ಬೆಂಗಳೂರು/ನವದೆಹಲಿ: ದೇಶದ ನಾಲ್ಕು ಮಹಾನಗರಗಳಲ್ಲಿ ಶನಿವಾರ ಬೆಳಗ್ಗೆ ಸರ್ಕಾರಿ ತೈಲ ಕಂಪನಿಗಳು ಬಿಡುಗಡೆ ಮಾಡಿದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಆದರೆ ಉತ್ತರ ಪ್ರದೇಶ ಹಾಗೂ ಬಿಹಾರದಲ್ಲಿ ಇಂಧನ ಬೆಲೆಗಳು ಬದಲಾಗಿವೆ. ಶುಕ್ರವಾರ ಯುಪಿಯ ಪೆಟ್ರೋಲ್ ಲೀಟರ್‌ಗೆ 16 ಪೈಸೆ ಇಳಿದು 96.76 ರೂ.ಗೆ ಮತ್ತು ಡೀಸೆಲ್ ಲೀಟರ್‌ಗೆ 15 ಪೈಸೆ ಇಳಿಕೆಯಾಗಿ 89.93 ರೂ.ಗೆ ತಲುಪಿದೆ. ಪಾಟ್ನಾದಲ್ಲಿ ಇಂದು ಪೆಟ್ರೋಲ್ ದರ ಲೀಟರ್‌ಗೆ 65 ಪೈಸೆ ಇಳಿಕೆಯಾಗಿ 107.47 ರೂ.ಗೆ ಮತ್ತು ಡೀಸೆಲ್ ಬೆಲೆ 61 ಪೈಸೆ ಇಳಿಕೆಯಾಗಿ 94.25 ರೂ.ಗೆ ತಲುಪಿದೆ.
ದೇಶದ ಮಹಾನಗರಗಳಲ್ಲಿ ತೈಲ ದರ:
- ದೆಹಲಿಯಲ್ಲಿ ಪೆಟ್ರೋಲ್ ಲೀ.ಗೆ 96.72 ರೂ ಮತ್ತು ಡೀಸೆಲ್ 89.62 ರೂ.
- ಮುಂಬೈನಲ್ಲಿ ಪೆಟ್ರೋಲ್ ಲೀ.ಗೆ 106.31 ರೂ ಮತ್ತು ಡೀಸೆಲ್ 94.27 ರೂ
- ಚೆನ್ನೈನಲ್ಲಿ ಪೆಟ್ರೋಲ್ ಲೀ.ಗೆ 102.63 ರೂ ಮತ್ತು ಡೀಸೆಲ್ 94.24 ರೂ
- ಕೋಲ್ಕತ್ತಾದಲ್ಲಿ ಪೆಟ್ರೋಲ್ ಲೀ.106.03 ರೂ ಮತ್ತು ಡೀಸೆಲ್ 92.76 ರೂ ಇದೆ.
ರಾಜ್ಯದಲ್ಲಿ ತೈಲ ದರ ಇಂತಿದೆ:
ನಗರ | ಪೆಟ್ರೋಲ್ (ಲೀ. ದರ) | ಡೀಸೆಲ್ (ಲೀ. ದರ) |
ಬೆಂಗಳೂರು | 101.96 ರೂ. | 87.91 ರೂ. |
ಶಿವಮೊಗ್ಗ | 103.82 ರೂ. | 89.48 ರೂ. |
ಮೈಸೂರು | 101.44 ರೂ. | 87.43 ರೂ. |
ಹುಬ್ಬಳ್ಳಿ | 101.65 ರೂ. | 87.65 ರೂ. |
ದಾವಣಗೆರೆ | 103.44 ರೂ. | 89.05 ರೂ. |
ಮಂಗಳೂರು | 101.85 ರೂ. | 87.78 ರೂ. |
ಇದನ್ನೂ ಓದಿ: ಅಕ್ರಮ ಲೋನ್ ಆ್ಯಪ್ಗಳ ಹಾವಳಿ: ಆರ್ಬಿಐ ಸಿದ್ಧಪಡಿಸಲಿದೆ ಸಕ್ರಮ ಆ್ಯಪ್ಗಳ ಶ್ವೇತಪಟ್ಟಿ