ನವದೆಹಲಿ: ದೇಶದಲ್ಲಿ ವಾಹನ ಸವಾರರಿಗೆ ಇಂಧನ ಬೆಲೆ ಏರಿಕೆ ಬಿಸಿ ಮುಂದುವರೆದಿದ್ದು, ಸತತ ಮೂರನೇ ದಿನವೂ ಕೂಡ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ ಕಂಡಿದೆ. ನೂತನ ಪರಿಷ್ಕರಣೆಯೊಂದಿಗೆ ಪೆಟ್ರೋಲ್ ಮತ್ತು ಡೀಸೆಲ್ ದರವು ಮತ್ತೆ ದಾಖಲೆಯ ಗರಿಷ್ಠ ಮಟ್ಟ ತಲುಪಿದೆ. ನಿನ್ನೆಗಿಂತ ಪೆಟ್ರೋಲ್ ಮತ್ತು ಡೀಸೆಲ್ ದರದಲ್ಲಿ ಕ್ರಮವಾಗಿ ಪ್ರತಿ ಲೀಟರ್‌ಗೆ 25 ಪೈಸೆ ಮತ್ತು 30 ಪೈಸೆ ಹೆಚ್ಚಿಸಲಾಗಿದೆ.
ರಾಷ್ಟ್ರರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್ ಒಂದು ಲೀಟರ್‌ಗೆ 102.14 ರೂ. ಹಾಗೂ ಡೀಸೆಲ್ ಬೆಲೆಯನ್ನು 90.47 ರೂ.ಗಳಿಗೆ ಹೆಚ್ಚಿಸಲಾಗಿದೆ. ಮುಂಬೈನಲ್ಲಿ ಪೆಟ್ರೋಲ್ ಲೀಟರ್‌ಗೆ 108.19 ಹಾಗೂ ಡೀಸೆಲ್ ದರ 98.16 ರೂಪಾಯಿಗೆ ಏರಿಕೆಯಾಗಿದೆ.
ಬೆಂಗಳೂರಿನಲ್ಲಿ ಲೀಟರ್ ಪೆಟ್ರೋಲ್ ದರ 105.65 ರೂ. ಹಾಗೂ ಡೀಸೆಲ್ ಬೆಲೆ 95.98 ರೂಪಾಯಿಗೆ ಹೆಚ್ಚಿಸಲಾಗಿದೆ. ಭೋಪಾಲ್ನಲ್ಲಿ ಲೀಟರ್ ಪೆಟ್ರೋಲ್ ದರ 110.59 ರೂಪಾಯಿ ಹಾಗೂ ಲೀಟರ್ ಡೀಸೆಲ್ ದರ 99.17 ಏರಿಕೆ ಕಂಡಿದೆ.
ಪಶ್ಚಿಮ ಬಂಗಾಳದ ರಾಜಧಾನಿ ಕೋಲ್ಕತ್ತಾದಲ್ಲಿ, ಪೆಟ್ರೋಲ್ ಲೀಟರ್‌ಗೆ 102.77 ರೂ. ಹಾಗೂ ಡೀಸೆಲ್ 93.57 ರೂ. ಆಗಿದೆ. ಹಾಗೆಯೇ ಚೆನ್ನೈನಲ್ಲಿ, ಪೆಟ್ರೋಲ್ ಬೆಲೆ ರೂ. 99.80ಕ್ಕೆ ಹೆಚ್ಚಿಸಲಾಗಿದ್ದು, ಡೀಸೆಲ್ ಪ್ರತಿ ಲೀಟರ್‌ಗೆ ರೂ. 95.02 ಆಗಿದೆ.
ಕಳೆದ ವಾರದಲ್ಲಿ ಮೂರು ವಾರಗಳ ವಿರಾಮದ ನಂತರ ನಾಲ್ಕನೇ ಬಾರಿಗೆ ಪೆಟ್ರೋಲ್ ಬೆಲೆಯಲ್ಲಿ ಹೆಚ್ಚಳವಾಗಿದೆ. ಅಂತೆಯೇ ಸೆಪ್ಟೆಂಬರ್ 24ರ ನಂತರ ಡೀಸೆಲ್ ದರದಲ್ಲಿ ಆರನೆ ಸಲ ಏರಿಕೆಯಾಗಿದೆ.
ಅಂತಾರಾಷ್ಟ್ರೀಯ ಮಟ್ಟದಲ್ಲಿ ತೈಲ ಬೆಲೆಯಲ್ಲಿ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಇಂಧನ ಬೆಲೆಯಲ್ಲಿ ನಿರಂತರ ಹೆಚ್ಚಳ ಕಂಡುಬರುತ್ತಿದೆ. ಪ್ರಸ್ತುತ, ಅಂತಾರಾಷ್ಟ್ರೀಯ ತೈಲವು ಮೂರು ವರ್ಷಗಳ ಗರಿಷ್ಠ ಮಟ್ಟದಲ್ಲಿ ವಹಿವಾಟು ನಡೆಸುತ್ತಿದೆ. ಪ್ರಸ್ತುತ ಜಾಗತಿಕ ತೈಲ ಬೆಲೆಯು ಪ್ರತಿ ಬ್ಯಾರೆಲ್‌ಗೆ $ 78.64 ಆಗಿದೆ.
ಇದನ್ನೂ ಓದಿ: Corona updates: ಭಾರತದಲ್ಲಿ 24,354 ಹೊಸ ಪ್ರಕರಣ, ಮತ್ತೆ ಕೇರಳದಲ್ಲೇ ಹೆಚ್ಚು