ETV Bharat / bharat

ಮಾಲೀಕ ಮನೆ ಬಿಟ್ಟು ಪರಾರಿ: ಐದು ದಿನ ಆಹಾರವಿಲ್ಲದೇ ಮೂಕಪ್ರಾಣಿಗಳ ರೋದನೆ

author img

By

Published : Apr 9, 2021, 11:21 AM IST

ಮನೆಯ ಮಾಲೀಕ ಮನೆ ಬಿಟ್ಟು ಹೋದ ಕಾರಣ ಆಹಾರ ನೀಡುವವರಿಲ್ಲದೇ 5 ದಿನಗಳಿಂದ ಹಸಿದು ಬಳಲಿ ಬೆಂಡಾಗಿದ್ದ ಪ್ರಾಣಿ ಪಕ್ಷಿಗಳಿಗೆ ಸ್ವಯಂಸೇವಕ ಸಂಘವೊಂದು ಆಹಾರ ನೀರು ನೀಡಿ, ಪ್ರಾಣಿಪ್ರಿಯರ ಮನೆಗೆ ಬಿಟ್ಟಿದೆ.

malappuram
5 ದಿನಗಳವರೆಗೆ ಆಹಾರವಿಲ್ಲದೇ ನರಳಾಟ

ಮಲಪ್ಪುರಂ(ಕೇರಳ): ವ್ಯಕ್ತಿಯೋರ್ವ ಮನೆ ಬಿಟ್ಟು ಓಡಿ ಹೋದ ಕಾರಣ ಆತ ಸಾಕಿದ್ದ ಮೂಕಪ್ರಾಣಿಗಳೆಲ್ಲವೂ ಹಸಿವಿನಿಂದ ನರಳಾಡಿದ ಘಟನೆ ಪೆರಿಂತಲ್​ಮಲ್​ಮನ್ನನ ತಜ್​ಕೋಡ್​ನಲ್ಲಿ ನಡೆದಿದೆ. ವಿಷಯ ತಿಳಿದು ಸ್ಥಳಕ್ಕಾಮಿಸಿದ ಸ್ವಯಂಸೇವಕರ ಸಂಘವೊಂದು ಪ್ರಾಣಿಗಳ ಹಸಿವು ನೀಗಿಸಿ ಅವುಗಳನ್ನು ರಕ್ಷಿಸಿದೆ.

5 ದಿನಗಳವರೆಗೆ ಆಹಾರವಿಲ್ಲದೇ ನರಳಾಟ

ಅಲಪ್ಪುಳಾದ ಮನ್ನಾರ್ ಮೂಲದ ವ್ಯಕ್ತಿಯೊಬ್ಬ ಮೂರು ನಾಯಿಗಳು, ಒಂದು ಕರು, ಕತ್ತೆ ಹಾಗೂ ಅದರ ಮರಿ ಪಕ್ಷಿಗಳನ್ನು ಸಾಕಿದ್ದರು. ಆದರೆ ಈತ ನಾಲ್ಕು ಮದುವೆಯಾಗಿದ್ದು, ಈತನ ವಿರುದ್ಧ ಹಲವು ಕೇಸ್​ಗಳು ಸಹ ದಾಖಲಾಗಿದ್ದವು. ಇದೀಗ ಇದ್ದಕ್ಕಿಂದತೆ ಮನೆ ಖಾಲಿಮಾಡಿಕೊಂಡು ಊರು ಬಿಟ್ಟಿದ್ದಾನೆ. ಮಾಲೀಕನಿಲ್ಲದೇ ಆಹಾರ ನೀಡಲು ಯಾರು ಇಲ್ಲದೇ ಆತ ಸಾಕಿದ್ದ ಈ ಪ್ರಾಣಿಗಳು ಹಸಿವಿನಿಂದ ಬಳಲುತ್ತಿದ್ದವು.

ಘಟನೆಯ ಬಗ್ಗೆ ತಿಳಿದ ಅಬ್ದುಲ್ ಮಜೀದ್ ಎಂಬುವವರ ನೇತೃತ್ವದ ಸ್ವಯಂಸೇವಕ ಗುಂಪಿನ ಸದಸ್ಯರು ಈ ಪ್ರಾಣಿಗಳಿದ್ದ ಸ್ಥಳಕ್ಕೆ ಧಾವಿಸಿ, 5 ದಿನಗಳಿಂದ ಹಸಿದಿದ್ದ ಪ್ರಾಣಿಗಳು, ಪಕ್ಷಿಗಳಿಗೆ ಆಹಾರ ನೀಡಿ ಕುಡಿಯುವ ನೀರು ನೀಡಿದರು. ಇದರ ಬೆನ್ನಲ್ಲೇ ಪೊಲೀಸರ ಅನುಮತಿಯೊಂದಿಗೆ ಪ್ರಾಣಿಗಳನ್ನು ಆನಂದ್ ಎಂಬ ಪ್ರಾಣಿ ಪ್ರೇಮಿ ಮನೆಗೆ ಬಿಡಲಾಯ್ತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.