ETV Bharat / bharat

ಅಯೋಧ್ಯಾ ರಾಮಮಂದಿರ: ಕರಸೇವಕಪುರಂನಲ್ಲಿ ಮತ್ತೆ ಪ್ರತಿಧ್ವನಿಸುತ್ತಿರುವ ಉಳಿ, ಸುತ್ತಿಗೆಯ ಸದ್ದು

author img

By

Published : Sep 3, 2021, 6:58 AM IST

ಅಯೋಧ್ಯೆಯ ರಾಮಜನ್ಮಭೂಮಿಯಲ್ಲಿ ಶ್ರೀರಾಮನ ಸುಂದರ ದೇವಾಲಯ ನಿರ್ಮಾಣ ಕಾರ್ಯ ಭರದಿಂದ ಸಾಗುತ್ತಿದ್ದು, ಕರಸೇವಕಪುರಂ ಸಂಕೀರ್ಣದಲ್ಲಿ ಮತ್ತೊಮ್ಮೆ ಉಳಿ, ಸುತ್ತಿಗೆಯ ಸದ್ದು ಪ್ರತಿಧ್ವನಿಸತೊಡಗಿದೆ.

ಅಯೋಧ್ಯೆ ರಾಮಮಂದಿರ
ಅಯೋಧ್ಯೆ ರಾಮಮಂದಿರ

ಅಯೋಧ್ಯಾ( ಉತ್ತರಪ್ರದೇಶ): ಕೋಟ್ಯಂತರ ಭಕ್ತರ ಹಲವು ವರ್ಷಗಳ ಕನಸು ಈಡೇರಿದೆ. ರಾಮಮಂದಿರ ನಿರ್ಮಾಣ ಕಾರ್ಯ ತ್ವರಿತಗತಿಯಲ್ಲಿ ಸಾಗುತ್ತಿದ್ದು ಮತ್ತೊಮ್ಮೆ ಉಳಿ, ಸುತ್ತಿಗೆಯ ಸದ್ದು ಕರಸೇವಕಪುರಂ ಸಂಕೀರ್ಣದಲ್ಲಿ ಪ್ರತಿಧ್ವನಿಸತೊಡಗಿದೆ.

ರಾಮಮಂದಿರದ ಕಲ್ಲುಗಳು
ರಾಮಮಂದಿರದ ಕಲ್ಲುಗಳು

ಸುಮಾರು 3 ದಶಕಗಳ ಹಿಂದೆ ಅಯೋಧ್ಯೆಯಲ್ಲಿ ರಾಮಮಂದಿರ ಕೆಡವಲಾಯಿತು. ಅದೇ ಸಮಯದಲ್ಲಿ ಭವ್ಯವಾದ ರಾಮ ಮಂದಿರ ನಿರ್ಮಾಣಕ್ಕಾಗಿ ರಾಮ್ ನಗರಿಯ ಕರಸೇವಕಪುರಂ ಸಂಕೀರ್ಣದಲ್ಲಿ ಕಲ್ಲಿನ ಕೆತ್ತನೆ ಕಾರ್ಯವನ್ನು ಮರು ಆರಂಭಿಸಲಾಯಿತು. ಸುಮಾರು 15 ವರ್ಷಗಳ ಕಾಲ ಕಲ್ಲುಗಳ ನಿರಂತರ ಕೆತ್ತನೆ ಕಾರ್ಯ ಮುಂದುವರೆದಿತ್ತು.

ನಂತರ ಈ ಕೆಲಸ ನಿಂತುಹೋಗಿತ್ತು. ಆದರೆ ಇದೀಗ ರಾಮ ಜನ್ಮಭೂಮಿ ಸಂಕೀರ್ಣದಲ್ಲಿ ರಾಮಮಂದಿರ ನಿರ್ಮಾಣ ಕಾರ್ಯ ತ್ವರಿತಗತಿಯಲ್ಲಿ ಆರಂಭವಾಗುತ್ತಿದ್ದಂತೆ, ಮತ್ತೊಮ್ಮೆ ಉಳಿ ಸುತ್ತಿಗೆಯ ಸದ್ದು ಕರಸೇವಕ ಪುರಂ ಸಂಕೀರ್ಣದಲ್ಲಿ ಪ್ರತಿಧ್ವನಿಸತೊಡಗಿದೆ. ಮಂದಿರ ನಿರ್ಮಾಣದಲ್ಲಿ ಬಳಸಿದ ಕಲ್ಲುಗಳನ್ನು ಕೆತ್ತುವ ಕೆಲಸ ಮತ್ತೆ ಆರಂಭವಾಗಿದೆ.

ಅಯೋಧ್ಯೆ ರಾಮಮಂದಿರ ನಿರ್ಮಾಣಕಾರ್ಯದ ಕುರಿತು ಮಾಹಿತಿ ನೀಡಿದ ಪ್ರಕಾಶ್​ ಗುಪ್ತ

ಇಲ್ಲಿಯವರೆಗೆ ರಾಮ ಮಂದಿರ ನಿರ್ಮಾಣಕ್ಕಾಗಿ ಸುಮಾರು 20 ಪ್ರತಿಶತ ಕಲ್ಲಿನ ಕೆತ್ತನೆ ಕೆಲಸ ನಡೆದಿದೆ. ಇನ್ನೂ ಸುಮಾರು 80 ಪ್ರತಿಶತ ಕೆಲಸ ಬಾಕಿ ಇದ್ದು, ಇದನ್ನು ಡಿಸೆಂಬರ್ 2023 ರೊಳಗೆ ನಿಗದಿತ ಕಾಲಮಿತಿಯಲ್ಲಿ ಪೂರ್ಣಗೊಳಿಸಬೇಕು ಎಂಬ ಸೂಚನೆ ನೀಡಲಾಗಿದೆ. ಇದಕ್ಕಾಗಿ, ಅಯೋಧ್ಯೆಯ ಕರಸೇವಕ ಪುರಂ ಕಾರ್ಯಾಗಾರದಲ್ಲಿ ಕೆಲಸದ ವೇಗವನ್ನು ಹೆಚ್ಚಿಸಲಾಗಿದೆ.

ಅಯೋಧ್ಯೆ ರಾಮಮಂದಿರ
ಅಯೋಧ್ಯೆಯ ರಾಮಮಂದಿರದ ನೀಲನಕ್ಷೆ

ಇನ್ನು ಅಯೋಧ್ಯೆಯ ಸಂತರು ದೇವಾಲಯದ ಮೇಲ್ಭಾಗವನ್ನು ಎತ್ತರಕ್ಕೆ ಏರಿಸಬೇಕು ಎಂಬ ಬೇಡಿಕೆ ಇಟ್ಟಿದ್ದಾರೆ. ಈ ದೃಷ್ಟಿಯಿಂದ ದೇವಾಲಯದ ಮಾದರಿಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಲಾಗಿದೆ. ಈಗಾಗಲೇ ದೇವಾಲಯದ ನೀಲನಕ್ಷೆ ಗಾತ್ರ ಮತ್ತು ವಿನ್ಯಾಸದಲ್ಲಿ ಮಾರ್ಪಾಡು ಮಾಡಲಾಗಿದೆ.

ಅಯೋಧ್ಯೆಯ ಪ್ರಸ್ತಾವಿತ ರಾಮ ದೇವಾಲಯವು ವಿಶ್ವದ ಅತಿದೊಡ್ಡ ಹಿಂದೂ ದೇವಾಲಯಗಳಲ್ಲಿ ಒಂದೆನಿಸಲಿದೆ. ಸ್ತಂಭದ ಕೆಲಸ ಶೀಘ್ರವಾಗಿ ಪೂರ್ಣಗೊಳ್ಳಲಿದೆ. ರಾಜಸ್ಥಾನದ 15 ಕುಶಲಕರ್ಮಿಗಳನ್ನು ಹೆಚ್ಚುವರಿಯಾಗಿ ಕಲ್ಲುಕೆತ್ತನೆ ಕೆಲಸಕ್ಕೆ ತೆಗೆದುಕೊಳ್ಳಲಾಗಿದೆ. ಗುಜರಾತಿನಿಂದ ಕೂಡ ಕುಶಲಕರ್ಮಿಗಳನ್ನು ಕರೆತರಲಾಗಿದೆ. ಅಗತ್ಯಕ್ಕೆ ತಕ್ಕಂತೆ ಕುಶಲಕರ್ಮಿಗಳ ಸಂಖ್ಯೆಯನ್ನು ಇನ್ನಷ್ಟು ಹೆಚ್ಚಿಸಲಾಗುತ್ತದೆ ಎಂದು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ತಿಳಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.