ಬೆಂಗಳೂರು/ ನವದೆಹಲಿ: ಪ್ರಸ್ತುತ, ದೆಹಲಿ, ಮುಂಬೈ ಮತ್ತು ಚೆನ್ನೈನಂತಹ ಪ್ರಮುಖ ನಗರಗಳಲ್ಲಿ ಪೆಟ್ರೋಲ್ ದರಗಳು ಲೀಟರ್‌ಗೆ ರೂ 100 ರ ಸಮೀಪದಲ್ಲಿದೆ. ಅದಲ್ಲದೇ ಹೆಚ್ಚಿನ ನಗರಗಳಲ್ಲಿ ಡೀಸೆಲ್ ಬೆಲೆ ಲೀಟರ್‌ಗೆ ರೂ 90 ಕ್ಕಿಂತ ಹೆಚ್ಚಿದೆ.
ಇಂದು ದೆಹಲಿಯಲ್ಲಿ ಪೆಟ್ರೋಲ್ ಲೀಟರ್ ಬೆಲೆ 96.72 ರೂ ಆಗಿದ್ದರೆ, ಡೀಸೆಲ್ ಪ್ರತಿ ಲೀಟರ್‌ಗೆ 89.62 ರೂ. ಇದೆ. ಮುಂಬೈನಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 111.35 ರೂ.ಗೆ ಮತ್ತು ಡೀಸೆಲ್ ಪ್ರತಿ ಲೀಟರ್‌ಗೆ 97.28 ರೂ.ಗೆ ಮಾರಾಟವಾಗುತ್ತಿದೆ. ಕೋಲ್ಕತ್ತಾದಲ್ಲಿ, ಪೆಟ್ರೋಲ್ ಬೆಲೆ ಲೀಟರ್‌ಗೆ 106.03 ರೂ ಮತ್ತು ಡೀಸೆಲ್ ಪ್ರತಿ ಲೀಟರ್‌ಗೆ 92.76 ರೂ. ಚೆನ್ನೈನಲ್ಲಿ ಒಂದು ಲೀಟರ್ ಪೆಟ್ರೋಲ್ ಬೆಲೆ ರೂ 102.63 ಮತ್ತು ಡೀಸೆಲ್ ಬೆಲೆ ಲೀಟರ್‌ಗೆ ರೂ 94.24 ರಷ್ಟಿದೆ.
ರಾಜ್ಯದ ಪ್ರಮುಖ ನಗರಗಳಲ್ಲಿ ಇಂಧನ ದರ: ರಾಜಧಾನಿ ಬೆಂಗಳೂರು ಹಾಗೂ ಹುಬ್ಬಳ್ಳಿಯಲ್ಲಿ ಪೆಟ್ರೋಲ್, ಡೀಸೆಲ್ ದರ ಯಥಾಸ್ಥಿತಿ ಮುಂದುವರಿದಿದೆ. ದಾವಣಗೆರೆಯಲ್ಲಿ ಪೆಟ್ರೋಲ್ ದರ 31 ಪೈಸೆ ಏರಿಕೆಯಾಗಿದ್ದು, ಡೀಸೆಲ್ ದರದಲ್ಲಿ 9 ಪೈಸೆಯಷ್ಟು ಇಳಿಕೆಯಾಗಿದೆ. ಶಿವಮೊಗ್ಗದಲ್ಲಿ ಪೆಟ್ರೋಲ್ ದರದಲ್ಲಿ 43 ಪೈಸೆಯಷ್ಟು ಹಾಗೂ ಡೀಸೆಲ್ ದರದಲ್ಲಿ 46 ಪೈಸೆಯಷ್ಟು ಇಳಿಕೆಯಾಗಿದೆ. ಮೈಸೂರಿನಲ್ಲೂ ಇಂಧನ ದರದಲ್ಲಿ ಯಾವುದೇ ಏರಿಕೆ ಅಥವಾ ಇಳಿಕೆಯಾಗಿಲ್ಲ. ಮಂಗಳೂರಿನಲ್ಲಿ ಪೆಟ್ರೋಲ್ ದರದಲ್ಲಿ 34 ಪೈಸೆ ಹಾಗೂ ಡೀಸೆಲ್ಗೆ 30 ಪೈಸೆ ಹೆಚ್ಚಳವಾಗಿದೆ.
ನಗರಗಳು | ಪೆಟ್ರೋಲ್ | ಡೀಸೆಲ್ |
ಹುಬ್ಬಳ್ಳಿ | 101.65 ರೂ. | 87.65 ರೂ. |
ದಾವಣಗೆರೆ | 103.91 ರೂ. | 89.41 ರೂ. |
ಶಿವಮೊಗ್ಗ | 102.83 ರೂ. | 88.58 ರೂ |
ಬೆಂಗಳೂರು | 101.96 ರೂ | 87.91 ರೂ. |
ಮೈಸೂರು | 101.44 ರೂ. | 87.43 ರೂ. |
ಮಂಗಳೂರು | 101.47 ರೂ. | 87.43 ರೂ. |