್ಳಲಾಗಿತ್ತು. ಉಗ್ರ ಸಂಘಟನೆಯಾದ ಐಎಸ್‌ಐಎಸ್‌ನೊಂದಿಗೆ ಪಿಎಫ್‌ಐ ಸಂಪರ್ಕ ಹೊಂದಿದೆ ಎಂಬುದಕ್ಕೆ ಪುರಾವೆಗಳು ದೊರೆತಿವೆ. ಇನ್ನಷ್ಟು ಅಂತಾರಾಷ್ಟ್ರೀಯ ಭಯೋತ್ಪಾದಕ ಸಂಘಟನೆಗಳೊಂದಿಗೆ ಸಂಪರ್ಕಗಳ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಎನ್​ಐಎ ತಿಳಿಸಿದೆ.

ಬಂಧನ ಅವಧಿ 90 ದಿನ ವಿಸ್ತರಣೆ: ಇನ್ನು ಎನ್​ಐಎ ಕೋರಿಕೆಯ ಮೇರೆಗೆ ಬಂಧಿತರಾಗಿರುವ ಪಿಎಫ್​ಐ ಮುಖಂಡರ ಬಂಧನ ಅವಧಿಯನ್ನು 90 ದಿನಗಳವರೆಗೆ ವಿಸ್ತರಿಸಿ ಎನ್​ಐಎ ವಿಶೇಷ ನ್ಯಾಯಾಲಯ ಆದೇಶಿಸಿದೆ.

ದೇಶದಲ್ಲಿ ಕೋಮು ಗಲಭೆ, ಕಾನೂನು ಸುವ್ಯವಸ್ಥೆ ಹಾಳು, ಭಯೋತ್ಪಾದನೆ ಹರಡಲು ಅಲ್ ಖೈದಾ, ಲಷ್ಕರ್​-ಎ-ತೊಯ್ಬಾ ಮತ್ತು ಐಸಿಸ್‌ನಂತಹ ಉಗ್ರ ಸಂಘಟನೆಗಳಿಗೆ ಸೇರಲು ಯುವಕರನ್ನು ಪಿಎಫ್‌ಐ ಪ್ರೇರೇಪಿಸುತ್ತಿತ್ತು ಎಂಬುದನ್ನು ಎನ್​ಐಎ ಈ ಹಿಂದೆಯೇ ತಿಳಿಸಿತ್ತು.

ಓದಿ: ಅನಧಿಕೃತ ಮತದಾರರ ಗುರುತಿನ ಚೀಟಿ ಮುದ್ರಣ: ಹರಿಹರದಲ್ಲಿ ಝರಾಕ್ಸ್ ಅಂಗಡಿ ಮಾಲೀಕನ ವಿರುದ್ಧ ಕೇಸ್​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.