ಸಾಕುಪ್ರಾಣಿಗಳನ್ನು ಮಕ್ಕಳಂತೆ ಲಾಲನೆ ಪಾಲನೆ ಮಾಡುವ ಅದೆಷ್ಟೋ ಜನ ನಮ್ಮ ನಡುವೆ ಇದ್ದಾರೆ. ಮಾತು ಬಾರದ ಮುಗ್ಧ ಪ್ರಾಣಿಗಳ ಗೆಳೆತನ ಸಾಕಷ್ಟು ನೆಮ್ಮದಿ ನೀಡುತ್ತದೆ ಎಂಬುದು ಹೆಚ್ಚಿನವರ ಅಭಿಪ್ರಾಯ. ಯಾವ ಪ್ರಾಣಿಗಳನ್ನು ಸಾಕುತ್ತೇವೆ ಎಂಬುದರಲ್ಲಿ ಬಹಳಷ್ಟು ವೈವಿಧ್ಯಗಳಿವೆ. ಕೆಲವರು ಬೆಕ್ಕು, ನಾಯಿಗಳನ್ನು ಇಷ್ಟಪಡುತ್ತಾರೆ, ಇನ್ನೂ ಕೆಲವರು ಹಾವುಗಳಂತಹ ಸರೀಸೃಪಗಳನ್ನು ಇಷ್ಟಪಡುತ್ತಾರೆ. ಇದೀಗ ಸಾಮಾಜಿಕ ಜಾಲತಾಣದಲ್ಲಿ ಹೆಬ್ಬಾವಿನ ವಿಡಿಯೋವೊಂದು ವೈರಲ್ ಆಗಿದ್ದು, ಭಾರಿ ಸದ್ದು ಮಾಡುತ್ತಿದೆ.
ವೈರಲ್ ವಿಡಿಯೋದಲ್ಲಿ, ಮಹಿಳೆ ತನ್ನ ಮನೆಯಲ್ಲಿ ಹಾವನ್ನು ಕೂಡಿ ಇಟ್ಟಿದ್ದ ಬಾಕ್ಸ್ನ ಮುಚ್ಚಳವನ್ನ ತೆರೆಯುತ್ತಾರೆ. ಸರೀಸೃಪವು ನಿಧಾನವಾಗಿ ಮೇಲೆ ಬರುವಾಗ ಮಹಿಳೆ ತನ್ನ ಬಲಗೈಯನ್ನು ನೀಡುತ್ತಾಳೆ. ಆದರೆ, ಕೆಲವೇ ಸೆಕೆಂಡುಗಳಲ್ಲಿ ಹಾವು ಆಕೆಯ ಕೈಯನ್ನು ಕಚ್ಚಿ, ಭುಜದ ಸುತ್ತಲೂ ಸಂಪೂರ್ಣವಾಗಿ ಸುತ್ತಲು ಪ್ರಯತ್ನಿಸುತ್ತದೆ. ಮಹಿಳೆ ಹಾವನ್ನು ಮತ್ತೆ ಮುಚ್ಚಳಕ್ಕೆ ಹಾಕಲು ಪ್ರಯತ್ನಿಸಿದರೂ ಯಾವುದೇ ಪ್ರಯೋಜನವಾಗಲಿಲ್ಲ. ಸ್ಥಳದಲ್ಲೇ ಇದ್ದ ಇನ್ನೊಬ್ಬ ವ್ಯಕ್ತಿ ಅವಳ ಸಹಾಯಕ್ಕೆ ಧಾವಿಸಿದರೂ, ದೈತ್ಯ ಸರೀಸೃಪವು ಮಹಿಳೆಯ ಕೈ ಸುತ್ತಿಕೊಳ್ಳುವುದನ್ನ ಮುಂದುವರಿಸುತ್ತದೆ. ಈ ವೇಳೆಗೆ ಮಹಿಳೆಗೆ ಭಾರಿ ರಕ್ತಸ್ರಾವವಾಗಿದೆ.
ಟ್ವಿಟರ್‌ನಲ್ಲಿ ಡೈಲಿ ಲೌಡ್ ಎಂಬುವರು ಈ ವಿಡಿಯೋ ಹಂಚಿಕೊಂಡಿದ್ದು, 80 ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ. ಮತ್ತು ಒಂದು ಲಕ್ಷಕ್ಕೂ ಹೆಚ್ಚು ಲೈಕ್‌ಗಳನ್ನು ಸಂಗ್ರಹಿಸಿದೆ.
-
Snake attacks owner as she tries to take it out of cage 😳🐍 pic.twitter.com/auVgWTttQ8
— Daily Loud (@DailyLoud) October 23, 2022 " class="align-text-top noRightClick twitterSection" data="
">Snake attacks owner as she tries to take it out of cage 😳🐍 pic.twitter.com/auVgWTttQ8
— Daily Loud (@DailyLoud) October 23, 2022Snake attacks owner as she tries to take it out of cage 😳🐍 pic.twitter.com/auVgWTttQ8
— Daily Loud (@DailyLoud) October 23, 2022
ಇದನ್ನೂ ಓದಿ: ಆಫ್ರಿಕನ್ ಹೆಬ್ಬಾವುಗಳನ್ನು ಸಾಕಿದ ವಿದ್ಯಾರ್ಥಿ: ಲಕ್ಷಾಂತರ ಆದಾಯ ಗಳಿಕೆ
ವಿಡಿಯೋ ವೈರಲ್ ಆಗುತ್ತಿದ್ದಂತೆ ಸಾಮಾಜಿಕ ಬಳಕೆದಾರರು ಕಮೆಂಟ್ ಮಾಡಿ, ಇಷ್ಟು ದೊಡ್ಡ ಹಾವನ್ನು ಸಾಕುಪ್ರಾಣಿಯಾಗಿ ಮಾಡಿಕೊಳ್ಳಲು ಕಾರಣವೇನು? ಎಂದು ಪ್ರಶ್ನಿಸಿದ್ದಾರೆ. ಜೊತೆಗೆ ಮಹಿಳೆಯನ್ನ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆಯೇ ಅಥವಾ ಇಲ್ಲವೇ ಎಂಬುದರ ಕುರಿತು ಯಾವುದೇ ಮಾಹಿತಿ ಲಭ್ಯವಾಗಿಲ್ಲ.