ಅನುಪ್ಪೂರು (ಮಧ್ಯಪ್ರದೇಶ): ಕಳೆದ 10 ದಿನಗಳಿಂದ ತೈಲ ಬೆಲೆ ಏರಿಕೆಯಾಗುತ್ತಿದೆ. ರಾಜಸ್ಥಾನ, ಮಧ್ಯಪ್ರದೇಶ ಮತ್ತು ಮಹಾರಾಷ್ಟ್ರದಲ್ಲಿ ಪೆಟ್ರೋಲ್ ದರ 100 ರೂ. ಆಗಿದೆ.
ಅನುಪ್ಪೂರಿನಲ್ಲಿ ಪೆಟ್ರೋಲ್‌ಗೆ ಲೀಟರ್‌ಗೆ 100.25 ರೂ., ಡೀಸೆಲ್ ಲೀಟರ್‌ಗೆ 90.35 ರೂ. ಬೆಲೆಯಾಗಿದೆ. ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ರಾಷ್ಟ್ರ ರಾಜಧಾನಿಯಲ್ಲಿ ಸತತ 11 ದಿನ ಏರಿಕೆಯಾಗಿವೆ. ಶುಕ್ರವಾರ ಕ್ರಮವಾಗಿ 90.19 ಮತ್ತು 80.60 ರೂ.ಗಳಷ್ಟಿದೆ. ಪೆಟ್ರೋಲ್ ಬೆಲೆಯನ್ನು 31 ಪೈಸೆ ಮತ್ತು ಡೀಸೆಲ್ ಬೆಲೆಯನ್ನು 33 ಪೈಸೆ ಹೆಚ್ಚಿಸಿದೆ.
ಈ ಕೆಳಗಿನ ಮೆಟ್ರೋ ನಗರಗಳಲ್ಲಿ ಪ್ರತಿ ಲೀಟರ್ ಮತ್ತು ಡೀಸೆಲ್ ಬೆಲೆ ಇಂತಿದೆ.
ನಗರ | ಪೆಟ್ರೋಲ್ | ಡಿಸೇಲ್ |
ನವದೆಹಲಿ | 90.19 ರೂ. | 80.60 ರೂ. |
ಬೆಂಗಳೂರು | 93.21 ರೂ. | 85.44 ರೂ. |
ಮುಂಬೈ | 96.62 ರೂ. | 87.67 ರೂ. |
ಹೈದರಾಬಾದ್ | 93.78 ರೂ. | 87.91 ರೂ. |
ಚೆನ್ನೈ | 92.25 ರೂ. | 85.63 ರೂ. |
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ತಮ್ಮ ಬಜೆಟ್ ಭಾಷಣದಲ್ಲಿ ಕೃಷಿ ಮೂಲಸೌಕರ್ಯ ಮತ್ತು ಅಭಿವೃದ್ಧಿ ಸೆಸ್‌ನ (ಎಐಡಿಸಿ) ಪೆಟ್ರೋಲ್ ಪ್ರತಿ ಲೀಟರ್‌ಗೆ 2.5 ರೂ. ಮತ್ತು ಡೀಸೆಲ್‌ಗೆ ಲೀಟರ್‌ಗೆ 4 ರೂ. ವಿಧಿಸುವುದಾಗಿ ಘೋಷಿಸಿದ್ದರು. '
ಫೆಬ್ರವರಿ 14ರಂದು ದೆಹಲಿಯಲ್ಲಿ ಗ್ಯಾಸ್ ಸಿಲಿಂಡರ್ (14.2 ಕೆಜಿ ) ಬೆಲೆಯು 50 ರೂ.ಗೆ ಏರಿಕೆಯಾಗಿದ್ದು, ಎಲ್‌ಪಿಜಿ ಅನಿಲದ ವೆಚ್ಚವನ್ನು ಪ್ರತಿ ಸಿಲಿಂಡರ್‌ಗೆ 769 ರೂ.ಆಗಿದೆ.