ನೆಲ್ಲೂರು (ಆಂಧ್ರ ಪ್ರದೇಶ): ನೆಲ್ಲೂರು ಜಿಲ್ಲೆಯ ಮುತ್ತುಕುರು ಮಂಡಲ್ ಕೃಷ್ಣಪಟ್ಟಣಂನಲ್ಲಿ ಕೊರೊನಾ ಚಿಕಿತ್ಸೆಗಾಗಿ ಆನಂದಯ್ಯ ಎಂಬುವರು ನೀಡುವ ಆಯುರ್ವೇದ ಔಷಧಿ ಪಡೆಯಲು ನೂಕು ನುಗ್ಗಲು ಉಂಟಾಗಿದ್ದು, ಔಷಧಿ ಹಂಚಿಕೆ ತಡೆಹಿಡಿಯಲಾಗಿದೆ.
ಕೊರೊನಾ ಔಷಧಿ ಕೊಳ್ಳಲು 3 ಕಿ.ಮೀಟರ್‌ವರೆಗೂ ಜನತೆ ಸಾಲುಗಟ್ಟಿ ನಿಂತಿರುವುದು ಕಂಡು ಬಂದಿತ್ತು. ಈ ನಡುವೆ ಆಯುರ್ವೇದ ಔಷಧಿ ಪಡೆಯಲು ನೂಕುನುಗ್ಗಲು ಉಂಟಾಗಿದೆ. ಇನ್ನೊಂದೆಡೆ ಈ ಆಯುರ್ವೇದ ಔಷಧಿ ವಿತರಣೆಗೆ ಆರೋಗ್ಯ ಇಲಾಖೆ ಅಧಿಕಾರಿಗಳು ಯಾವುದೇ ಅನುಮತಿ ನೀಡಿಲ್ಲ ಎಂದು ತಿಳಿದು ಬಂದಿದೆ.
ಈ ಹಿನ್ನೆಲೆ ಸ್ಥಳಕ್ಕೆ ಪೊಲೀಸರು ದೌಡಾಯಿಸಿದ್ದು, ಆಯುರ್ವೇದ ಔಷಧಿ ವಿತರಣೆಯನ್ನ ಸ್ಥಗಿತಗೊಳಿಸಿದ್ದಾರೆ. ಪೊಲೀಸರ ಈ ಹೇಳಿಕೆಯಿಂದ ಔಷಧಿ ಪಡೆಯಲು ದೂರದಿಂದ ಬಂದಿದ್ದ ನೂರಾರು ಮಂದಿ ಖಾಲಿ ಕೈಯಲ್ಲಿ ಬೇಸರದಿಂದ ವಾಪಸ್ ತೆರಳಿದ್ದಾರೆ.
ಸದ್ಯ ಈ ಆಯುರ್ವೇದ ಔಷಧಿ ವಿತರಣೆ ಕುತರಿಂತೆ ಸಿಎಂ ಜಗನ್ ಮೋಹನ್ ರೆಡ್ಡಿ ಪರಿಶೀಲನೆ ನಡೆಸಲಿದ್ದಾರೆ. ಈ ಔಷಧಿ ವಿತರಣೆಗೆ ಸೂಕ್ತವಾಗಿದಿಯೇ ಅಥವಾ ಇಲ್ಲವೇ ಎಂಬುದರ ಕುರಿತು ಮೇಲಾಧಿಕಾರಿಗಳ ತಂಡದ ಜೊತೆ ಚರ್ಚೆ ನಡೆಸಲಿದ್ದಾರೆ.
ಅಲ್ಲದೆ ಔಷಧಶಾಸ್ತ್ರದಲ್ಲಿ ಈ ಚಿಕಿತ್ಸೆಯ ಫಲಕಾರಿಯೇ ಎಂಬುದರ ಬಗ್ಗೆಯೂ ತಿಳಿಯಲು ಮುಂದಾಗಲಿದ್ದಾರೆ. ಈಗಾಗಲೇ ಪರಿಶೀಲನೆಗಾಗಿ ರಚಿಸಿರುವ ತಂಡದ ವರದಿಯ ಬಳಿಕ ಔಷಧಿ ವಿತರಣೆ ಕುರಿತಂತೆ ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆ.
ಕಳೆದ ಕೆಲ ವರ್ಷಗಳಿಂದಲೂ ಆನಂದಯ್ಯ ಗಿಡಮೂಲಿಕೆಗಳಿಂದ ತಯಾರಿಸಲ್ಪಟ್ಟ ಆರ್ಯುವೇದ ಔಷಧಿಗಳನ್ನ ನೀಡುತ್ತಾ ಬಂದಿದ್ದಾರೆ. ಇತ್ತೀಚಿಗೆ ಅವರು ಕೋವಿಡ್ಗಾಗಿಯೇ ಆರ್ಯುವೇದ ಔಷಧಿ ಅಭಿವೃದ್ಧಿಡಿಸಿರುವುದಾಗಿ ಹೇಳಿದ್ದರು.
ಶುಂಠಿ, ಬೆಲ್ಲ, ಜೇನುತುಪ್ಪ, ಕರಿ ಜೀರಿಗೆ, ಬಾಲ ಮೆಣಸು, ಲವಂಗ, ಬೇವಿನ ಎಲೆ, ಮಾವಿನ ಎಲೆ, ಆಮ್ಲಾ, ಮುಳ್ಳು ಬದನೆಯಂತಹ ನೈಸರ್ಗಿಕ ವಸ್ತುಗಳ ಬಳಸಿ ಔಷಧಿ ತಯಾರಿಸುವುದಾಗಿ ಹೇಳಿದ್ದರು.