ETV Bharat / bharat

ವಿಡಿಯೋ: ಪಲ್ಟಿಯಾದ ಟ್ರಕ್‌ನಿಂದ ಮೇಕೆ ಹೊತ್ತೊಯ್ಯಲು ಮುಗಿಬಿದ್ದ ಜನ - ಮೇಕೆ ತುಂಬಿದ ಟ್ರಕ್​ ಪಲ್ಟಿ

ಮೇಕೆ ಹೊತ್ತೊಯ್ಯುತ್ತಿದ್ದ ಟ್ರಕ್ ಪಲ್ಟಿಯಾದ ಸುದ್ದಿ ತಿಳಿದು ಘಟನಾ ಸ್ಥಳಕ್ಕೆ ಧಾವಿಸಿದ ಗ್ರಾಮಸ್ಥರು ಅನೇಕ ಮೇಕೆಗಳನ್ನು ಹೊತ್ತೊಯ್ದಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆಯಿತು.

Truck full of goats overturns in Vidisha

author img

By

Published : Jan 5, 2022, 8:30 PM IST

ವಿದಿಶಾ(ಮಧ್ಯಪ್ರದೇಶ): ನೂರಾರು ಮೇಕೆಗಳನ್ನು ತುಂಬಿಕೊಂಡು ಹೋಗುತ್ತಿದ್ದ ಟ್ರಕ್​ ಪಲ್ಟಿಯಾಗಿ ಚಾಲಕ​​ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಈ ವೇಳೆ ಜನರು ವಾಹನದಲ್ಲಿದ್ದ ಮೇಕೆ ಮರಿಗಳನ್ನು ಕದ್ದೊಯ್ದಿದ್ದಾರೆ. ಮಧ್ಯಪ್ರದೇಶದ ಸಿರೊಂಜ್​​ನ ಕಂಕರಖೇಡಿಯಲ್ಲಿ ಈ ಘಟನೆ ನಡೆದಿದೆ.

ಮೇಕೆ ತುಂಬಿರುವ ಟ್ರಕ್​ ನಿಯಂತ್ರಣ ಕಳೆದುಕೊಂಡು ಪಲ್ಟಿಯಾಗುತ್ತಿದ್ದಂತೆ ಪಕ್ಕದ ಗ್ರಾಮದ ಜನರು ಬೈಕ್‌ಗಳಲ್ಲಿ​ ಬಂದು ಮೇಕೆ ಹೊತ್ತುಕೊಂಡು ಹೋಗಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸರು ಬಂದ್ರೂ ಕೂಡ ಜನರು ತಲೆಕೆಡಿಸಿಕೊಂಡಿಲ್ಲ.

ಇದನ್ನೂ ಓದಿ: ನೋಡಿ: ಜಾನ್ಸೆನ್‌ ಬೌನ್ಸರ್‌ಗೆ​ ತಾಳ್ಮೆ ಕಳೆದುಕೊಂಡ ಬುಮ್ರಾ

ಟ್ರಕ್ ಪಲ್ಟಿಯಾಗಿದ್ದ ಸಂದರ್ಭದಲ್ಲಿ ಅದರಡಿ ಚಾಲಕ​ ಸಚಿನ್ ಖತಿಕ್ ಸಿಲುಕಿಕೊಂಡು ನರಳಾಡುತ್ತಿದ್ದ. ಈ ವೇಳೆ ಅಲ್ಲಿದ್ದ ಜನರು ಆತನ ಪ್ರಾಣ ಉಳಿಸುವ ಗೋಜಿಗೆ ಹೋಗಲಿಲ್ಲ. ಬದಲಿಗೆ ಮೇಕೆ ಕದ್ದೊ​ಯ್ಯುವ ಕೆಲಸದಲ್ಲೇ ಬ್ಯುಸಿಯಾಗಿದ್ದರು. ಪರಿಣಾಮ, ಸಕಾಲದಲ್ಲಿ ಚಿಕಿತ್ಸೆ ಸಿಗದೆ ಚಾಲಕ ಸ್ಥಳದಲ್ಲೇ ಕೊನೆಯುಸಿರೆಳೆದ.

ಸುಮಾರು 100ಕ್ಕೂ ಅಧಿಕ ಮೇಕೆಗಳನ್ನು ತುಂಬಿಕೊಂಡಿದ್ದ ಟ್ರಕ್​ ಮಧ್ಯಪ್ರದೇಶದ ಶಿವಪುರಿಯಿಂದ ಹೈದರಾಬಾದ್​ಗೆ ತೆರಳುತ್ತಿತ್ತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.