ETV Bharat / bharat

2021 - 22ರಲ್ಲಿ ಪೆಟ್ರೋಲ್​, ಡೀಸೆಲ್ ಬೆಲೆ 78 ಸಲ ಏರಿಕೆ: ಸದನದಲ್ಲಿ ಉತ್ತರ ನೀಡಿದ ಕೇಂದ್ರ - ಮಳೆಗಾಲದ ಅಧಿವೇಶನ

ದೇಶದಲ್ಲಿ ಅನೇಕ ಸಲ ಪೆಟ್ರೋಲ್​, ಡೀಸೆಲ್ ಬೆಲೆ ಏರಿಕೆ ಮಾಡಿ ಜನಸಾಮಾನ್ಯರ ಜೇಬಿಗೆ ಕತ್ತರಿ ಹಾಕಲಾಗಿದೆ. 2021-22ರ ಅವಧಿಯಲ್ಲಿ ಎಷ್ಟು ಸಲ ತೈಲ ಬೆಲೆ ಏರಿಕೆಯಾಗಿದೆ ಎಂಬುದರ ಬಗ್ಗೆ ಕೇಂದ್ರ ಸರ್ಕಾರ ಮಾಹಿತಿ ನೀಡಿದೆ.

Petrol Price Hiked 78 Times
Petrol Price Hiked 78 Times
author img

By

Published : Jul 25, 2022, 8:58 PM IST

ನವದೆಹಲಿ: ಮಳೆಗಾಲದ ಸಂಸತ್​ ಅಧಿವೇಶನ ಆರಂಭಗೊಂಡಿದ್ದು, ಈ ವೇಳೆ ಪ್ರತಿಪಕ್ಷಗಳು ಕೇಳುತ್ತಿರುವ ಅನೇಕ ಪ್ರಶ್ನೆಗಳಿಗೆ ಕೇಂದ್ರ ಸಚಿವರು ಉತ್ತರ ನೀಡ್ತಿದ್ದಾರೆ. ಇಂದು ಕೇಂದ್ರ ಪೆಟ್ರೋಲಿಯಂ ಮತ್ತು ಅನಿಲ ಖಾತೆ ರಾಜ್ಯ ಸಚಿವ ರಾಮೇಶ್ವರ್ ತೇಲಿ 2021-22ರ ಹಣಕಾಸು ವರ್ಷದಲ್ಲಿ ಎಷ್ಟು ಸಲ ತೈಲ ಬೆಲೆ ಏರಿಕೆ ಮಾಡಲಾಗಿದೆ ಎಂಬುದರ ಬಗ್ಗೆ ಉತ್ತರ ನೀಡಿದ್ದಾರೆ.

2021-2022ರ ಹಣಕಾಸು ವರ್ಷದಲ್ಲಿ ಪೆಟ್ರೋಲ್​ ಬೆಲೆಯನ್ನ 78 ಸಲ ಹೆಚ್ಚಿಸಲಾಗಿದ್ದು, ಡೀಸೆಲ್​ ದರವನ್ನ 76 ಸಲ ಏರಿಕೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ. ಆಮ್​​ ಆದ್ಮಿ ಪಕ್ಷದ ಸಂಸದ ರಾಘವ್ ಚಡ್ಡಾ ಕೇಳಿದ ಪ್ರಶ್ನೆಗೆ ಲಿಖಿತ ರೂಪದಲ್ಲಿ ಕೇಂದ್ರ ಸಚಿವರು ಉತ್ತರ ನೀಡಿದ್ದು, ಇದನ್ನ ಆಪ್​ ಸಂಸದರು ತಮ್ಮ ಟ್ವಿಟರ್​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

  • In reply to my question in Rajya Sabha, Central Government conceded that the prices of petrol and diesel have been hiked 𝟕𝟖 𝐓𝐈𝐌𝐄𝐒 and 𝟕𝟔 𝐓𝐈𝐌𝐄𝐒 respectively in the last one year. This is a clear confession by the Government of looting the common man. pic.twitter.com/4dz9DA7pQZ

    — Raghav Chadha (@raghav_chadha) July 25, 2022 " class="align-text-top noRightClick twitterSection" data=" ">

ಕೇಂದ್ರ ಸಚಿವರು ನೀಡಿರುವ ಉತ್ತರದ ಪ್ರತಿ ಟ್ವಿಟರ್​ನಲ್ಲಿ ಹಂಚಿಕೊಂಡಿರುವ ಸಂಸದ ರಾಘವ್​ ಚಡ್ಡಾ, ಇದು ಸಾಮಾನ್ಯ ಜನರನ್ನ ಲೂಟಿ ಮಾಡುವ ಸರ್ಕಾರದ ಸ್ಪಷ್ಟ ತಪ್ಪೊಪ್ಪಿಗೆಯಾಗಿದೆ ಎಂದಿದ್ದಾರೆ.

ಇದನ್ನೂ ಓದಿರಿ: ಸದನದೊಳಗೆ ಪ್ರತಿಭಟನೆ​​: ಕಾಂಗ್ರೆಸ್​ನ ನಾಲ್ವರು ಸಂಸದರು ಮಳೆಗಾಲ ಅಧಿವೇಶನದಿಂದ ಅಮಾನತು

ಸಂಸತ್ತಿನ ಮುಂಗಾರು ಅಧಿವೇಶನ ಆರಂಭವಾದಾಗಿನಿಂದಲೂ ಪ್ರತಿಪಕ್ಷಗಳು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದು, ಹಣದುಬ್ಬರ, ಬೆಲೆ ಏರಿಕೆ ವಿಚಾರವಾಗಿ ಸದನದಲ್ಲಿ ಚರ್ಚೆ ನಡೆಸುವಂತೆ ಆಗ್ರಹಿಸಿ, ಪ್ರತಿಭಟನೆ ನಡೆಸುತ್ತಿವೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.