ಮುಂಬೈ: ಶತಕದ ಗಡಿ ದಾಟಿದ ಬಳಿಕ ಕಳೆದ 21 ದಿನಗಳಿಂದ ಪೆಟ್ರೋಲ್ ದರದಲ್ಲಿ ಯಾವುದೇ ಬದಲಾವಣೆ ಆಗದೆ ಸ್ಥಿರವಾಗಿದ್ದು, ಎಲ್ಲಾ ಮೆಟ್ರೋ ನಗರಗಳಲ್ಲಿ ಡೀಸೆಲ್ ಬೆಲೆ ಮಾತ್ರ ಗಗನಕ್ಕೇರುತ್ತಲೇ ಇದೆ. ಇಂದು ಪ್ರತಿ ಲೀಟರ್ ಮೇಲೆ 23ರಿಂದ 27 ಪೈಸೆವರೆಗೂ ಡೀಸೆಲ್ ದರ ಏರಿಕೆ ಕಂಡಿದೆ.
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಲೀಟರ್ ಪೆಟ್ರೋಲ್ ಬೆಲೆ 101.19 ರೂ. ಇದೆ. 88.82 ರೂಪಾಯಿ ಇದ್ದ ಡೀಸೆಲ್ ದರ 89.07 ರೂ.ಗೆ ಏರಿಕೆಯಾಗಿದೆ (25 ಪೈಸೆ). ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ 26 ಪೈಸೆ ಏರಿಕೆಯೊಂದಿಗೆ ಲೀಟರ್ ಡೀಸೆಲ್ ಬೆಲೆ 94.53ಕ್ಕೆ ಹೆಚ್ಚಳವಾಗಿದೆ.
ಇದನ್ನೂ ಓದಿ: ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಗೆ ರಾಜ್ಯ ಸರ್ಕಾರಗಳೇ ಕಾರಣ: ಕೇಂದ್ರ ಪೆಟ್ರೋಲಿಯಂ ಸಚಿವ
ಮುಂಬೈನಲ್ಲಿ ಪ್ರತಿ ಲೀಟರ್ ಡೀಸೆಲ್ ಮೇಲೆ 27 ಪೈಸೆ, ಚೆನ್ನೈನಲ್ಲಿ 23 ಪೈಸೆ ಹಾಗೂ ಕೋಲ್ಕತ್ತಾದಲ್ಲಿ 25 ಪೈಸೆ ಏರಿಕೆಯಾಗಿದೆ. ಪ್ರಮುಖ ಐದು ಮೆಟ್ರೋ ನಗರಗಳಲ್ಲಿನ ಇಂದಿನ ಇಂಧನ ಬೆಲೆ ಹೀಗಿದೆ.
ನಗರ | ಪೆಟ್ರೋಲ್ | ಡೀಸೆಲ್ |
ಬೆಂಗಳೂರು | 104.70 ರೂ. | 94.53 ರೂ. |
ದೆಹಲಿ | 101.19 ರೂ. | 89.07 ರೂ. |
ಕೋಲ್ಕತ್ತಾ | 101.62 ರೂ. | 92.17 ರೂ. |
ಮುಂಬೈ | 107.26 ರೂ. | 96.68 ರೂ. |
ಚೆನ್ನೈ | 98.96 ರೂ. | 93.69 ರೂ. |