ETV Bharat / bharat

11 ದಿನಗಳಲ್ಲಿ 8 ಬಾರಿ ಪೆಟ್ರೋಲ್, ಡೀಸೆಲ್ ಬೆಲೆ ಜಿಗಿತ.. ಇಲ್ಲಿದೆ ನೋಡಿ ಇಂದಿನ ತೈಲ ದರ - ಡೀಸೆಲ್ ಬೆಲೆ

ದೇಶಾದ್ಯಂತ ಕಳೆದ 11 ದಿನಗಳಲ್ಲಿ 8 ಬಾರಿ ಪೆಟ್ರೋಲ್, ಡೀಸೆಲ್ ದರ ಏರಿಕೆ ಮಾಡಲಾಗಿದ್ದು, ಇಂದಿನ ತೈಲ ದರದ ಕುರಿತಾದ ಮಾಹಿತಿ ಇಲ್ಲಿದೆ..

Petrol, diesel price rise
ಪೆಟ್ರೋಲ್, ಡೀಸೆಲ್ ದರದ ಮಾಹಿತಿ
author img

By

Published : Oct 4, 2021, 12:03 PM IST

Updated : Oct 4, 2021, 12:10 PM IST

ನವದೆಹಲಿ: ಇಂದು ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಯಾವುದೇ ಬದಲಾವಣೆ ಕಂಡುಬಂದಿಲ್ಲ. ಆದರೆ ಭಾರತದಲ್ಲಿ ಕಳೆದ 11 ದಿನಗಳಲ್ಲಿ 8 ಬಾರಿ ತೈಲ ದರ ಏರಿಕೆ ಮಾಡಲಾಗಿದೆ.

ಕಳೆದ ಎಂಟು ದಿನಗಳಲ್ಲಿ ಪೆಟ್ರೋಲ್​ 1 ರೂಪಾಯಿ ಮತ್ತು ಡೀಸೆಲ್ 2 ರೂಪಾಯಿ 15 ಪೈಸೆ ಹೆಚ್ಚಳವಾಗಿದ್ದು, 11 ದಿನಗಳಲ್ಲಿ 8 ಬಾರಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯಾಗಿದೆ. ಭಾನುವಾರದಂದು ಪ್ರತಿ ಲೀಟರ್ ಪೆಟ್ರೋಲ್​​ ಮೇಲೆ 24 ರಿಂದ 30 ಪೈಸೆ ಹಾಗೂ ಡೀಸೆಲ್​ ಮೇಲೆ 28 ರಿಂದ 36 ಪೈಸೆಯನ್ನು ತೈಲ ಕಂಪನಿಗಳು ಹೆಚ್ಚಿಸಿದ್ದವು. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಸದ್ಯಕ್ಕೆ ಲೀಟರ್​ ಪೆಟ್ರೋಲ್​ಗೆ 102.39 ರೂ. ಬೆಲೆಯಿದ್ದು, ಡೀಸೆಲ್​ಗೆ 90.77 ರೂ. ಇದೆ.

Petrol, diesel price rise
ಪೆಟ್ರೋಲ್, ಡೀಸೆಲ್ ದರದ ಮಾಹಿತಿ

ಮುಂಬೈನಲ್ಲಿ ಪೆಟ್ರೋಲ್ ಬೆಲೆ ಸದ್ಯಕ್ಕೆ ಪ್ರತಿ ಲೀಟರ್‌ಗೆ 108.43 ರೂ. ರಷ್ಟಿದ್ದು, ಡೀಸೆಲ್ ದರ 98.48 ರೂ. ಇದೆ. ಬೆಂಗಳೂರಿನಲ್ಲಿ ಲೀಟರ್​ ಪೆಟ್ರೋಲ್ ಬೆಲೆ 105.95 ಯಿದ್ದು, ಡೀಸೆಲ್​ ದರ 96.34 ರೂ. ಇದೆ. ಆದರೆ, ಚಿಲ್ಲರೆ ದರಗಳು ರಾಜ್ಯದ ಸ್ಥಳೀಯ ತೆರಿಗೆಗಳ ಮಟ್ಟವನ್ನು ಅವಲಂಬಿಸಿ ಬದಲಾಗುತ್ತಿರುತ್ತವೆ.

ಜಾಗತಿಕವಾಗಿ ಕಚ್ಚಾತೈಲ ಬೆಲೆಯಲ್ಲಿ ಸಹ ಯಾವುದೇ ವ್ಯತ್ಯಾಸ ಕಂಡು ಬಂದಿಲ್ಲ. ಮೊದಲು ಬ್ಯಾರೆಲ್‌ಗೆ 80 ಡಾಲರ್‌ಗಿಂತ ಅಧಿಕವಿತ್ತು. ಆದರೆ ಸೆಪ್ಟೆಂಬರ್ 5 ರ ಬಳಿಕ ಪ್ರತಿ ಬ್ಯಾರೆಲ್ ಬೆಲೆ 79 ಯುಎಸ್ ಡಾಲರ್‌ ಇದೆ.

Last Updated : Oct 4, 2021, 12:10 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.