ನವದೆಹಲಿ: ಪಂಚರಾಜ್ಯ ಚುನಾವಣೆ ಮುಕ್ತಾಯಗೊಳ್ಳುತ್ತಿದ್ದಂತೆ ದೇಶದಲ್ಲಿ ಮತ್ತೊಮ್ಮೆ ತೈಲ ಬೆಲೆ ಏರಿಕೆಯತ್ತ ಮುಖ ಮಾಡಿದ್ದು, ಸತತ ನಾಲ್ಕನೇ ದಿನವೂ ತೈಲ ಬೆಲೆಯಲ್ಲಿ ಏರಿಕೆ ಕಂಡು ಬಂದಿದೆ.
ರಾಜಸ್ಥಾನದಲ್ಲಿ ಲೀಟರ್ ಪೆಟ್ರೋಲ್ ಬೆಲೆ 102 ರೂ.ಗೆ ಬಂದು ನಿಂತಿದ್ದು, ಮಧ್ಯಪ್ರದೇಶದಲ್ಲಿ 101.86 ಪೈಸೆ ಹಾಗೂ ಮಹಾರಾಷ್ಟ್ರದಲ್ಲಿ 99.95 ಪೈಸೆ ಆಗಿದೆ.
ಇಂದು ದೇಶದಲ್ಲಿ ಪೆಟ್ರೋಲ್ ಪ್ರತಿ ಲೀಟರ್ ಮೇಲೆ 25-28 ಪೈಸೆ ಹಾಗೂ ಡಿಸೇಲ್ 30-33 ಪೈಸೆ ಏರಿಕೆಯಾಗಿದೆ. ದೆಹಲಿಯಲ್ಲಿ ಪೆಟ್ರೋಲ್ ಪ್ರತಿ ಲೀಟರ್ 91.27 ಪೈಸೆ ಆಗಿದೆ. ಪಂಚರಾಜ್ಯ ಚುನಾವಣೆ ಘೋಷಣೆಯಾಗುವುದಕ್ಕೂ ಮುಂಚಿತವಾಗಿ ದೇಶದಲ್ಲಿ ತೈಲ ಬೆಲೆ ಏರಿಕೆಯಾಗಿತ್ತು. ಆದರೆ, ಚುನಾವಣೆ ಘೋಷಣೆಯಾಗುತ್ತಿದ್ದಂತೆ ತೈಲ ಬೆಲೆಯಲ್ಲಿ ಯಾವುದೇ ರೀತಿಯ ಏರಿಕೆ ಕಂಡು ಬಂದಿರಲಿಲ್ಲ. ಇದೀಗ ಮತ್ತೊಮ್ಮೆ ಏರಿಕೆಯತ್ತ ಮುಖ ಮಾಡಿದೆ. ಶ್ರೀನಗರದಲ್ಲಿ ಪೆಟ್ರೋಲ್ ಬೆಲೆ 105.43 ಪೈಸೆ ಆಗಿತು.
ಯಾವ ನಗರದಲ್ಲಿ ಎಷ್ಟು!?
- ನವದೆಹಲಿ: ಪೆಟ್ರೋಲ್ 91.27 ರೂ, ಡೀಸೆಲ್ 81.73ರೂ
- ಬೆಂಗಳೂರು: ಪೆಟ್ರೋಲ್ 94.30ರೂ, ಡೀಸೆಲ್ 86.64 ರೂ
- ಮುಂಬೈ: ಪೆಟ್ರೋಲ್ 97.61ರೂ,ಡೀಸೆಲ್ 88.82 ರೂ
- ಚೆನ್ನೈ: ಪೆಟ್ರೋಲ್ 93.15 ರೂ, ಡೀಸೆಲ್ 86.65 ರೂ
- ಪಾಟ್ನಾ: ಪೆಟ್ರೋಲ್ 93.52 ರೂ, ಡೀಸೆಲ್ 86.94 ರೂ
- ಕೋಲ್ಕತಾ: ಪೆಟ್ರೋಲ್ 91.41ರೂ, ಡೀಸೆಲ್ 84.57 ರೂ
- ಹೈದರಾಬಾದ್: ಪೆಟ್ರೋಲ್ 94.86ರೂ, ಡೀಸೆಲ್ 89.11ರೂ
- ನೋಯ್ಡಾ: ಪೆಟ್ರೋಲ್ 89.44 ರೂ, ಡೀಸೆಲ್ 82.18ರೂ