ನವದೆಹಲಿ: ಮೂರನೇ ದಿನವೂ ಕೂಡಾ ದೇಶದಲ್ಲಿ ತೈಲ ಬೆಲೆಗಳಲ್ಲಿ ಏರಿಕೆ ಕಂಡಿದೆ. ರಾಷ್ಟ್ರ ರಾಜಧಾನಿಯಲ್ಲಿ 35 ಪೈಸೆ ಏರಿಕೆಯಾಗಿರುವ ಒಂದು ಲೀಟರ್ ಪೆಟ್ರೋಲ್ ಬೆಲೆ 105.49 ರೂಪಾಯಿಗೆ ಏರಿಕೆಯಾಗಿದೆ. ಡೀಸೆಲ್ ಬೆಲೆಯಲ್ಲೂ 35 ಪೈಸೆ ಏರಿಕೆ ಕಂಡಿದ್ದು, ಅದರ ಬೆಲೆ ಒಂದು ಲೀಟರ್ಗೆ 94.22 ರೂಪಾಯಿಗೆ ತಲುಪಿದೆ.
ಮುಂಬೈನಲ್ಲಿ ಪೆಟ್ರೋಲ್ ಬೆಲೆ 34 ಪೈಸೆ, ಡೀಸೆಲ್ ಬೆಲೆ 37 ಪೈಸೆ ಏರಿಕೆ ಕಂಡಿದ್ದು, ಒಂದು ಲೀಟರ್ ಪೆಟ್ರೋಲ್ ಮತ್ತು ಡಿಸೇಲ್ ಬೆಲೆ ಕ್ರಮವಾಗಿ 111.43 ರೂಪಾಯಿ ಮತ್ತು 102.15 ರೂಪಾಯಿ ಆಗಿದೆ.
ಪಶ್ಚಿಮ ಬಂಗಾಳದ ಕೋಲ್ಕತ್ತಾದಲ್ಲಿ ಪೆಟ್ರೋಲ್ ಬೆಲೆ 106.10, ಡೀಸೆಲ್ ಬೆಲೆ 97.33 ರೂಪಾಯಿ ಇದ್ದರೆ, ಚೆನ್ನೈನಲ್ಲಿ ಪೆಟ್ರೋಲ್ ಬೆಲೆ 102.70 ರೂಪಾಯಿ ಮತ್ತು ಡಿಸೇಲ್ ಬೆಲೆ 98.59 ರೂಪಾಯಿಯಷ್ಟಿದೆ.
ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಪೆಟ್ರೋಲ್ ಬೆಲೆ 109.16 ರೂಪಾಯಿಯಷ್ಟಿದ್ದು, ಡೀಸೆಲ್ ಬೆಲೆ ನೂರು ರೂಪಾಯಿಯಿದೆ. ಒಂದು ವಾರದ ಹಿಂದೆ ಆಟೋ ಇಂಧನದ ಬೆಲೆ ಸತತವಾಗಿ ಏರಿಕೆ ಕಂಡಿತ್ತು. ನಂತರ ಅಕ್ಟೋಬರ್ 12 ಮತ್ತು 13ರಂದು ಬೆಲೆ ಏರಿಕೆಗೆ ಬ್ರೇಕ್ ಬಿದ್ದಿತ್ತು. ಈಗ ಮತ್ತೆ ಎರಡು ದಿನದಿಂದ ಇಂಧನದ ಬೆಲೆ ಏರಿಕೆಯಾಗುತ್ತಿದೆ.
ಇದನ್ನೂ ಓದಿ: ಪಾರ್ವತಿ ನದಿಯಲ್ಲಿ ಮುಳುಗಿ ಐವರು ಸಾವು.. ದುರ್ಗಾ ಮೂರ್ತಿ ನಿಮಜ್ಜನ ವೇಳೆ ದುರಂತ