ನವದೆಹಲಿ: ದೇಶದಲ್ಲಿ ಇಂದು ಸತತ ನಾಲ್ಕನೇ ದಿನವೂ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯಾಗಿದೆ. ಪ್ರತಿ ಲೀಟರ್ ಪೆಟ್ರೋಲ್ ಮೇಲೆ 30 ಪೈಸೆ ಹಾಗೂ ಡೀಸೆಲ್ ಮೇಲೆ 35 ಪೈಸೆಯಷ್ಟು ತೈಲ ಕಂಪನಿಗಳು ಹೆಚ್ಚಿಸಿವೆ.
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 30 ಪೈಸೆ ಏರಿಕೆಯೊಂದಿಗೆ ಲೀಟರ್ ಪೆಟ್ರೋಲ್ ದರ 103.24 ರೂ. ಇಂದ 103.54 ಹಾಗೂ 35 ಪೈಸೆ ಹೆಚ್ಚಳದೊಂದಿಗೆ ಡೀಸೆಲ್ ದರ 91.77 ರೂ. ಇಂದ 92.12 ರೂ ಏರಿಕೆಯಾಗಿದೆ.
ಮುಂಬೈನಲ್ಲಿ ಪೆಟ್ರೋಲ್ ಬೆಲೆ ಸದ್ಯಕ್ಕೆ ಪ್ರತಿ ಲೀಟರ್‌ಗೆ 109.54 ರೂ. ರಷ್ಟಿದ್ದು, ಡೀಸೆಲ್ ದರ 99.22 ರೂ. ಇದೆ. ಬೆಂಗಳೂರಿನಲ್ಲಿ ಲೀಟರ್ ಪೆಟ್ರೋಲ್ ಬೆಲೆ 107.14 ಯಿದ್ದು, ಡೀಸೆಲ್ ದರ 97.77 ರೂ. ಇದೆ.
ಭಾರತ್ ಪೆಟ್ರೋಲಿಯಂ, ಇಂಡಿಯನ್ ಆಯಿಲ್ ಮತ್ತು ಹಿಂದುಸ್ತಾನ್ ಪೆಟ್ರೋಲಿಯಂ ಸೇರಿದಂತೆ ತೈಲ ಕಂಪನಿಗಳು ಅಬಕಾರಿ ಸುಂಕಗಳ ಆಧಾರದ ಮೇಲೆ ಇಂಧನ ದರವನ್ನು ಹೆಚ್ಚಿಸುತ್ತಿರುತ್ತವೆ. ಎಲ್ಲಾ ರಾಜ್ಯಗಳಲ್ಲೂ ಈಗಾಗಲೇ ಪೆಟ್ರೋಲ್ ಬೆಲೆ ಶತಕದ ಗಡಿ ದಾಟಿದ್ದು, ಡೀಸೆಲ್ ಬೆಲೆಯೂ ನೂರರ ಗಡಿ ತಲುಪಲಿದೆ.