ನವದೆಹಲಿ: ಕೇಂದ್ರಾಡಳಿತ ಪ್ರದೇಶ ಜಮ್ಮು-ಕಾಶ್ಮೀರದಲ್ಲಿನ ಸ್ಥಿತಿ-ಗತಿ ಕುರಿತು ಮಹತ್ವದ ಚರ್ಚೆ ನಡೆಸಲು ಪ್ರಧಾನಿ ನರೇಂದ್ರ ಮೋದಿ ಇಂದು ಸರ್ವಪಕ್ಷ ಸಭೆ ಕರೆದಿದ್ದಾರೆ. ಇದರಲ್ಲಿ ಜಮ್ಮು-ಕಾಶ್ಮೀರದ ವಿವಿಧ ಪಕ್ಷಗಳ 14 ಮುಖಂಡರು ಭಾಗಿಯಾಗುತ್ತಿದ್ದು, ಆರ್ಟಿಕಲ್ 370 ರದ್ದು ಸೇರಿ ಅನೇಕ ವಿಷಯಗಳ ಬಗ್ಗೆ ಚರ್ಚೆ ನಡೆಯುವ ಸಾಧ್ಯತೆ ಇದೆ. ಮಧ್ಯಾಹ್ನ 3 ಗಂಟೆಗೆ ಲೋಕ ಕಲ್ಯಾಣ್ ಮಾರ್ಗದಲ್ಲಿ ಸಭೆ ಆರಂಭಗೊಂಡಿದೆ.
-
Delhi: Congress leaders Ghulam Nabi Azad, Ghulam Ahmad Mir and Tara Chand arrive at 7 Lok Kalyan Marg - Prime Minister's official residence - for the all-party meeting of J&K's political parties called by PM Narendra Modi. pic.twitter.com/wzOHB5uPpO
— ANI (@ANI) June 24, 2021 " class="align-text-top noRightClick twitterSection" data="
">Delhi: Congress leaders Ghulam Nabi Azad, Ghulam Ahmad Mir and Tara Chand arrive at 7 Lok Kalyan Marg - Prime Minister's official residence - for the all-party meeting of J&K's political parties called by PM Narendra Modi. pic.twitter.com/wzOHB5uPpO
— ANI (@ANI) June 24, 2021Delhi: Congress leaders Ghulam Nabi Azad, Ghulam Ahmad Mir and Tara Chand arrive at 7 Lok Kalyan Marg - Prime Minister's official residence - for the all-party meeting of J&K's political parties called by PM Narendra Modi. pic.twitter.com/wzOHB5uPpO
— ANI (@ANI) June 24, 2021
ದೆಹಲಿಯಲ್ಲಿ ಈ ಸಭೆ ನಡೆಯುತ್ತಿದ್ದು, ಇದರಲ್ಲಿ ಪಿಡಿಪಿ, ನ್ಯಾಷನಲ್ ಕಾಂಗ್ರೆಸ್ ಹಾಗೂ ಕಾಂಗ್ರೆಸ್ ಸೇರಿದಂತೆ ವಿವಿಧ ಪಕ್ಷಗಳು ಭಾಗಿಯಾಗಿವೆ. ಎಲ್ಲ ಮುಖಂಡರು ದೆಹಲಿಗೆ ಬಂದಿದ್ದಾರೆ. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿರುವ ಜಮ್ಮು-ಕಾಶ್ಮೀರ ಕಾಂಗ್ರೆಸ್ ಅಧ್ಯಕ್ಷ ಗುಲಾಮ್ ಅಹ್ಮದ್ ಮಿರ್, ಆಗಸ್ಟ್ 2019ರಿಂದ ರಾಜ್ಯದ ಜನರ ಅವಮಾನ ಮಾಡಲಾಗಿದ್ದು, ವಿಭಜನೆ ನಿರ್ಧಾರದಿಂದ ಎಲ್ಲರೂ ಸಂಕಷ್ಟದಲ್ಲಿದ್ದಾರೆ ಎಂದಿದ್ದಾರೆ.
ಜಮ್ಮು-ಕಾಶ್ಮೀರದ ವಿಶೇಷ ಸ್ಥಾನಮಾನ ನೀಡಿರುವ ಆರ್ಟಿಕಲ್ 370 ರದ್ದುಪಡಿಸಿದ ಸುಮಾರು ಎರಡು ವರ್ಷಗಳ ನಂತರ ಸಭೆ ಕರೆಯಲಾಗಿದೆ. 370 ವಿಧಿ ಪುನಃಸ್ಥಾಪನೆ ವಿಚಾರವಾಗಿ ನಾನು ಏನು ಮಾತನಾಡುವುದಿಲ್ಲ. ಆದರೆ ಈ ನಿರ್ಧಾರದಿಂದ ಜನರು ಸಂಕಷ್ಟದಲ್ಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಕರೆದಿರುವ ಸರ್ವಪಕ್ಷ ಸಭೆಗೆ ಯಾವುದೇ ಕಾರ್ಯಸೂಚಿ ಇಲ್ಲ. ಎಲ್ಲ ವಿಷಯಗಳ ಬಗ್ಗೆ ಮುಕ್ತವಾಗಿ ಚರ್ಚೆ ನಡೆಸಬಹುದು ಎಂದು ನಮಗೆ ತಿಳಿಸಲಾಗಿದೆ ಎಂದರು.
-
Delhi: The all-party meeting called by Prime Minister Narendra Modi begins at 7, Lok Kalyan Marg.
— ANI (@ANI) June 24, 2021 " class="align-text-top noRightClick twitterSection" data="
PDP's Mehbooba Mufti, National Conference's Farooq Abdullah, Congress' Ghulam Nabi Azad, and other leaders of Jammu and Kashmir are present at the meet.
">Delhi: The all-party meeting called by Prime Minister Narendra Modi begins at 7, Lok Kalyan Marg.
— ANI (@ANI) June 24, 2021
PDP's Mehbooba Mufti, National Conference's Farooq Abdullah, Congress' Ghulam Nabi Azad, and other leaders of Jammu and Kashmir are present at the meet.Delhi: The all-party meeting called by Prime Minister Narendra Modi begins at 7, Lok Kalyan Marg.
— ANI (@ANI) June 24, 2021
PDP's Mehbooba Mufti, National Conference's Farooq Abdullah, Congress' Ghulam Nabi Azad, and other leaders of Jammu and Kashmir are present at the meet.
ಇದೇ ವೇಳೆ ಮಾತನಾಡಿರುವ ಕಾಶ್ಮೀರ ರಾಷ್ಟ್ರೀಯ ಪ್ಯಾಂಥರ್ಸ್ ಪಕ್ಷದ ಅಧ್ಯಕ್ಷ ಭೀಮ್ ಸಿಂಗ್, ಜಮ್ಮು-ಕಾಶ್ಮೀರ ಪುನಃಸ್ಥಾಪಿಸಬೇಕು. ಆಹ್ವಾನ ನೀಡಿರುವುದಕ್ಕಾಗಿ ಇಲ್ಲಿಗೆ ಬಂದಿದ್ದೇನೆ ಎಂದರು.
ಜಮ್ಮು-ಕಾಶ್ಮೀರಕ್ಕೆ ನೀಡಲಾಗಿದ್ದ ಆರ್ಟಿಕಲ್ 370ನೇ ವಿಧಿ ರದ್ದು ಮಾಡಿದ ಬಳಿಕ ಎರಡು ಕೇಂದ್ರಾಡಳಿತ ಪ್ರದೇಶಗಳನ್ನಾಗಿ ವಿಂಗಡನೆ ಮಾಡಲಾಗಿದೆ.
ಇಂದಿನ ಸರ್ವಪಕ್ಷ ಸಭೆಯಲ್ಲಿ ಜಮ್ಮು-ಕಾಶ್ಮೀರದ ನಾಲ್ವರು ಮಾಜಿ ಮುಖ್ಯಮಂತ್ರಿಗಳು ಸೇರಿದಂತೆ 14 ಮುಖಂಡರು ಹಾಗೂ ರಾಜ್ಯಪಾಲ ಮನೋಜ್ ಸಿನ್ಹಾ ಹಾಗೂ ಕಾಂಗ್ರೆಸ್ನ ಗುಲಾಂ ನಬಿ ಆಜಾದ್ ಸೇರಿದಂತೆ ಅನೇಕರು ಭಾಗಿಯಾಗಿದ್ದಾರೆ.