ವಿಜಯನಗರಂ, ಆಂಧ್ರಪ್ರದೇಶ : ತಾನು ಮದುವೆಯಾಗಬೇಕಿದ್ದ ಯುವತಿಯ ಮೇಲೆ ಅನುಮಾನಪಟ್ಟ, ಯುವಕ ಆಕೆಯ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ, ಹತ್ಯೆಗೆ ಯತ್ನಿಸಿರುವ ಘಟನೆ ಆಂಧ್ರಪ್ರದೇಶದ ವಿಜಯನಗರಂ ಜಿಲ್ಲೆಯ ಚೌಡುವಾಡ ಎಂಬ ಗ್ರಾಮದಲ್ಲಿ ನಡೆದಿದೆ.
ಘಟನೆಯಲ್ಲಿ ಯುವತಿಯ ಇಬ್ಬರು ಸಂಬಂಧಿಕರು ಸೇರಿದಂತೆ, ಮೂವರಿಗೆ ಗಾಯವಾಗಿದೆ. ಗಾಯಾಳುಗಳನ್ನು ಮೊದಲಿಗೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತು ಆದರೂ, ನಂತರ ಕೆಜಿಹೆಚ್ ಆಸ್ಪತ್ರೆಗೆ ಸ್ಥಳಾಂತರಿಸಿ, ಚಿಕಿತ್ಸೆ ನೀಡಲಾಗುತ್ತಿದೆ.
ಘಟನೆಯ ಹಿನ್ನೆಲೆ: ಕೆಲವು ವರ್ಷಗಳಿಂದ ರಾಂಬಾಬು ಮತ್ತು ಸಂತ್ರಸ್ತೆ ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು. ಮದುವೆಗೆ ಎರಡೂ ಕುಟುಂಬಗಳು ಒಪ್ಪಿಗೆ ನೀಡಿದ್ದವು. ಆದರೆ ಇತ್ತೀಚಿಗೆ ರಾಂಬಾಬು ಮದುವೆಯನ್ನು ರದ್ದು ಮಾಡುವುದಾಗಿತಯೂ, ಬೇರೊಬ್ಬನ ಜೊತೆ ಯುವತಿಗೆ ಸಂಬಂಧ ಇರುವುದಾಗಿಯೂ ಹೇಳಿದ್ದನು.
ರಾಂಬಾಬು ಈ ರೀತಿ ಹೇಳಿದ ನಂತರ, ಎರಡು ಕುಟುಂಬಗಳ ನಡುವೆ ಘರ್ಷಣೆ ನಡೆದು, ಪೊಲೀಸ್ ಠಾಣೆಯಲ್ಲಿ ಇತ್ಯರ್ಥಗೊಂಡಿತ್ತು. ಯುವತಿಯನ್ನು ಮದುವೆಯಾಗುವುದಾಗಿ ರಾಂಬಾಬು ಹೇಳಿಕೆ ನೀಡಿದ್ದನು. ಆದಾದ ನಂತರ ಗುರುವಾರ ರಾತ್ರಿ ಯುವತಿಯ ಮನೆಗೆ ತೆರಳಿದ್ದ ರಾಂಬಾಬು ಆಕೆ ಮಲಗಿದ್ದಾಗ, ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ, ಪರಾರಿಯಾಗಿದ್ದಾನೆ.
ಈ ವೇಳೆ ಯುವತಿಯ ಸಂಬಂಧಿಗಳು ಬೆಂಕಿ ಆರಿಸಲು ಮುಂದಾಗಿದ್ದಾರೆ. ಈ ವೇಳೆ ಮಗು ಹಾಗೂ ಮತ್ತೋರ್ವರಿಗೆ ಗಾಯಗಳಾಗಿದೆ. ಎಲ್ಲರಿಗೂ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ತನಿಖೆ ಕೈಗೊಂಡ ಪೊಲೀಸರು ರಾಂಬಾಬುವನ್ನು ಬಂಧಿಸಿದ್ದಾರೆ.
ಘಟನೆಗೆ ಸಿಎಂ ಜಗನ್ ಪ್ರತಿಕ್ರಿಯೆ..
ಈ ಘಟನೆ ಬಗ್ಗೆ ತಿಳಿದುಕೊಂಡ ಸಿಎಂ ಜಗನ್ ಮೋಹನ್ ರೆಡ್ಡಿ, ಅಪರಾಧಿಗೆ ಕಠಿಣ ಶಿಕ್ಷೆಯಾಗಬೇಕೆಂದು ಸೂಚಿಸಿದ್ದು, ಗಾಯಾಳುಗಳಿಗೆ ಉತ್ತಮ ಚಿಕಿತ್ಸೆ ನೀಡಲು ಆದೇಶಿಸಿದ್ದಾರೆ.
ಇದರ ಜೊತೆಗೆ ಸಚಿವರಾದ ಬಿ.ಸತ್ಯನಾರಾಯಣ, ಪುಷ್ಪಾ ಶ್ರೀವಾಣಿ ಮತ್ತು ಜಿಲ್ಲಾಧಿಕಾರಿ ಸೂರ್ಯಕುಮಾರಿ ಅವರಿಗೆ ಸಂತ್ರಸ್ತೆಯನ್ನು ಸಂಪರ್ಕಿಸಲು ಸೂಚನೆ ನೀಡಿದ್ದಾರೆ.
ಇದನ್ನೂ ಓದಿ: ಡಿಕೆಶಿ ನಿವಾಸಕ್ಕೆ ದಿಢೀರ್ ಮಾಜಿ ಸಚಿವ ಜಮೀರ್ ಭೇಟಿ: ರಾಜ್ಯ ರಾಜಕೀಯದಲ್ಲಿ ಕುತೂಹಲ