ETV Bharat / bharat

ಪೆಟ್ರೋಲ್, ಡೀಸೆಲ್‌ ದರ ಮತ್ತೆ ಏರಿಕೆ: ಕೆಲ ರಾಜ್ಯಗಳಲ್ಲಿ ಲೀಟರ್‌​ಗೆ 100 ದಾಟಿದ ಇಂಧನ ಬೆಲೆ

author img

By

Published : May 12, 2021, 10:40 AM IST

ಇಂಧನ ದರದಲ್ಲಿ ಮತ್ತೆ ಏರಿಕೆಯಾಗಿದೆ. ಕೆಲವು ರಾಜ್ಯಗಳಲ್ಲಿ ಪ್ರತಿ ಲೀಟರ್​ ಪೆಟ್ರೋಲ್ ದರ 100 ರೂ. ಗಡಿ ದಾಟಿದೆ. ಈ ತಿಂಗಳು ಇಂಧನ ದರದಲ್ಲಿ ಸತತ ಏರಿಕೆಯಾಗುತ್ತಿದ್ದು, ಇಂದು 7 ನೇ ಬಾರಿಗೆ ಹೆಚ್ಚಳವಾಗಿದೆ. ಬೆಂಗಳೂರಿನಲ್ಲಿ ಪ್ರತಿ ಲೀ. ಪೆಟ್ರೋಲ್‌ ಬೆಲೆ ರೂ 95.11 ಇದ್ದರೆ, ಡೀಸೆಲ್‌ ಬೆಲೆ ಲೀ.ಗೆ 87.57 ಇದೆ.

Petrol, diesel prices Hike
ಪೆಟ್ರೋಲ್, ಡೀಸೆಲ್ ದರ ಏರಿಕೆ

ನವದೆಹಲಿ: ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಬುಧವಾರ (ಮೇ 12) ಮತ್ತೆ ಹೆಚ್ಚಳವಾಗಿದೆ.

ಬೆಲೆ ಏರಿಕೆಯ ಬಳಿಕ ಮಹಾರಾಷ್ಟ್ರ, ಮಧ್ಯಪ್ರದೇಶ ಸೇರಿದಂತೆ ಕೆಲ ರಾಜ್ಯಗಳಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 100 ರೂ. ಗಡಿ ದಾಟಿದೆ. ಪೆಟ್ರೋಲ್ ಬೆಲೆ ಪ್ರತಿ ಲೀಟರ್​ಗೆ 22 ರಿಂದ 25 ಪೈಸೆ ಏರಿಕೆಯಾಗಿದ್ದು, ಡೀಸೆಲ್​ ಬೆಲೆ 24 ರಿಂದ 27 ಪೈಸೆ ಹೆಚ್ಚಾಗಿದೆ.

ಇಂಡಿಯನ್ ಆಯಿಲ್ ಕಾರ್ಪೋರೇಶನ್ ವೆಬ್​ಸೈಟ್​ ಪ್ರಕಾರ, ಬುಧವಾರ ಏರಿಕೆಯಾದ ಬಳಿಕ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ 92.05 ಆಗಿದೆ. (25 ಪೈಸೆ ಏರಿಕೆ). ಮಂಗಳವಾರ ಪ್ರತಿ ಲೀಟರ್​ ಬೆಲೆ 91.80 ಇತ್ತು. ಡೀಸೆಲ್ ದರ ಪ್ರತಿ ಲೀಟರ್​ಗೆ 82.61 ರೂ. ಆಗಿದೆ. ಈ ಬೆಲೆ ಮಂಗಳವಾರ 82.36 ರೂ. ಇತ್ತು.

ಸರ್ಕಾರಿ ಸ್ವಾಮ್ಯದ ತೈಲ ಮಾರ್ಕೆಟಿಂಗ್ ಕಂಪನಿ (ಒಎಂಸಿಗಳು) ವಾಹನ ಇಂಧನ ಬೆಲೆಯನ್ನು ವೆಚ್ಚಕ್ಕೆ ಅನುಗುಣವಾಗಿ ಹೆಚ್ಚಿಸುತ್ತಿರುವುದರಿಂದ ಮೊದಲ ಬಾರಿಗೆ ರಾಷ್ಟ್ರ ರಾಜಧಾನಿಯಲ್ಲಿ ಪೆಟ್ರೋಲ್ ಬೆಲೆ ಪ್ರತಿ ಲೀಟರ್‌ಗೆ 92 ರೂ. ಆಗಿದೆ. ದೆಹಲಿಯಲ್ಲಿ ಕಳೆದ ಏಳು ದಿನಗಳಲ್ಲಿ ಪೆಟ್ರೋಲ್ ದರ ಲೀಟರ್‌ಗೆ 1.60 ರೂ. ಮತ್ತು ಡೀಸೆಲ್‌ ದರ ಲೀಟರ್​ಗೆ 1.88 ರೂ. ಏರಿಕೆಯಾಗಿದೆ.

ಮಂಗಳವಾರದ ದರಕ್ಕಿಂತ 24 ಪೈಸೆ ಏರಿಕೆಯಾದ ನಂತರ ಮುಂಬೈನಲ್ಲಿ ಒಂದು ಲೀಟರ್ ಪೆಟ್ರೋಲ್‌ಗೆ 98.36 ರೂ. ಆಗಿದೆ. ಒಂದು ಲೀಟರ್ ಡೀಸೆಲ್ ಬೆಲೆ 89.75 ರೂ. ಆಗಿದ್ದು, ಮಂಗಳವಾರದ ದರ 89.48 ರೂ. ಗಿಂತ 27 ಪೈಸೆ ಹೆಚ್ಚಾಗಿದೆ.

ಕೊಲ್ಕತ್ತಾದಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರದಲ್ಲಿ 24 ಪೈಸೆ ಏರಿಕೆಯಾಗಿದ್ದು, ಮಂಗಳವಾರ 91.92 ರೂ. ಇದ್ದ ಬೆಲೆ ಬುಧವಾರ 92.16 ರೂ. ಆಗಿದೆ. ಡೀಸೆಲ್ ದರದಲ್ಲಿ 25 ಪೈಸೆ ಏರಿಕೆಯಾಗಿದ್ದು, ಮಂಗಳವಾರ ಪ್ರತಿ ಲೀಟರ್ ಬೆಲೆ 85.45 ರೂ. ಇತ್ತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.