ಬಾಲಸೋರ್ (ಒಡಿಶಾ): ಬಾಲಸೋರ್‌ನಲ್ಲಿ ನಿನ್ನೆ ಸಂಜೆ 7 ಗಂಟೆ ಸುಮಾರಿಗೆ ಸಂಭವಿಸಿದ ಭೀಕರ ರೈಲು ಅಪಘಾತದಲ್ಲಿ 238 ಜನರು ಸಾವನ್ನಪ್ಪಿದ್ದಾರೆ. ಈ ಘಟನೆಯಲ್ಲಿ 900 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ಹಂಚಿಕೊಂಡಿದ್ದಾರೆ. ಬಾಲಸೋರ್‌ನ ಸ್ಥಳೀಯರು ಗಾಯಾಳುಗಳಿಗೆ ಸಹಾಯ ಮಾಡಲು ಮುಂದೆ ಬರುತ್ತಿದ್ದಾರೆ.
-
#WATCH | "Our 6 teams are working here since last night. Our dog squad, and medical team are also engaged in the rescue operation," says Jacob Kispotta, Senior Commandant, NDRF#BalasoreTrainAccident pic.twitter.com/Sjuep3ZLeq
— ANI (@ANI) June 3, 2023 " class="align-text-top noRightClick twitterSection" data="
">#WATCH | "Our 6 teams are working here since last night. Our dog squad, and medical team are also engaged in the rescue operation," says Jacob Kispotta, Senior Commandant, NDRF#BalasoreTrainAccident pic.twitter.com/Sjuep3ZLeq
— ANI (@ANI) June 3, 2023#WATCH | "Our 6 teams are working here since last night. Our dog squad, and medical team are also engaged in the rescue operation," says Jacob Kispotta, Senior Commandant, NDRF#BalasoreTrainAccident pic.twitter.com/Sjuep3ZLeq
— ANI (@ANI) June 3, 2023
ಮಾನವೀಯತೆ ಮೆರೆದ ಸ್ಥಳೀಯರು: ಗಾಯಗೊಂಡ ಜನರನ್ನು ಸ್ಥಳೀಯ ಆಸ್ಪತ್ರೆಗಳಿಗೆ ದಾಖಲಿಸಿ ಸೂಕ್ತ ಚಿಕಿತ್ಸೆ ಕೊಡಲಾಗುತ್ತಿದೆ. ಸದ್ಯ 900 ಕ್ಕೂ ಹೆಚ್ಚು ಜನರು ಗಾಯಗೊಂಡಿರುವುದಾಗಿ ತಿಳಿದು ಬಂದಿದೆ. ಸ್ಥಳೀಯರು ಆಸ್ಪತ್ರೆಯ ಹೊರಗೆ ಸರತಿ ಸಾಲಿನಲ್ಲಿ ನಿಂತು ರಕ್ತದಾನ ಮಾಡುತ್ತಿದ್ದಾರೆ.
-
#WATCH | "We are continuously engaged (in rescue operations) since last night. More columns (of army) are coming from Kolkata," says Colonel SK Dutta, Indian Army #OdishaTrainAccident pic.twitter.com/SEXzxsonv2
— ANI (@ANI) June 3, 2023 " class="align-text-top noRightClick twitterSection" data="
">#WATCH | "We are continuously engaged (in rescue operations) since last night. More columns (of army) are coming from Kolkata," says Colonel SK Dutta, Indian Army #OdishaTrainAccident pic.twitter.com/SEXzxsonv2
— ANI (@ANI) June 3, 2023#WATCH | "We are continuously engaged (in rescue operations) since last night. More columns (of army) are coming from Kolkata," says Colonel SK Dutta, Indian Army #OdishaTrainAccident pic.twitter.com/SEXzxsonv2
— ANI (@ANI) June 3, 2023
ಶನಿವಾರ ರಾತ್ರಿಯಿಂದ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಕೋಲ್ಕತ್ತಾದಿಂದ ಹೆಚ್ಚಿನ ಸೇನಾ ಸಿಬ್ಬಂದಿ ಆಗಮಿಸಲಿದ್ದಾರೆ ಎಂದು ಭಾರತೀಯ ಸೇನೆಯ ಕರ್ನಲ್ ಎಸ್ ಕೆ ದತ್ತಾ ತಿಳಿಸಿದ್ದಾರೆ. ಕಳೆದ ರಾತ್ರಿಯಿಂದ ನಾವು ನಿರಂತರವಾಗಿ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿದ್ದೇವೆ ಎಂದು ಎಸ್ ಕೆ ದತ್ತಾ ಮಾಹಿತಿ ಹಂಚಿಕೊಂಡಿದ್ದಾರೆ. ಕೋಲ್ಕತ್ತಾದಿಂದ ಹೆಚ್ಚಿನ ಸೇನಾ ಸಿಬ್ಬಂದಿ ಬರುತ್ತಿದ್ದಾರೆ.
ಬೆಳಗ್ಗಿನ ಮಾಹಿತಿ ಪ್ರಕಾರ, ಒಟ್ಟು 200 ಆಂಬ್ಯುಲೆನ್ಸ್‌ಗಳು ರಕ್ಷಣಾ ಕಾರ್ಯದಲ್ಲಿ ನಿರತವಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇವುಗಳಲ್ಲಿ 20 ಕ್ಕೂ ಹೆಚ್ಚು ಸರ್ಕಾರಿ ಆಂಬ್ಯುಲೆನ್ಸ್‌ಗಳಿವೆ. ಇವರಲ್ಲದೇ 45 ಸಂಚಾರಿ ಆರೋಗ್ಯ ತಂಡಗಳನ್ನು ಸ್ಥಳದಲ್ಲಿ ನಿಯೋಜಿಸಲಾಗಿದೆ. ಎಸ್‌ಸಿಬಿಯ 25 ವೈದ್ಯರ ತಂಡದೊಂದಿಗೆ 50 ಹೆಚ್ಚುವರಿ ವೈದ್ಯರನ್ನೂ ನಿಯೋಜಿಸಲಾಗಿದೆ. ಅಧಿಕಾರಿಗಳ ಪ್ರಕಾರ, ಮೃತದೇಹದ ವಿಲೇವಾರಿ ಮೇಲ್ವಿಚಾರಣೆಗೆ PRM MCH, Baripada ಮತ್ತು SCB MCH ನಿಂದ ವಿಧಿವಿಜ್ಞಾನ ಔಷಧ ತಜ್ಞರು (FMTs) ನಿಯೋಜಿಸಲಾಗಿದೆ.
-
#WATCH | Latest visuals from the site of the deadly train accident in Odisha's Balasore. Rescue operations underway
— ANI (@ANI) June 3, 2023 " class="align-text-top noRightClick twitterSection" data="
The current death toll stands at 233 pic.twitter.com/H1aMrr3zxR
">#WATCH | Latest visuals from the site of the deadly train accident in Odisha's Balasore. Rescue operations underway
— ANI (@ANI) June 3, 2023
The current death toll stands at 233 pic.twitter.com/H1aMrr3zxR#WATCH | Latest visuals from the site of the deadly train accident in Odisha's Balasore. Rescue operations underway
— ANI (@ANI) June 3, 2023
The current death toll stands at 233 pic.twitter.com/H1aMrr3zxR
ಆರೋಗ್ಯ ಸೇವೆಗಳ ನಿರ್ದೇಶಕರು, ರಕ್ತದಾನ ವಿಭಾಗದ ನಿರ್ದೇಶಕರು, ಹೆಚ್ಚುವರಿ ಡಿಎಂಈಟಿ ಮತ್ತು ಇತರ ಮೂವರು ಹೆಚ್ಚುವರಿ ನಿರ್ದೇಶಕರು ಬಾಲಸೋರ್‌ನಲ್ಲಿದ್ದಾರೆ ಮತ್ತು ಆರೋಗ್ಯ ತಂಡಗಳೊಂದಿಗೆ ಸಂಪರ್ಕದಲ್ಲಿದ್ದಾರೆ. ಕಳೆದ ರಾತ್ರಿಯಿಂದ ಆರು ತಂಡಗಳು ಕಾರ್ಯನಿರ್ವಹಿಸುತ್ತಿವೆ ಎಂದು ಎನ್‌ಡಿಆರ್‌ಎಫ್‌ನ ಹಿರಿಯ ಕಮಾಂಡೆಂಟ್ ತಿಳಿಸಿದ್ದಾರೆ. ಕಳೆದ ರಾತ್ರಿಯಿಂದ ನಮ್ಮ 6 ತಂಡಗಳು ಇಲ್ಲಿ ಕಾರ್ಯನಿರ್ವಹಿಸುತ್ತಿವೆ ಎಂದು ಎನ್‌ಡಿಆರ್‌ಎಫ್ ಹಿರಿಯ ಕಮಾಂಡೆಂಟ್ ಜಾಕೋಬ್ ಕಿಸ್ಪೊಟ್ಟಾ ಮಾಹಿತಿ ನೀಡಿದ್ದಾರೆ. ಅಲ್ಲದೇ ನಮ್ಮ ಶ್ವಾನದಳ ಮತ್ತು ವೈದ್ಯಕೀಯ ತಂಡ ಕೂಡ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಒಡಿಶಾದಲ್ಲಿ ಭೀಕರ ರೈಲು ಅಪಘಾತ: ಮೃತರ ಸಂಖ್ಯೆ 278ಕ್ಕೆ ಏರಿಕೆ, 900 ಮಂದಿಗೆ ಗಾಯ
ಪರಿಹಾರ ಘೋಷಣೆ: ಪ್ರಧಾನಿ ನರೇಂದ್ರ ಮೋದಿ ಅವರೂ ಸೇರಿದಂತೆ ಅನೇಕ ರಾಜಕಾರಣಿಗಳು, ಗಣ್ಯರು ಘಟನೆ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಪ್ರಧಾನಿ ಧನ ಪರಿಹಾರ ನಿಧಿಯಿಂದ ತಲಾ 2 ಲಕ್ಷ ರೂ ಪರಿಹಾರವನ್ನು ಪಿಎಂ ನರೇಂದ್ರ ಮೋದಿ ಘೋಷಣೆ ಮಾಡಿದ್ದಾರೆ.
ಇದನ್ನೂ ಓದಿ: ಘನಘೋರ ರೈಲು ದುರಂತ: ರೈಲ್ವೆ ಸಚಿವರ ರಾಜೀನಾಮೆಗೆ ಒತ್ತಾಯ, ಉನ್ನತ ಮಟ್ಟದ ತನಿಖೆಗೆ ಆದೇಶ