ಬರ್ನಾಲ್ (ಪಂಜಾಬ್): ಗೂಗಲ್ ಮ್ಯಾಪ್ ಸರ್ವರ್‌ನಲ್ಲಿ ತಾಂತ್ರಿಕ ದೋಷ ಎದುರಾದ ಕಾರಣ ಕೆಲ ಸಮಯ ಗೂಗಲ್ ಮ್ಯಾಪ್ ಆ್ಯಪ್ ತನ್ನ ಕಾರ್ಯ ಸ್ಥಗಿತಗೊಳಿಸಿತ್ತು. ಇದರಿಂದಾಗಿ ಅನೇಕ ಸವಾರರು ತಮ್ಮ ನಿಗದಿತ ಸ್ಥಳಕ್ಕೆ ತೆರಳಲು ಸಂಕಷ್ಟಕ್ಕೆ ಸಿಲುಕಿದರು.
ಗುರುವಾರ ರಾತ್ರಿ 9.30 Google map app ಕ್ರ್ಯಾಶ್ ಆಗಿದ್ದು, ಸಾವಿರಾರು ಜನರು ತಮ್ಮ ನಿಗದಿತ ಸ್ಥಾನಕ್ಕೆ ತಲುಪಲು ಮುಜುಗರಕ್ಕೊಳಗಾದರು. ಬರ್ನಾಲದ ಪಪ್ಪಿ ಎಂಬ ಚಾಲಕ ರಾತ್ರಿ 9.30ರ ಸುಮಾರಿಗೆ ಗೂಗಲ್ ಮ್ಯಾಪ್ ಬಳಸಿ ದೂರದ ಪ್ರಯಾಣಕ್ಕೆ ತೆರಳುತ್ತಿದ್ದರು. ಈ ವೇಳೆ, ಏಕಾಏಕಿ ಗೂಗಲ್ ಮ್ಯಾಪ್ ತನ್ನ ಕಾರ್ಯ ಸ್ಥಗಿತಗೊಳಿಸಿದೆ. ಎಷ್ಟೇ ಸಮಯ ಕಳೆದರೂ ಗೂಗಲ್ ಮ್ಯಾಪ್ ಆ್ಯಪ್ ಓಪನ್ ಆಗಲೇ ಇಲ್ಲ. ಬಳಿಕ ಆತ ಆಪಲ್ ಮ್ಯಾಪ್ ಬಳಿಸಿ ತನ್ನ ನಿಗದಿತ ಸ್ಥಳಕ್ಕೆ ತೆರಳಿದರು.
ಓದಿ: ಪಾವಗಡದ ಬಳಿ ಖಾಸಗಿ ಬಸ್ ಪಲ್ಟಿ: 8ಕ್ಕೂ ಹೆಚ್ಚು ಮಂದಿ ಸಾವು, ಹಲವರಿಗೆ ಗಾಯ
ಗುರುವಾರ ರಾತ್ರಿ ಗೂಗಲ್ ಮ್ಯಾಪ್ ಬಗ್ಗೆ ಡಾನ್ ಡಾ ಎಂಬ ವೆಬ್‌ಸೈಟ್ ವರದಿ ಮಾಡಿದೆ. ಇದ್ದಕ್ಕಿದ್ದಂತೆ ಗೂಗಲ್ ಅಪ್ಲಿಕೇಶನ್‌ನ ಸರ್ವರ್‌ನಲ್ಲಿ ತಾಂತ್ರಿಕ ದೋಷ ಎದುರಾಗಿದೆ. ಇದರಿಂದಾಗಿ ಜನರು ಗೂಗಲ್ ಮ್ಯಾಪ್ ಅಪ್ಲಿಕೇಶನ್ ಅನ್ನು ಪ್ರವೇಶಿಸಲು ತೊಂದರೆ ಅನುಭವಿಸಿದರು ಎಂದರು. ಸಾಮಾಜಿಕ ಮಾಧ್ಯಮಗಳಲ್ಲಿ ಗೂಗಲ್ ಮ್ಯಾಪ್ಸ್ ಆ್ಯಪ್ನಿಂದ ತೊಂದರೆ ಅನುಭವಿಸಿದ ಜನರು ತಮ್ಮ ಬೇಸರವನ್ನು ವ್ಯಕ್ತಪಡಿಸಿದ್ದಾರೆ.