ETV Bharat / bharat

100ರ ಗಡಿ ದಾಟಿದ ಪೆಟ್ರೋಲ್... ಹಿಂದಿನ ಸರ್ಕಾರದ ಮೇಲೆ ಗೂಬೆ ಕೂರಿಸಿ, ನಮೋ ಹೇಳಿದ್ದೇನು!?

ಕಳೆದ ಕೆಲ ದಿನಗಳಿಂದ ದೇಶದಲ್ಲಿ ಪೆಟ್ರೋಲ್​-ಡಿಸೇಲ್ ಬೆಲೆ ಏರಿಕೆಯಾಗುತ್ತಿದ್ದು, ಇದೇ ವಿಚಾರವಾಗಿ ಪ್ರಧಾನಿ ನರೇಂದ್ರ ಮೋದಿ ಮಾತನಾಡಿದ್ದಾರೆ.

PM modi
PM modi
author img

By

Published : Feb 17, 2021, 7:41 PM IST

ನವದೆಹಲಿ: ದೇಶದ ಕೆಲವೊಂದು ನಗರಗಳಲ್ಲಿ ಪೆಟ್ರೋಲ್​ ಬೆಲೆ 100ರ ಗಡಿ ದಾಟಿದ್ದು, ಕೇಂದ್ರ ಸರ್ಕಾರದ ವಿರುದ್ಧ ವಾಹನ ಸವಾರರು ಹರಿಹಾಯುತ್ತಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಪ್ರಧಾನಿ ನರೇಂದ್ರ ಮೋದಿ ಹಿಂದಿನ ಸರ್ಕಾರದ ಮೇಲೆ ಗೂಬೆ ಕೂರಿಸಿದ್ದಾರೆ.

ಹಿಂದಿನ ಸರ್ಕಾರಗಳು ಭಾರತದ ಇಂಧನ ಆಮುದು ಅವಲಂಬನೆಯನ್ನ ಕಡಿಮೆ ಮಾಡುವತ್ತ ಗಮನಹರಿಸಿದ್ದರೆ, ಇಂದು ಈ ಸಮಸ್ಯೆ ಉದ್ಭವವಾಗುತ್ತಿರಲಿಲ್ಲ ಎಂದಿರುವ ಅವರು, ಮಧ್ಯಮ ವರ್ಗದವರ ಮೇಲೆ ಹೊರೆಯಾಗುತ್ತಿರಲಿಲ್ಲ ಎಂದಿದ್ದಾರೆ. ನಾನು ಯಾರನ್ನೂ ಟೀಕಿಸಲು ಬಯಸುವುದಿಲ್ಲ. ಆದರೆ ಈ ವಿಷಯದ ಬಗ್ಗೆ ಮೊದಲೇ ಗಮನಹರಿಸಿದ್ದರೆ ಮಧ್ಯಮ ವರ್ಗದವರಿಗೆ ಹೊರೆಯಾಗುತ್ತಿರಲಿಲ್ಲ ಎಂದು ನಮೋ ತಮಿಳುನಾಡಿನ ತೈಲ ಮತ್ತು ಅನಿಲ ಯೋಜನೆ ಉದ್ಘಾಟನಾ ಸಮಾರಂಭದ ಸಂದರ್ಭದಲ್ಲಿ ಹೇಳಿದ್ದಾರೆ.

ಓದಿ: ಮೂರು ರಾಜ್ಯದಲ್ಲಿ ಪೆಟ್ರೋಲ್ ಬೆಲೆ ಲೀಟರ್​ಗೆ 100 ರೂ. ವಿವಿಧ ರಾಜ್ಯಗಳಲ್ಲಿ ದರ ಇಂತಿದೆ!

ನಮ್ಮ ಸರ್ಕಾರ ಮಧ್ಯಮ ವರ್ಗದವರ ಪರವಾಗಿದ್ದು, ಪೆಟ್ರೋಲ್​ನಲ್ಲಿ ಎಥೆನಾಲ್​ ಮಿಶ್ರಣ ಹೆಚ್ಚಿಸುವ ಬಗ್ಗೆ ಗಮನ ಹರಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ. ಕಬ್ಬಿನಿಂದ ತೆಗೆದ ಎಥೆನಾಲ್​ ತೈಲ ಆಮುದು ಕಡಿತಗೊಳಿಸಲು ಸಹಕಾರಿಯಾಗುವುದರ ಜತೆಗೆ ರೈತರಿಗೆ ಪರ್ಯಾಯ ಆದಾಯ ಮೂಲ ನೀಡಲಿದೆ ಎಂದಿದ್ದಾರೆ.

ನವೀಕರಿಸಬಹುದಾದ ಇಂಧನ ಮೂಲಗಳ ಬಳಸುವುದರತ್ತಲೂ ಕೇಂದ್ರೀಕರಿಸಲಾಗಿದ್ದು, 2030ರ ವೇಳೆಗೆ ದೇಶದಲ್ಲಿ ಇದರ ಪ್ರಮಾಣ ಶೇ.40ರಷ್ಟು ಆಗಲಿದೆ ಎಂದಿದ್ದಾರೆ.ದೇಶದಲ್ಲಿ ಕಳೆದ ಕೆಲ ದಿನಗಳಿಂದ ನಿರಂತರವಾಗಿ ಇಂಧನ ಬೆಲೆ ಏರಿಕೆಯಾಗುತ್ತಿದ್ದು, ರಾಜಸ್ಥಾನ, ಮಧ್ಯಪ್ರದೇಶದಲ್ಲಿ ಈಗಾಗಲೇ ಪೆಟ್ರೋಲ್​ ಬೆಲೆ ಲೀಟರ್​ಗೆ 100ರೂ. ಗಡಿ ದಾಟಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.