ನವದೆಹಲಿ: ದೇಶದ ಸಾರ್ವಜನಿಕ ಉದ್ದಿಮೆಯ ತೈಲ ಕಂಪನಿಗಳು ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಮತ್ತೆ ಏರಿಸಿವೆ. ಮುಂಬೈನಲ್ಲಿ ಸದ್ಯ ಲೀಟರ್ ಪೆಟ್ರೋಲ್‌ಗೆ 100 ರೂಪಾಯಿ ಕೊಡಬೇಕಿದೆ.
ಸೋಮವಾರದ ಬೆಲೆ ಏರಿಕೆಯ ನಂತರ ದೇಶದಲ್ಲಿ ತೈಲ ಬೆಲೆ ಸದ್ಯ ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ಮುಟ್ಟಿದೆ. ಮುಂಬೈ ಮತ್ತು ಭೋಪಾಲ್‌ನ ಕೆಲವು ಭಾಗಗಳಲ್ಲಿ ಪೆಟ್ರೋಲ್ ದರ ನೂರು ರೂಪಾಯಿ ಇದೆ.
ಮುಂಬೈನಲ್ಲಿ ಪೆಟ್ರೋಲ್ ಪ್ರತಿ ಲೀಟರ್‌ಗೆ 100.47 ರೂ. ಮತ್ತು ಡೀಸೆಲ್ ಲೀಟರ್‌ಗೆ 92.45 ರೂ. ಆಗಿದೆ.
ಮಧ್ಯಪ್ರದೇಶದ ಭೋಪಾಲ್‌ನಲ್ಲಿ ಪೆಟ್ರೋಲ್ ಬೆಲೆ ಲೀಟರ್‌ಗೆ 102.34 ರೂ. ಇದ್ದು ಡೀಸೆಲ್ ಲೀಟರ್‌ಗೆ 93.37 ರೂ. ಆಗಿದೆ.
ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ರಾಷ್ಟ್ರ ರಾಜಧಾನಿಯಲ್ಲಿ ಅಲ್ಪ ಏರಿಕೆ ಕಂಡಿದ್ದು, ಕ್ರಮವಾಗಿ ಲೀಟರ್‌ಗೆ 94.23 ರೂ. ಮತ್ತು 85.15 ರೂ. ವ್ಯಾಪಾರವಾಗುತ್ತಿದೆ.
ದೆಹಲಿಯಲ್ಲಿ ಪೆಟ್ರೋಲ್ ಬೆಲೆಯನ್ನು ಲೀಟರ್‌ಗೆ 29 ಪೈಸೆ ಮತ್ತು ಡೀಸೆಲ್ ಅನ್ನು 26 ಪೈಸೆ ಹೆಚ್ಚಿಸಲಾಗಿದೆ.
ಕೋಲ್ಕತ್ತಾದಲ್ಲಿ ಪೆಟ್ರೋಲ್ ಬೆಲೆ 94.25 ರೂ ಮತ್ತು ಡೀಸೆಲ್ ಬೆಲೆ 87.74 ರೂ. ಆಗಿದೆ.
ಬೆಂಗಳೂರಿನಲ್ಲಿ ಶತಕದ ಸಮೀಪ ಪೆಟ್ರೋಲ್ ಬೆಲೆ
ಇನ್ನು ಬೆಂಗಳೂರಿನಲ್ಲಿ ಲೀ ಪೆಟ್ರೋಲ್‌ಗೆ 97.37 ರೂ ಇದೆ. ಡೀಸೆಲ್ ಲೀ.ಗೆ 90.27 ಇದೆ.
ಮೌಲ್ಯವರ್ಧಿತ ತೆರಿಗೆಯನ್ನು ಅವಲಂಬಿಸಿ ಡೀಸೆಲ್ ಮತ್ತು ಪೆಟ್ರೋಲ್ ಬೆಲೆಗಳಲ್ಲಿ ರಾಜ್ಯದಿಂದ ರಾಜ್ಯಕ್ಕೆ ಭಿನ್ನವಾಗಿರುತ್ತದೆ.