ನವದೆಹಲಿ: ಭಾರತದ ಅಧ್ಯಕ್ಷತೆಯಲ್ಲಿ ನಡೆದ ಐತಿಹಾಸಿಕ ಜಿ20 ಶೃಂಗಸಭೆಯ ಮೇಲೆ ಬೆಳಕು ಚೆಲ್ಲುವ 'ಪೀಪಲ್ಸ್ ಜಿ20' ಇ-ಪುಸ್ತಕವನ್ನು ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಕಾರ್ಯದರ್ಶಿ ಅಪೂರ್ವ ಚಂದ್ರ ನವದೆಹಲಿಯಲ್ಲಿ ಮಂಗಳವಾರ ಅನಾವರಣಗೊಳಿಸಿದರು.
ಜಿ20 ಅಧ್ಯಕ್ಷತೆಯ ಅವಧಿಯಲ್ಲಿ ಭಾರತದ ಪ್ರಯಾಣದ ಸಮಗ್ರ ಮಾಹಿತಿ ಇರುವ 'ಪೀಪಲ್ಸ್- ಜಿ20' ಇ-ಪುಸ್ತಕವನ್ನು ಮೂರು ಭಾಗಗಳಾಗಿ ವಿಂಗಡಿಸಲಾಗಿದೆ. ಮೊದಲ ಭಾಗವು ದೆಹಲಿಯಲ್ಲಿ ಸೆಪ್ಟೆಂಬರ್ 9- 10ರಂದು ನಡೆದ ಐತಿಹಾಸಿಕ ಜಿ20 ಶೃಂಗಸಭೆಯ ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಪತ್ರಿಕಾ ಪ್ರಕಟಣೆಯನ್ನು ಒಳಗೊಂಡಿದೆ. ಜಿ20ಯ ರಚನೆ ಮತ್ತು ಕಾರ್ಯಾಚರಣೆ, ಜಿ20ಯ ಭಾರತದ ಅಧ್ಯಕ್ಷತೆಯ ಅವಧಿಯಲ್ಲಿ ಕೈಗೊಂಡ ಉಪಕ್ರಮಗಳ ಬಗ್ಗೆ ವಿವರವಾದ ಮಾಹಿತಿ ನೀಡುತ್ತದೆ.
-
Secretary, @MIB_India today unveiled “People’s G20”, an eBook on India’s #G20 Presidency in New Delhi
— PIB India (@PIB_India) September 18, 2023 " class="align-text-top noRightClick twitterSection" data="
People’s G20 - An ebook tracing the monumental journey of India’s #G20 Presidency that turned #G20Bharat into a people-powered movement!
Read here: https://t.co/VRd6rBXHhK… pic.twitter.com/Cw4vKJx1zN
">Secretary, @MIB_India today unveiled “People’s G20”, an eBook on India’s #G20 Presidency in New Delhi
— PIB India (@PIB_India) September 18, 2023
People’s G20 - An ebook tracing the monumental journey of India’s #G20 Presidency that turned #G20Bharat into a people-powered movement!
Read here: https://t.co/VRd6rBXHhK… pic.twitter.com/Cw4vKJx1zNSecretary, @MIB_India today unveiled “People’s G20”, an eBook on India’s #G20 Presidency in New Delhi
— PIB India (@PIB_India) September 18, 2023
People’s G20 - An ebook tracing the monumental journey of India’s #G20 Presidency that turned #G20Bharat into a people-powered movement!
Read here: https://t.co/VRd6rBXHhK… pic.twitter.com/Cw4vKJx1zN
ಎರಡನೇ ಭಾಗದಲ್ಲಿ ಶೆರ್ಪಾ ಮತ್ತು ಫೈನಾನ್ಸ್ ಟ್ರ್ಯಾಕ್ ಅಡಿಯಲ್ಲಿ ವಿವಿಧ ವರ್ಕಿಂಗ್ ಗ್ರೂಪ್ಗಳು ನಡೆಸಿದ ಸಭೆಗಳ ಸಾರಾಂಶ ಹಾಗೂ ಪತ್ರಿಕಾ ಪ್ರಕಟಣೆಗಳಿವೆ. ಅದಲ್ಲದೆ, ಭಾರತ ಜಿ20 ಶೃಂಗಸಭೆ ಅಧ್ಯಕ್ಷತೆ ವಹಿಸಿಕೊಂಡ ನಂತರ ಅಂದರೆ ಕಳೆದ ವರ್ಷದದಲ್ಲಿ ದೇಶಾದ್ಯಂತ ನಡೆದ ಕಾರ್ಯಕ್ರಮಗಳು, ಗ್ರೂಪ್ ಸೆಷನ್ಗಳ ಸಂಪೂರ್ಣ ಮಾಹಿತಿಯನ್ನು ಇದು ಒಳಗೊಂಡಿದೆ.
ಅಂತಿಮವಾಗಿ, ಕೊನೆಯ ಭಾಗದಲ್ಲಿ ಕಳೆದ ವರ್ಷ ಭಾರತಾದ್ಯಂತ ನಡೆದ ಜನ್-ಭಾಗೀದಾರಿ ಕಾರ್ಯಕ್ರಮ ಫೋಟೋಸಹಿತ ಪ್ರಬಂಧಗಳನ್ನು ನೀಡಲಾಗಿದೆ. ಈ ಕಾರ್ಯಕ್ರಮಗಳು ಜಿ20 ಅಧ್ಯಕ್ಷತೆಯನ್ನು ಜನಭಾಗಿತ್ವದ ಚಳುವಳಿಯಾಗಿ ಪರಿವರ್ತಿಸಿವೆ. ಆನ್ಲೈನ್ ಮೂಲಕ ಇ-ಪುಸ್ತಕವನ್ನು ಓದಲು ಸಾಧ್ಯವಿದ್ದು, https://static.pib.gov.in/WriteReadData/userfiles/People_g20_flipbook/index.html ಈ ಲಿಂಕ್ ಮೂಲಕ ಪಡೆಯಬಹುದು.
ಇ-ಪುಸ್ತಕ ಅನಾವರಣ ಕಾರ್ಯಕ್ರಮದಲ್ಲಿ ಪ್ರೆಸ್ ಇನ್ಫಾರ್ಮೇಶನ್ ಬ್ಯೂರೋದ ಪ್ರಧಾನ ಮಹಾನಿರ್ದೇಶಕ ಮನೀಶ್ ದೇಸಾಯಿ ಹಾಗೂ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಹಾಗೂ ಪ್ರೆಸ್ ಇನ್ಫಾರ್ಮೇಶನ್ ಬ್ಯೂರೋದ ಅಧಿಕಾರಿಗಳು ಭಾಗವಹಿಸಿದ್ದರು.
ಭಾರತದ ಅಧ್ಯಕ್ಷತೆಯಲ್ಲಿ ಸೆಪ್ಟೆಂಬರ್ 9 ಹಾಗೂ 10 ರಂದು ಅಚ್ಚಕಟ್ಟಾಗಿ ದೆಹಲಿಯಲ್ಲಿ ನಡೆದ ಜಿ 20 ಶೃಂಗಸಭೆಯಲ್ಲಿ ವಿಶ್ವದ ಅನೇಕ ನಾಯಕರು ಭಾಗವಹಿಸಿದ್ದರು. ಕಾರ್ಯಕ್ರಮದ ಸಮಯದಲ್ಲಿ ಭದ್ರತೆ ಹಾಗೂ ಸಂಚಾರ ಸೌಲಭ್ಯವನ್ನು ಅತ್ಯಂತ ಸುವ್ಯಸ್ಥಿತವಾಗಿ ನಿರ್ವಹಿಸಿದ ಪೊಲೀಸ್ ಇಲಾಖೆಗೆ ಮೆಚ್ಚುಗೆ ಸೂಚಿಸುವ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿ ಅವರು ದೆಹಲಿ ಪೊಲೀಸರಿಗೆ ಔತಣಕೂಟವನ್ನು ಆಯೋಜಿಸಿದ್ದಾರೆ.
ಇದನ್ನೂ ಓದಿ: ಜಿ 20 ಶೃಂಗಸಭೆ ಯಶಸ್ಸು: ದೆಹಲಿ ಪೊಲೀಸ್ ಸಿಬ್ಬಂದಿಗೆ ಔತಣಕೂಟ ಆಯೋಜಿಸಲಿರುವ ಪ್ರಧಾನಿ